Chiranjeevi: ಮೆಗಾಸ್ಟಾರ್ ಬೆಳಗ್ಗೆ ಎದ್ದ ತಕ್ಷಣ ನೋಡೋದು ದೇವರ ಮುಖವನ್ನಲ್ಲ ಆ ನಟಿಯ ಮುಖವನ್ನ : ಯಾಕೆ ಗೊತ್ತಾ?

Written by Soma Shekar

Published on:

---Join Our Channel---

Chiranjeevi: ದಕ್ಷಿಣದ ಸಿನಿಮಾ ರಂಗದಲ್ಲಿ ಮೆಗಾಸ್ಟಾರ್ ಚಿರಂಜೀವಿ ( Chiranjeevi ) ಅವರಿಗೆ ಪ್ರತ್ಯೇಕವಾದ ಪರಿಚಯದ ಅಗತ್ಯವೇ ಇಲ್ಲ. ಅಸಂಖ್ಯಾತ ಅಭಿಮಾನಿಗಳನ್ನು ಪಡೆದಿರುವ ಈ ನಟ ಟಾಲಿವುಡ್ ನ (Tollywood) ಹಿರಿಯ ಸ್ಟಾರ್ ನಟನಾಗಿದ್ದು, ಇಂದಿಗೂ ತಮ್ಮ ಸ್ಟಾರ್ ಡಂ ಅನ್ನು ಉಳಿಸಿಕೊಂಡಿದ್ದಾರೆ. ದಶಕಗಳಿಂದ ಸಿನಿ ಪ್ರೇಮಿಗಳನ್ನು ರಂಜಿಸುತ್ತಾ ಬರುತ್ತಿರುವ ಮೆಗಾಸ್ಟಾರ್ ಚಿರಂಜೀವಿ ಅವರ ಜೀವನದ ಕುರಿತಾಗಿ ಒಂದು ಆಸಕ್ತಿಕರ ವಿಚಾರವು ಈಗ ಹೊರ ಬಂದಿದ್ದು, ಈ ವಿಷಯವನ್ನು ಕೇಳಿ ಎಲ್ಲರೂ ಅಚ್ಚರಿ ಪಡುತ್ತಿದ್ದಾರೆ.

ಬೆಳಿಗ್ಗೆ ನಿದ್ದೆಯಿಂದ ಎದ್ದಾಗ ನಮ್ಮಲ್ಲಿ ದೇವರ ಫೋಟೋ ವನ್ನ ನೋಡೋ ಅಭ್ಯಾಸ ಸಾಮಾನ್ಯವಾಗಿದೆ.‌ ಇದರಿಂದ ದಿನದ ಶುಭಾರಂಭವಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ನಟ ಮೆಗಾಸ್ಟಾರ್ ಚಿರಂಜೀವಿ ಅವರು ಬೆಳ್ಳಿಗೆ ಎದ್ದಾಗ ದೇವರ ಮುಖವನ್ನು ನೋಡುವುದಿಲ್ಲ ಬದಲಾಗಿ ನಟಿಯೊಬ್ಬರ ಮುಖವನ್ನು ನೋಡುತ್ತಾರೆ ಎಂದರೆ ನಂಬೋದಕ್ಕೆ ಕಷ್ಟವಾದರೂ ಇದು ಸತ್ಯವಾಗಿದೆ.

ಸಿನಿಮಾ ಇಂಡಸ್ಟ್ರಿಯಲ್ಲಿ ನಟ ಚಿರಂಜೀವಿ ಅವರು ತಮ್ಮ ಪರಿಶ್ರಮ ಮತ್ತು ಪ್ರತಿಭೆಯಿಂದ ಸ್ಟಾರ್ ನಟನಾಗಿ ಬೆಳೆದವರು. ಮೆಗಾಸ್ಟಾರ್ ಚಿರಂಜೀವಿ ಅವರು ಹಿರಿಯ ನಟಿ ಸಾವಿತ್ರಿ (Savitri) ಅವರ ಜೊತೆಗೆ ಪುನಾದಿ ರಾಳ್ಳು ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಆಗ ಚಿರಂಜೀವಿ ಅವರ ಡ್ಯಾನ್ಸ್ ನೋಡಿದ ಸಾವಿತ್ರಿ ಅವರು ಚಿರಂಜೀವಿ ಅವರಿಗೆ ಮುಂದೆ ದೊಡ್ಡ ಸ್ಟಾರ್ ಆಗ್ತೀಯಾ ಎಂದು ಹೇಳಿದ್ದರಂತೆ. ಅಂದು ಅವರು ನುಡಿದಂತೆ ಚಿರಂಜೀವಿ ದೊಡ್ಡ ಸ್ಟಾರ್ ನಟನಾಗಿ ಬೆಳೆದರು.

ಚಿರಂಜೀವಿ ಅವರು ಬೆಳಿಗ್ಗೆ ಎದ್ದಾಗ ಸಾವಿತ್ರಿ ಅವರ ಫೋಟೋ ನೋಡದೇ ಬೇರೇನೂ ಕೆಲಸವನ್ನು ಮಾಡೋದಿಲ್ಲ ಎನ್ನುವ ವಿಚಾರವನ್ನು ಸಾವಿತ್ರಿ ಅವರ ಮಗಳು ಚಾಮುಂಡೇಶ್ವರಿ ಹೇಳಿದ್ದಾರೆ. ಚಿರಂಜೀವಿ ಮತ್ತು ಅವರ ಪತ್ನಿ ಮಂಗಳವಾರದಂದು ಸಾವಿತ್ರಿ ಕ್ಲಾಸಿಕ್ಸ್ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ವೇಳೆ ಚಾಮುಂಡೇಶ್ವರಿ ಅವರು ಒಂದಷ್ಟು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Leave a Comment