Actor Chethan: ದರ್ಶನ್ ಲೈಟ್ ಬಾಯ್ ಆಗಿರ್ಲಿಲ್ಲ, ಮೋದಿ ಚಹಾ ಮಾರಿಲ್ಲ, ಸಿದ್ಧು ಅಹಿಂದಾ ನಾಯಕನಲ್ಲ; ನಟ ಚೇತನ್

Written by Soma Shekar

Published on:

---Join Our Channel---

Actor Chethan: ಸಾಮಾಜಿಕ ಹೋರಾಟಗಾರ ಹಾಗೂ ನಟನಾಗಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟ ಚೇತನ್ ಅಹಿಂಸಾ ?Actor Chethan) ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿರುವ ಸಿನಿಮಾ ಸೆಲೆಬ್ರಿಟಿಯಾಗಿದ್ದಾರೆ. ಪ್ರಸ್ತುತ ವಿದ್ಯಮಾನಗಳು, ಬೆಳವಣಿಗೆಗಳು ಹಾಗೂ ಹಲವು ಸೂಕ್ಷ್ಮ ವಿಚಾರಗಳ ಕುರಿತಾಗಿ ಯಾವುದೇ ರೀತಿಯ ಹಿಂಜರಿಕೆ ಇಲ್ಲದೇ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಅವರು ಮುಕ್ತವಾಗಿ ಹಂಚಿಕೊಂಡು ಒಂದಿಷ್ಟು ಪರ ಮತ್ತು ವಿರೋಧ ಚರ್ಚೆಗಳಿಗೆ ಕಾರಣವಾಗುತ್ತಾರೆ.

ನಟ ದರ್ಶನ್ (Darshan) ತಾವು ಹಿಂದೊಮ್ಮೆ ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದೆ ಎಂದು ಹೇಳಿಕೊಂಡಿದ್ದ ವಿಚಾರವಾಗಿ ಚೇತನ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು ದರ್ಶನ್ ಲೈಟ್ ಬಾಯ್ ಆಗಿರಲಿಲ್ಲ ಅಂತ ಹೇಳಿದ್ದಾರೆ.ಕನ್ನಡ ಚಲನಚಿತ್ರ ಉದ್ಯಮದ ಮೂಲಗಳು ನಟ ದರ್ಶನ್ ಹೇಳಿಕೊಂಡಂತೆ ಲೈಟ್ ಬಾಯ್ ಆಗಿರಲಿಲ್ಲ ಆದರೆ ಛಾಯಾಗ್ರಹಕನ ಸಹಾಯಕರಾಗಿದ್ದರು.

ಇದು ಚಲನಚಿತ್ರದ ಪರಿಭಾಷೆಯಲ್ಲಿ ದೊಡ್ಡ ವ್ಯತ್ಯಾಸವಾಗಿದೆ. ಉನ್ನತ ಮಟ್ಟಕ್ಕೆ ಬೆಳೆದಿರುವ ವ್ಯಕ್ತಿಗಳಿಗೆ ಇಂತಹ ದೋಷ ಪೂರಿತ ಉತ್ಪ್ರೇಕ್ಷಗಳೇನು ಹೊಸದಲ್ಲ. ಅದೇ ರೀತಿ ಮೋದಿ (Modi) ಎಂದಿಗೂ ಚಹಾ ಮಾರಾಟ ಮಾಡಿಲ್ಲ ಮತ್ತು ಸಿಎಂ ಸಿದ್ದು (Siddaramaiah) ಎಂದು ಕೂಡಾ ಅಹಿಂದಾದ ನಾಯಕನಾಗಿಲ್ಲ ಇಂತಹ ಆಧಾರ ರಹಿತ ಬಿಲ್ಡಪ್ ತಗ್ಗಿಸಬೇಕು ಎಂದು ಅವರ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಚೇತನ್ ಅವರ ಈ ಪೋಸ್ಟಿಗೆ ಎಂದಿನಂತೆ ಪರ ವಿರೋಧ ಮಾತುಗಳು ಕಾಮೆಂಟ್ ಗಳಲ್ಲಿ ಹರಿದು ಬಂದಿದೆ. ಕಮೆಂಟ್ ಮಾಡಿದವರು ಸಿದ್ಧರಾಮನಯ್ಯ ಅವರ ಬಗ್ಗೆ ಮಾತಾಡೋ ಯೋಗ್ಯತೆ ನಿನಗಿಲ್ಲ ಅನ್ಸುತ್ತೆ ಎಂದರೆ, ಮತ್ತೊಬ್ಬರು ಸಿದ್ದು ಎಂದೆಂದಿಗೂ ಅಹಿಂದ ನಾಯಕನೇ ಎಂದು ಕಾಮೆಂಟ್ ಮಾಡಿದ್ದಾರೆ ಇನ್ನು ಕೆಲವರು ತಿಳಿಸಿದ್ದರಾಮಯ್ಯ ಹೆಸರು ಯಾಕೆ ಬಂತು ಅಂತ ಕೂಡಾ ಪ್ರಶ್ನೆ ಮಾಡಿದ್ದಾರೆ.

Leave a Comment