Pratham: ರಾಜ್ಯದ ಮಗಳು ಮೃತಳಾಗಿದ್ರೂ ನೀವ್ಯಾಕೆ ದನಿ ಎತ್ತುತ್ತಿಲ್ಲ; ಪ್ರಕಾಶ್ ರಾಜ್, ಚೇತನ್ ಗೆ ಪ್ರಥಮ್ ಪ್ರಶ್ನೆ

Written by Soma Shekar

Published on:

---Join Our Channel---

Pratham: ಹುಬ್ಬಳ್ಳಿಯಲ್ಲಿ ನಡೆದಂತಹ ನೇಹಾ ಹಿರೇಮಠ (Neha Hiremath) ಹ ತ್ಯೆಯ ಘಟನೆಯ ನಂತರ ಇಡೀ ರಾಜ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಹುಬ್ಬಳ್ಳಿಯಲ್ಲಿರುವ ನೇಹಾ ಅವರ ಮನೆಗೆ ಬಿಗ್ ಬಾಸ್ ಸೀಸನ್ ನಾಲ್ಕರ ವಿನ್ನರ್ (Bigg Boss 4) ಆದಂತಹ ನಟ ಪ್ರಥಮ್ (Pratham) ಅವರು ಭೇಟಿ ನೀಡಿದ್ದು, ಈ ವೇಳೆ ಅವರು ನೇಹಾ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನವನ್ನು ನೀಡುವ ಕೆಲಸವನ್ನು ಮಾಡಿದ್ದಾರೆ. ಇದೇ ವೇಳೆ ಅವರು ನಟ ಪ್ರಕಾಶ್ ರಾಜ್ , ಚೇತನ್ ಅಹಿಂಸಾ ಅವರ ಬಗ್ಗೆ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ನೇಹಾ ಅವರ ಪೋಷಕರನ್ನು ಇಂದು ಭೇಟಿ ಮಾಡಿದ ಪ್ರಥಮ್ ಅವರು ಅವರಿಗೆ ಸಮಾಧಾನದ ಮಾತುಗಳನ್ನು ಹೇಳಿದ್ದಾರೆ. ನೇಹಾ ಹ ತ್ಯೆ ಮಾಡಿದವನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಪ್ರಥಮ್ ಅವರು ಮಾತನಾಡಿದ್ದಾರೆ. ಪ್ರಥಮ್ ಅವರು ನೇಹಾ ಮತ್ತು ಫಯಾಜ್ ಫೋಟೋವನ್ನು ಹಾಕಿ ಜಸ್ಟಿಸ್ ಫಾರ್ ಲವ್ ಅಡಿಬರಹ ನೀಡಿದ್ದ ವೈರಲ್ ವಿಡಿಯೋ ಬಗ್ಗೆ ಮಾತನಾಡಿದ್ದು, ನ್ಯಾಯ ಸಿಗಬೇಕಾಗಿರೋದು ನೇಹಾ ಕುಟುಂಬಕ್ಕೆ ಎನ್ನುವ ಮಾತನ್ನ ಹೇಳಿದ್ದಾರೆ.

ಜಸ್ಟಿಸ್ ಫಾರ್ ಲವ್ ಅಂದ್ರೇನು ಅವರಿಗೆ ಭಾರತ ರತ್ನ ಕೊಡಬೇಕಾ ಎಂದು ಪ್ರಥಮ್ ಸಿಟ್ಟಾಗಿದ್ದಾರೆ.
ಈ ವೇಳೆ ಅವರು ಎಲ್ಲಾ ವಿಚಾರಗಳಿಗೂ ನರೇಂದ್ರ ಮೋದಿ ಅವರನ್ನೇ ಪ್ರಶ್ನೆ ಮಾಡ್ತೀರಾ? ಈಗ ಇಲ್ಲಿ ರಾಜ್ಯದ ಮಗಳು ನೇಹಾ ಮೃತಪಟ್ಟಿದ್ದಾರೆ. ನೀವು ಯಾಕೆ ಧ್ವನಿ ಎತ್ತುತ್ತಿಲ್ಲ ಎಂಬುದಾಗಿ ನಟ ಪ್ರಕಾಶ್ ರಾಜ್ (Prakash Raj) ಮತ್ತು ಚೇತನ್‌ (Chethan Ahimsa) ಇಬ್ಬರನ್ನೂ ಸಹಾ ಪ್ರಥಮ್ ಪ್ರಶ್ನೆ ಮಾಡಿದ್ದಾರೆ.‌

ಬರೀ ಹೆಸರಿನಲ್ಲಿ ಅಹಿಂಸಾ ಅಂತ ಇಟ್ಟುಕೊಂಡ್ರೆ ಆಗಲ್ಲ, ಇಂತಹ ಘಟನೆ ನಡೆದಾಗ ಅದನ್ನ ಖಂಡನೆ ಮಾಡಬೇಕು ಅಂತ ಚೇತನ್ ಅಹಿಂಸಾ ಅವರಿಗೆ ಕುಟುಕಿದ್ದಾರೆ ಪ್ರಥಮ್. ಅಲ್ಲದೇ ಮೊದಲು ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಮಾತನಾಡೋದನ್ನ ಬಿಡಿ ಅಂತ ಸಹಾ ಬುದ್ಧಿ ಮಾತನ್ನು ಹೇಳಿದ್ದಾರೆ.

Leave a Comment