Dreams: ಕನಸಿನಲ್ಲಿ ಹಾವು ಕಂಡಿತೇ? ಹಾಗಾದರೆ ಅದರ ಅರ್ಥವೇನೆಂದು ಈಗಲೇ ತಿಳ್ಕೊಳ್ಳಿ, ನೆಮ್ಮದಿಯಾಗಿರಿ

Written by Soma Shekar

Published on:

---Join Our Channel---

Dreams : ಜನರು ಕೆಲವೊಮ್ಮೆ ತಮ್ಮ ಕನಸಿನಲ್ಲಿ (Dreams) ಹಾವುಗಳನ್ನು ಕಂಡು ಭಯ ಪಡುತ್ತಾರೆ. ಅದರ ಅರ್ಥ ಅಥವಾ ಆ ಕನಸು ಯಾವುದರ ಸೂಚನೆಯನ್ನು ನೀಡುತ್ತಿದೆ ಎನ್ನುವುದನ್ನ ತಿಳಿಯುವ ಪ್ರಯತ್ನವನ್ನು ಮಾಡುತ್ತಾರೆ. ಸಾಮಾನ್ಯವಾಗಿ ಹಾವು ಕನಸಿನಲ್ಲಿ ಕಾಣಿಸಿಕೊಳ್ಳುವುದು ನಿಮಗೆ ನಿಮ್ಮ ಭವಿಷ್ಯದ ಶುಭಾಶುಭ ಸೂಚನೆಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಕನಸಿನಲ್ಲಿ ಹಾವನ್ನು ಕಂಡರೆ ಅದು ಯಾವೆಲ್ಲಾ ಶುಭ ಸೂಚನೆಗಳನ್ನು ನೀಡುತ್ತದೆ ತಿಳಿಯೋಣ ಬನ್ನಿ.

ಒಂದು ವೇಳೆ ಕನಸಿನಲ್ಲಿ ಸತ್ತ ಹಾವನ್ನು (Dead Snake) ಕಂಡರೆ ಅದು ಶುಭ ಸೂಚನೆ ಎಂದೇ ಹೇಳಬಹುದಾಗಿದೆ. ಏಕೆಂದರೆ ಇದು ರಾಹು ದೋಷದಿಂದ ಉಂಟಾದ ಎಲ್ಲಾ ಸಮಸ್ಯೆಗಳನ್ನು ನೀವು ಎದುರಿಸಿ ಅದರಿಂದ ಪಾರಾಗಿದ್ದು, ಇನ್ನು ಮುಂದೆ ನಿಮ್ಮ ಜೀವನದಲ್ಲಿ ಶುಭ ಸಮಯ ಆರಂಭವಾಗಿದೆ ಎನ್ನುವುದರ ಸಂಕೇತವಾಗಿರುತ್ತದೆ.

ನಿದ್ರೆಯಲ್ಲಿ ನಿಮಗೇನಾದರೂ ಹೊಳೆಯುವ ಅಥವಾ ಶ್ವೇತ ವರ್ಣದ ಹಾವು ಕನಸಿನ ರೂಪದಲ್ಲಿ ಕಾಣಿಸಿಕೊಂಡರೆ ಇದು ಅದೃಷ್ಟದ ಸಂಕೇತವಾಗಿರುತ್ತದೆ. ನಿಮ್ಮ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆಯುವ ಸಮಯ ಇದಾಗಿದ್ದು, ನಿಮ್ಮ ಪೂರ್ವಜರ ಆಶೀರ್ವಾದ ಸಹಾ ಇರುತ್ತದೆ ಎನ್ನಲಾಗುತ್ತದೆ.

ಕನಸಿನಲ್ಲಿ ಹಾವೊಂದು ಪೊರೆಯನ್ನು ಬಿಡುತ್ತಿರುವುದು ಕಂಡರೆ ಇದು ಆಸ್ತಿ ಸಂಪಾದನೆಯ ಸೂಚನೆಯಾಗಿರುತ್ತದೆ. ಈ ಕನಸಿನ ಅರ್ಥ ನೀವು ಶೀಘ್ರದಲ್ಲೇ ಸಂಪತ್ತನ್ನು ಪಡೆದುಕೊಳ್ಳುವಿರಿ ಎನ್ನುವ ಅರ್ಥವನ್ನು ನೀಡುತ್ತದೆ.

ಕನಸಿನಲ್ಲಿ ಬಿಳಿಯ ಬಣ್ಣದ ಹಾವು ಕಂಡರೆ ಅದು ಮಂಗಳಕರ ಸೂಚನೆ ಎನ್ನಲಾಗಿದೆ. ಇದನ್ನು ದೇವರ ರೂಪವೆಂದು ಪರಿಗಣಿಸಲಾಗಿದೆ ಮತ್ತು ಇದು ಮುಂದಿನ ದಿನಗಳಲ್ಲಿ ನಿಮಗೆ ಹಣವು ಸಿಗುತ್ತದೆ ಎನ್ನುವ ಅರ್ಥವನ್ನು ನೀಡುತ್ತದೆ.

ಕನಸಿನಲ್ಲಿ ಹಾವು (Snake) ಕಚ್ಚಿದಂತೆ ಕಂಡರೆ ಇದು ಸಹಾ ಶುಭ ಸೂಚನೆ ಎನ್ನಲಾಗಿದೆ. ಹಾವಿನ ಕಡಿತದಿಂದ ಸಾಯುವಂತಹ ಕನಸನ್ನು ಕಂಡರೆ ಇದು ದೀರ್ಘಾಯುಷ್ಯದ ಸಂಕೇತವಾಗಿರುತ್ತದೆ. ಸಾಮಾನ್ಯವಾಗಿ ಇಂತಹ ಕನಸುಗಳು ಬಿದ್ದಾಗ ಅನೇಕರು ಗಾಬರಿಯಾಗುತ್ತಾರೆ. ಆದರೆ ಅದರ ಅವಶ್ಯಕತೆ ಇಲ್ಲ.

Leave a Comment