Sunflower Oil: ನೀವು ಸೂರ್ಯಕಾಂತಿ ಎಣ್ಣೆ ಬಳಸ್ತೀರಾ? ಹಾಗಾದ್ರೆ ಈ ವಿಚಾರಗಳು ಗೊತ್ತಿರ್ಲೇಬೇಕು

Written by Soma Shekar

Published on:

---Join Our Channel---

Sunflower Oil: ಸನ್ ಫ್ಲವರ್ ಸೀಡ್ಸ್ ಅಥವಾ ಸೂರ್ಯಕಾಂತಿ ಬೀಜಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಸನ್ ಫ್ಲವರ್ ಸೀಡ್ಸ್ ನಿಂದ ಖಾದ್ಯ ತೈಲವನ್ನು ಸಹಾ ಉತ್ಪಾದನೆ ಮಾಡಲಾಗುತ್ತಿದೆ ಮತ್ತು ಇಂದು ಬಹಳಷ್ಟು ಜನರು ತಮ್ಮ ಮನೆಗಳಲ್ಲಿ ಸನ್ ಫ್ಲವರ್ ಎಣ್ಣೆಯನ್ನು (Sunflower Oil) ಖಾದ್ಯ ತೈಲವಾಗಿ ಬಳಸಲಾಗುತ್ತಿದೆ ಎನ್ನುವುದು ಸಹಾ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಸೂರ್ಯ ಕಾಂತಿ ಎಣ್ಣೆಯು ಮನುಷ್ಯನ ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನಲಾಗಿದ್ದು , ಅದರ ಲಾಭಗಳೇನು ಎಂದು ಒಂದು ಸಲ ತಿಳಿಯೋಣ ಬನ್ನಿ.

ಸೂರ್ಯಕಾಂತಿ ಎಣ್ಣೆಯು ಮಾನವನ ಹೃದಯಕ್ಕೆ (Human Heart) ಬಹಳ ಒಳ್ಳೆಯದೆಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ (cholesterol) ಅನ್ನು ತೆಗೆದು ಹಾಕುತ್ತದೆ ಎನ್ನಲಾಗಿದೆ. ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳು ಸಹಾ ಈ ಎಣ್ಣೆಯಲ್ಲಿ ಇದೆ. ಇದು ಇತರೆ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗುವಂತಹ ಸಮಸ್ಯೆಗಳಿಂದ ಸಹಾ ರಕ್ಷಣೆಯನ್ನು ನೀಡುತ್ತೆ. ಇದು ವಿಟಮಿನ್ ಇ ಗುಣಗಳನ್ನು ಹೊಂದಿದೆ.

ವಿಟಮಿನ್ ಇ (Vitamin E) ಸೋಂಕುಗಳ ವಿರುದ್ಧ ಹೋರಾಡುವ ಮೂಲಕ ದೇಹವನ್ನು ರಕ್ಷಣೆ ಮಾಡಲು ನೆರವನ್ನು ನೀಡುತ್ತದೆ. ಇದು ಚರ್ಮದ ಆರೋಗ್ಯಕ್ಕೆ ಬಹುಪಯೋಗಿ ಆಗಿದ್ದು, ಚರ್ಮ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಚರ್ಮದ ಮೇಲಿರುವ ಕಲೆಗಳನ್ನು ಹಾಗೂ ಚರ್ಮದ ಸುಕ್ಕುಗಳನ್ನು ಇದು ಕಡಿಮೆ ಮಾಡುತ್ತದೆ. ಕೂದಲಿನ ಪೋಷಣೆಗೆ ಸಹಾಯ ಮಾಡಿ ಅವರು ಸದೃಢವಾಗುವಂತೆ ಮಾಡುತ್ತದೆ.

ಸೂರ್ಯಕಾಂತಿ ಎಣ್ಣೆಯು ಕೂದಲಿಗೆ ಒಂದು ಉತ್ತಮವಾದ ಮಾಯಿಶ್ಚರೈಸರ್ ಆಗಿದೆ. ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವುದರ ಜೊತೆಗೆ ಕೂದಲಿನ ಕಾಂತಿಯನ್ನು ಸಹಾ ಹೆಚ್ಚಿಸುತ್ತದೆ. ಇದಲ್ಲದೇ ಸೂರ್ಯಕಾಂತಿ ಎಣ್ಣೆಯಲ್ಲಿರುವಂತಹ ವಿಟಮಿನ್ ಇ ಮೆದುಳಿನ ಆರೋಗ್ಯಕ್ಕೆ ಮುಖ್ಯವಾಗಿದೆ. ಇದು ನಮ್ಮ ಜ್ಞಾಪಕ ಶಕ್ತಿಯನ್ನು ಮತ್ತು ಏಕಾಗ್ರತೆಯನ್ನು ಸುಧಾರಿಸಲು ನೆರವನ್ನು ನೀಡುತ್ತದೆ.

ಇದು ಶೀತ, ಕೆಮ್ಮು ಮತ್ತು ತಲೆನೋವಿನಂತಹ ಸಮಸ್ಯೆಗಳ ಪರಿಹಾರಕ್ಕೆ ನೆರವನ್ನು ನೀಡುತ್ತದೆ. ಸೂರ್ಯಕಾಂತಿ ಎಣ್ಣೆಯು ಆಲ್‌ಝೈಮರ್‌ ನಂತಹ ಕಾಯಿಲೆ ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುವ ಪರಿಸ್ಥಿತಿಗಳ ಅಪಾಯವನ್ನು ಸಹಾ ಕಡಿಮೆ ಮಾಡುತ್ತದೆ. ಇಷ್ಟೆಲ್ಲಾ ಉಪಯೋಗ ಗಳು ಇದ್ದರೂ ಸಹಾ ಇದನ್ನು ಒಂದು ಮಿತಿಯಲ್ಲಿ ಬಳಸಬೇಕಾಗಿರುತ್ತದೆ. ಏಕೆಂದರೆ ಅನ್ಯ ಖಾದ್ಯ ತೈಲಗಳಂತೆ ಇದರಲ್ಲೂ ಕ್ಯಾಲರಿಗಳು ಹೆಚ್ಚಾಗಿರುತ್ತದೆ.

Leave a Comment