Hitha Chandrasekhar: ನಾಯಿ ಮರಿಯನ್ನ ಸಾಕ್ತೇನೆ, ಆದರೆ ಮಕ್ಕಳು ಬೇಡ, ತಾಯ್ತನದ ಬಗ್ಗೆ ಹಿತಾ ಚಂದ್ರಶೇಖರ್ ಮಾತು

Written by Soma Shekar

Updated on:

---Join Our Channel---

Hitha Chandrashekhar: ಕಾಲ ಬದಲಾಗುತ್ತಿದೆ, ಆಧುನಿಕತೆ ಅನ್ನೋದು ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಕೂಡಾ ಜೀವನದ ಒಂದು ಭಾಗ ಆಗ್ತಿದೆ. ಅದಕ್ಕೆ ತಕ್ಕಂತೆ ಜನರ ಆಲೋಚನೆಗಳೂ ಬದಲಾಗ್ತಿದೆ ಅನ್ನೋದು ವಾಸ್ತವ. ಇನ್ನು ಸಂಬಂಧಗಳ ವಿಚಾರದಲ್ಲೂ ಸಮಾಜದಲ್ಲಿ ಪರಿಸ್ಥಿತಿ ಹಿಂದಿನ ಹಾಗೆ ಖಂಡಿತ ಇಲ್ಲ. ಮದುವೆಯ ಜಾಗದಲ್ಲಿ ಲಿವಿಂಗ್ ರಿಲೇಶನ್ಶಿಪ್, ಮದುವೆಗೂ ಮುಂಚೆ ಡೇಟಿಂಗ್ ಹೀಗೆ ಹೊಸ ಹೊಸ ಆಲೋಚನೆಗಳು ಸ್ಥಾನವನ್ನು ಪಡೆದುಕೊಂಡಿದೆ. ಕುಟುಂಬದ ವಿಚಾರಕ್ಕೆ ಬಂದ್ರೆ ಕೂಡು ಕುಟುಂಬಗಳ ಬದಲಾಗಿ ಸಣ್ಣ ಕುಟುಂಬಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಾಮಾನ್ಯವಾಗಿದೆ..

ವ್ಯಕ್ತಿ ಸ್ವಾತಂತ್ರ್ಯ, ಸ್ತ್ರೀ ಸ್ವಾತಂತ್ರ್ಯ, ವೈಯಕ್ತಿಕ ಇಚ್ಛೆಗಳಿಗೆ ಮೊದಲ ಆದ್ಯತೆ, ಹೀಗೆ ಜನ ತಮ್ಮ ಅಭಿರುಚಿಗಳು ಮತ್ತು ಅಭಿಲಾಷೆಗಳಲ್ಲಿಯೂ ಬದಲಾವಣೆಗಳನ್ನು ಕಂಡುಕೊಳ್ಳುತ್ತಿದ್ದಾರೆ. ಈಗ ಕನ್ನಡ ಚಿತ್ರರಂಗದ ಹಿರಿಯ ನಟನಾಗಿರುವ ಸಿಹಿ ಕಹಿ ಚಂದ್ರು ಅವರ ಮಗಳು ಹಿತಾ ಚಂದ್ರಶೇಖರ್ (Hitha Chandrasekhar) ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ತೆಗೆದುಕೊಂಡಿರುವ ಒಂದು ನಿರ್ಧಾರವು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಚರ್ಚೆಗಳಿಗೆ ಇದು ಕಾರಣವಾಗಿದೆ.

ಹೌದು, ಹಿತಾ ಚಂದ್ರಶೇಖರ್ ಅವರು ಜೀವನದಲ್ಲಿ ಮಕ್ಕಳು ಬೇಡ ಎನ್ನುವ ನಿರ್ಧಾರವನ್ನು ಮಾಡಿದ್ದಾರೆ ಎನ್ನಲಾಗಿದೆ. ಸಿಹಿ ಕಹಿ ಚಂದ್ರು (Sihi Kahi Chandru) ಅವರ ಹಿರಿಯ ಮಗಳಾಗಿರುವ ಹಿತಾ ಚಂದ್ರಶೇಖರ್ ಅವರು ನಟ ಕಿರಣ್ ಶ್ರೀನಿವಾಸ್ (Kiran Srinivas) ಅವರ ಜೊತೆಗೆ 2019ರಲ್ಲಿ ದಾಂಪತ್ಯ ಜೀವನಕ್ಕೆ ಅಡಿ ಇಟ್ಟರು. ನಾಲ್ಕು ವರ್ಷಗಳಿಗಿಂತಲೂ ಹೆಚ್ಚಿನ ಸಮಯ ಕಳೆದರೂ ಈ ದಂಪತಿ ಮಕ್ಕಳನ್ನ ಮಾಡಿಕೊಳ್ಳುವ ಆಲೋಚನೆಯನ್ನು ಮಾಡಿಲ್ಲ. ಇದೇ ವಿಚಾರವಾಗಿ ಚಾಟ್ ಶೋ ಒಂದರಲ್ಲಿ ಹಿತಾ ಚಂದ್ರಶೇಖರ್ ಅವರು ತಮ್ಮ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ

ಹಿತಾ ಚಂದ್ರಶೇಖರ್ ಅವರು ನನಗೆ ಮಕ್ಕಳನ್ನು ಮಾಡಿಕೊಳ್ಳೋ ಫೀಲಿಂಗ್ ಇಲ್ಲ, ನಾನು ಮತ್ತು ಕಿರಣ್ ಫ್ರೆಂಡ್ಸ್ ಆಗಿದ್ದ ದಿನಗಳಲ್ಲಿ ಈ ವಿಚಾರವನ್ನು ಮಾತನಾಡಿಕೊಂಡಿದ್ದೇವೆ, ಅವರಿಂದಲೂ ಇದಕ್ಕೆ ಪಾಸಿಟಿವ್ ಉತ್ತರ ಸಿಕ್ಕಿತು. ಯಾಕೆ ನನ್ನದೇ ಆದ ಮಗು ಬೇಕು? ಎಂಬ ಭಾವನೆ ನನಗಿಲ್ಲ. ಜಗತ್ತಿನಲ್ಲಿ ಏನೇನೆಲ್ಲ ನಡೆಯುತ್ತಿದೆ, ಇಂಥ ಸಂದರ್ಭದಲ್ಲಿ ಈ ಪ್ರಪಂಚಕ್ಕೆ ಇನ್ನೊಂದು ಮಗು ತರಲೇಬೇಕಾ ಎನ್ನುವ ಪ್ರಶ್ನೆ ಇತ್ತು. ನನ್ನ ಆಲೋಚನೆಯ ರೀತಿಯಲ್ಲಿಯೇ ಕಿರಣ್ ಅವರಿಗೂ ಅದೇ ಅನಿಸಿಕೆ.

ಅಷ್ಟಕ್ಕೂ ತಾಯ್ತನವನ್ನು ಅನುಭವಿಸುವುದಕ್ಕೆ ನಾವು ಮಕ್ಕಳನ್ನ ಮಾಡಿಕೊಳ್ಳಬೇಕು ಅಂತ ಏನು ಇಲ್ಲ. ಅದರಲ್ಲೂ ನಮ್ಮದೇ ಮಗುವಾಗಿರಬೇಕು ಅಂತಾನೂ ಇಲ್ಲ. ಒಂದು ನಾಯಿಮರಿಯನ್ನು ನಾವು ನಮ್ಮದೇ ಅಂತ ಸಾಕಬಹುದು. ಹೋದಲ್ಲಿ ಬಂದಲ್ಲಿ ತುಂಬಾ ಜನ ಕೇಳ್ತಾರೆ, ಈಗ ವಯಸ್ಸಿದೆ ಮುಂದೆ ವಯಸ್ಸಾದ ಮೇಲೆ ಏನ್ ಕಥೆ? ಇಳಿ ವಯಸ್ಸಿಗೆ ಬಂದ ಮೇಲೆ ಯಾರು ಗತಿ? ಕೊನೆಗಾಲಕ್ಕೆ ಯಾರು ನೋಡಿಕೊಳ್ಳುತ್ತಾರೆ? ಅಂತ ಬಹಳಷ್ಟು ಜನ ನನ್ನನ್ನ ಪ್ರಶ್ನೆ ಮಾಡುತ್ತಾರೆ. ಆದ್ರೆ ನಾನು ಅದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ ಎಂದು ಹಿತ ಹೇಳಿದ್ದಾರೆ.

ಇಬ್ಬರಲ್ಲಿ ಒಬ್ಬರು ಹೋಗಿಬಿಟ್ಟರೆ ಸಿಂಗಲ್ ಆಗಿ ಇರ್ತಾರಲ್ಲ ಅವರ ಜೀವನ ಹೇಗೆ? ಅವರನ್ನು ನೋಡಿಕೊಳ್ಳುವರು ಯಾರು? ನಾನು ಇಲ್ಲಿ ಯಾರಿಗೂ ಕೂಡಾ ಮಕ್ಕಳನ್ನ ಮಾಡಿಕೊಳ್ಳಬೇಡಿ ಅಂತ ಹೇಳ್ತಾ ಇಲ್ಲ. ಇದು ನನ್ನ ನಿರ್ಧಾರಷ್ಟೇ. ಈ ವಿಚಾರವನ್ನು ನನ್ನ ಅಪ್ಪ ಅಮ್ಮನಿಗೂ ಹೇಳಿದ್ದೇನೆ, ಅವರು ಕೂಡಾ ನನಗೆ ಬೆಂಬಲವನ್ನ ನೀಡಿದ್ದಾರೆ ಎನ್ನುವ ವಿಚಾರವನ್ನು ಹಿತಾ ಚಂದ್ರಶೇಖರ್ ಅವರು ಹಂಚಿಕೊಂಡಿದ್ದಾರೆ.

Leave a Comment