Vijay Devarakonda: ಕೈಕೊಟ್ಟ ಅದೃಷ್ಟ, ಸತತ ಸೋಲಿನ ಸುಳಿಯಲ್ಲಿ ವಿಜಯ ದೇವರಕೊಂಡ; ಮುಂದೇನು?

Written by Soma Shekar

Updated on:

---Join Our Channel---

Vijay Devarakonda: ಸಿನಿಮಾ ರಂಗದಲ್ಲಿ ಅದೃಷ್ಟ ಅನ್ನೋದು ಯಾವಾಗ ಹೇಗೆ ಬದಲಾಗುತ್ತೆ ಅನ್ನೋದನ್ನ ಯಾರೊಬ್ಬರೂ ನಿರೀಕ್ಷೆ ಮಾಡೋದಕ್ಕೆ ಸಾಧ್ಯವಿಲ್ಲ. ಕೆಲವು ನಟ ನಟಿಯರು ಒಂದೇ ಒಂದು ಸಿನಿಮಾದ ಮೂಲಕವೇ ರಾತ್ರೋರಾತ್ರಿ ಸ್ಟಾರ್ ಗಳಾಗಿ ಬಿಟ್ಟರೆ, ನಂತರ ಅವರು ನಟಿಸುವ ಸಿನಿಮಾಗಳಲ್ಲಿ ಅಂತಹ ಗೆಲುವನ್ನು ಪಡೆದುಕೊಳ್ಳುವುದು ಕಷ್ಟ ಸಾಧ್ಯವಾಗಿ ಕೇವಲ ಒಂದೇ ಸಿನಿಮಾದ ಮೂಲಕವೇ ಅವರು ಗುರುತಿಸಲ್ಪಡುತ್ತಾರೆ. ಆದರೆ ಅದೃಷ್ಟ ಒಲಿದು ಬಂದವರು ಮಾತ್ರ ಒಂದರ ನಂತರ ಮತ್ತೊಂದು ಎನ್ನುವಂತೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಸ್ಟಾರ್ ನಟರಾಗಿ ಬೆಳೆದು ಬಿಡುತ್ತಾರೆ.

ಪ್ರಸ್ತುತ ತೆಲುಗು ಸಿನಿಮಾ ರಂಗದಲ್ಲಿ ಯುವ ಸ್ಟಾರ್ ನಟ ವಿಜಯ ದೇವರಕೊಂಡ (Vijay Devarakonda) ಅವರಿಗೆ ಅದೃಷ್ಟ ಕೈ ಕೊಟ್ಟ ಹಾಗೆ ಕಾಣುತ್ತಿದೆ. ಅರ್ಜುನ್ ರೆಡ್ಡಿ (Arjun Reddy) ಸಿನಿಮಾ ವಿಜಯ ದೇವರಕೊಂಡ ಪಾಲಿಗೆ ದೊಡ್ಡ ಮೈಲಿಗಲ್ಲಿನ ಚಿತ್ರವಾಗಿತ್ತು. ಆ ಸಿನಿಮಾ ನಂತರ ವಿಜಯ ದೇವರಕೊಂಡ ಸಿನಿಮಾ ಅಂದ್ರೆ ಯುವಕ ಯುವತಿಯರಿಗೆ ಫೇವರಿಟ್ ಆಗಿತ್ತು.. ಇದಾದ ನಂತರ ಗೀತಗೋವಿಂದಂ (Gita Govindam) ಮೂಲಕ ಮತ್ತೊಮ್ಮೆ ವಿಜಯ್ ದೇವರಕೊಂಡ ತಮ್ಮ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು.

ಆದರೆ ಆನಂತರ ವಿಜಯ್ ದೇವರಕೊಂಡ ಅವರಿಗೆ ದೊಡ್ಡ ಸಕ್ಸಸ್ ಅನ್ನೋದು ದೂರದ ಮಾತಾಗಿ ಪರಿಣಮಿಸಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗುವ ಹುಮ್ಮಸ್ಸಿನಲ್ಲಿ ನಟಿಸಿದ ಲೈಗರ್ ಸಿನಿಮಾ ಹೀನಾಯ ಸೋಲನ್ನು ಕಂಡಿತ್ತು, ಇದಾದ ನಂತರ ಸಮಂತಾ ಜೋಡಿಯಾಗಿ ನಟಿಸಿದ ಖುಷಿ ಸಿನಿಮಾ ಸಾಧಾರಣ ಗೆಲುವನ್ನು ದಾಖಲಿಸಿತ್ತು. ಇದನ್ನೆಲ್ಲಾ ನೋಡಿದಾಗ ಪ್ಯಾನ್ ಇಂಡಿಯಾ ಸ್ಟಾರ್ ಆಗೋ ಭರದಲ್ಲಿ ನಟ ಕಥೆಯ ಆಯ್ಕೆಯ ವಿಚಾರದಲ್ಲಿ ತಪ್ಪು ಮಾಡಿದ್ರಾ? ಎನ್ನುವ ಪ್ರಶ್ನೆ ಎಂದು ಅವರ ಅಭಿಮಾನಿಗಳನ್ನ ಕಾಡುತ್ತಿದೆ.

ಈಗ ಇವೆಲ್ಲವುಗಳ ನಂತರ ವಿಜಯ್ ದೇವರಕೊಂಡ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಫ್ಯಾಮಿಲಿ ಸ್ಟಾರ್ (Family Star) ಸಿನಿಮಾ ಬಿಡುಗಡೆಯ ನಂತರ ಬಾಕ್ಸಾಫೀಸ್ ನಲ್ಲಿ ಮುಗ್ಗರಿಸಿದೆ. ಕಲೆಕ್ಷನ್ ವಿಚಾರದಲ್ಲಿ ದೊಡ್ಡಕುಸಿತ ಉಂಟಾಗಿದೆ. ಬಿಡುಗಡೆಗೆ ಮೊದಲು ದೊಡ್ಡಮಟ್ಟದಲ್ಲಿ ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ ಫ್ಯಾಮಿಲಿ ಸ್ಟಾರ್ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಟಿಸಿರುವುದು ಮತ್ತೊಂದು ಪ್ರಮುಖ ಆಕರ್ಷಣೆಯಾಗಿತ್ತು, ಸಿನಿಮಾ ದೊಡ್ಡ ಸಕ್ಸಸ್ ಆಗುತ್ತದೆ ಎನ್ನುವ ನಿರೀಕ್ಷೆಗಳಿತ್ತು.

ಆದರೆ ಎಲ್ಲರ ನಿರೀಕ್ಷೆಗಳು ತಲೆ ಕೆಳಗಾಗಿದೆ. ಸಿನಿಮಾದ ಕಲೆಕ್ಷನ್ ತೀರಾ ಕಡಿಮೆ ಎಂದು ಹೇಳಲಾಗಿದೆ. ಗೀತಗೋವಿಂದಂ ಸಿನಿಮಾದ ನಿರ್ದೇಶಕನ ಕಾಂಬಿನೇಷನ್ ನಲ್ಲಿ ಈ ಸಿನಿಮಾ ಮೂಡಿ ಬಂದಿದ್ದರಿಂದ ಬಹಳಷ್ಟು ಕುತೂಹಲದಿಂದ ಪ್ರೇಕ್ಷಕರು ಸಿನಿಮಾಕ್ಕಾಗಿ ಕಾಯುತ್ತಿದ್ದರು. ಆದರೆ ಈಗ ವಿಜಯ್ ದೇವರಕೊಂಡ ಅವರ ವೃತ್ತಿ ಜೀವನದಲ್ಲಿ ಅತಿ ಕಡಿಮೆ ಹಣವನ್ನು ಗಳಿಸಿದ ಸಿನಿಮಾ ಎನ್ನುವ ಕುಖ್ಯಾತಿಗೆ ಫ್ಯಾಮಿಲಿ ಸ್ಟಾರ್ ಸಿನಿಮಾ ಒಳಗಾಗಿದೆ.

ಅಭಿಮಾನಿಗಳಿಗೆ ಫ್ಯಾಮಿಲಿ ಸ್ಟಾರ್ ತೀವ್ರವಾದ ನಿರಾಶೆಯನ್ನು ಉಂಟು ಮಾಡಿದೆ. ಇದು ಮುಂದಿನ ದಿನಗಳಲ್ಲಿ ವಿಜಯ್ ದೇವರಕೊಂಡ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುವುದರಲ್ಲಿ ಅನುಮಾನವೇ ಇಲ್ಲ. ಸತತ ಮೂರು ಸಿನಿಮಾಗಳ ಸೋಲಿನ ಹಾದಿಯನ್ನು ಹಿಡಿದಿರುವುದು ಅಭಿಮಾನಿಗಳಿಗಂತೂ ಬೇಸರವನ್ನು ಮೂಡಿಸಿದೆ. ನಟನ ಮುಂದಿನ ಸಿನಿಮಾ ಕಡೆಗೆ ಈಗ ಅಭಿಮಾನಿಗಳ ದೃಷ್ಟಿ ನೆಟ್ಟಿದೆ.‌

Leave a Comment