Amruthadhaare: ಜೀ ಕನ್ನಡ (Zee Kannada) ವಾಹಿನಿಯ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದಾಗಿರುವ ಅಮೃತಧಾರೆ (Amruthadhaare) ದಿನದಿಂದ ದಿನಕ್ಕೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾ, ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಈಗ ಕಥೆಯಲ್ಲಿ ಹೊಸ ಟ್ವಿಸ್ಟ್ ಎನ್ನುವಂತೆ ಸುಳ್ಳಿನಿಂದಾದ ತಪ್ಪನ್ನು ತಿದ್ದಿಕೊಳ್ಳುವುದಕ್ಕೆ ಮಹಿಮಾ ಸತ್ಯದ ಮಾರ್ಗವನ್ನು ಹಿಡಿಯಲು ಮುಂದಾಗಿದ್ದಾಳೆ. ತಾನು ಹೇಳಿದ ಸುಳ್ಳಿನಿಂದಾಗಿ ಈಗ ತಾನೇ ಸಮಸ್ಯೆಯಲ್ಲಿ ಸಿಲುಕಿ ಬಳಲುತ್ತಿರುವ ಮಹಿಮಾ ಅದರಿಂದ ಹೊರಗೆ ಬರಲು ಸತ್ಯವನ್ನ ಹೇಳುವ ದೃಢ ನಿರ್ಧಾರವೊಂದನ್ನು ಮಾಡಿದ್ದಾಳೆ.
![](https://news9kannada.com/wp-content/uploads/2024/04/20240404_094657-1024x576.webp)
ಜೀವನ್ ಜೊತೆ ಮದುವೆಯ ನಂತರ ಆರಂಭದಲ್ಲಿ ದರ್ಪ ತೋರುತ್ತಿದ್ದ ಮಹಿಮಾ ಈಗ ಬದಲಾಗಿದ್ದಾಳೆ. ಮನೆಯವರೊಂದಿಗೆ ಹೊಂದಿಕೊಂಡು ಖುಷಿಯಾಗಿ ಜೀವನವನ್ನು ನಡೆಸುತ್ತಿದ್ದಾಳೆ. ಆದರೆ ಈ ಹಿಂದೆ ತನ್ನ ಹೊಟ್ಟೆಯಲ್ಲಿದ್ದ ಮಗುವನ್ನು ತೆಗೆಸಿದ್ದ ಮಹಿಮಾ ಅದು ಅಪಘಾತದಿಂದ ಆದ ಅವಘಡ ಅನ್ನೋತರ ಎಲ್ಲರನ್ನು ನಂಬಿಸಿದ್ದಳು.
![](https://news9kannada.com/wp-content/uploads/2024/04/20240404_094804-1024x576.webp)
ಆದರೆ ಮಹಿಮಾಳ ಈ ರಹಸ್ಯವನ್ನ ತಿಳ್ಕೊಂಡಿದ್ದ ದೀಪಾನ್ಷು ಈಗ ಅವರ ಇನ್ನೊಂದು ಮುಖವನ್ನು ಮಹಿಮಾಗೆ ತೋರಿಸಿದ್ದಾನೆ. ತನ್ನನ್ನ ಪ್ರೀತಿಸುವಂತೆ ಅವಳನ್ನು ಕಾಡುತ್ತಿದ್ದಾನೆ. ಇಲ್ಲದೇ ಹೋದಲ್ಲಿ ಅವಳ ರಹಸ್ಯವನ್ನು ಅವರ ಅಣ್ಣ ಗೌತಮ್ ದೀವಾನ್ ಮತ್ತು ಮನೆಯವರಿಗೆ ತಿಳಿಸೋದಾಗಿ ಬ್ಲಾಕ್ ಮೇಲೆ ಮಾಡುತ್ತಿದ್ದಾನೆ.
![](https://news9kannada.com/wp-content/uploads/2024/04/20240404_094729-1024x576.webp)
ದೀಪಾನ್ಷು ಟಾರ್ಚರ್ ಹೆಚ್ಚಾಗಿದೆ, ಮಹಿಮಾ ಇರೋ ಅಪಾರ್ಟ್ಮೆಂಟ್ ಕೆಳಗೆ ಬಂದು ಮಾತನಾಡಲು ಕರೆದಿದ್ದಾನೆ, ಮಹಿಮಾ ಫೋನ್ ರಿಸೀವ್ ಮಾಡಿಲ್ಲ ಎಂದು ಜೀವನ ನಂಬರ್ ಗೆ ಕರೆ ಮಾಡಿ ಮಾತನಾಡಿಸಿ, ಮತ್ತೆ ಮಹಿಮಾನ ಹೆದರಿಸಿ, ಎಚ್ಚರಿಕೆಯನ್ನು ನೀಡಿದ್ದು, ಇದರಿಂದ ಮಹಿಮಾ ರೋಸಿ ಹೋಗಿದ್ದಾಳೆ. ಮುಂದೇನೆಂದು ಕಂಗಲಾಗಿದ್ದಾಳೆ.
![](https://news9kannada.com/wp-content/uploads/2024/04/20240404_094712-1024x576.webp)
ಇಂತಹ ಎಮೊಷನಲ್ ಬ್ಲಾಕ್ ಮೇಲ್ ಆದಾಗ ಎಲ್ಲರಿಗೂ ಇರೋದು ಎರಡು ಆಯ್ಕೆಗಳು ಒಂದೋ ಸತ್ಯ ಹೇಳುವುದು ಅಥವಾ ಎರಡನೆಯದು ಬ್ಲಾಕ್ ಮೇಲ್ ಮಾಡೋರ ಬೇಡಿಕೆಗಳನ್ನು ಈಡೇರಿಸುವುದು. ಈಗ ಮಹಿಮಾ ಧೈರ್ಯ ಮಾಡಿ ಎರಡನೇ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾಳೆ.
![](https://news9kannada.com/wp-content/uploads/2024/04/20240404_095726-1024x576.webp)
ಮಹಿಮಾ ಸತ್ಯವನ್ನು ಹೇಳಲು ನಿರ್ಧಾರ ಮಾಡಿದ್ದು, ಅದರ ಬೆನ್ನಲ್ಲೇ ತನ್ನ ಅತ್ತಿಗೆ ಭೂಮಿಕಾಳನ್ನು ಸ್ಟುಡಿಯೋಗೆ ಕರೆಸಿಕೊಂಡು ಅತ್ತಿಗೆಯ ಮುಂದೆ ಕಣ್ಣೀರು ಹಾಕುತ್ತಲೇ ಎಲ್ಲಾ ಸತ್ಯವನ್ನು ತಿಳಿಸಿದ್ದಾಳೆ. ಪ್ರೇಕ್ಷಕರಿಗೆ ಮಹಿಮಾ ನಿರ್ಧಾರ ಇಷ್ಟವಾಗಿದೆ. ಇನ್ನು ಭೂಮಿಕಾ ಈ ಸಮಸ್ಯೆಗೆ ಯಾವ ಪರಿಹಾರ ಮಾಡ್ತಾಳೆ ಅನ್ನೋದು ಈಗ ಪ್ರೇಕ್ಷಕರ ಕುತೂಹಲದ ವಿಚಾರವಾಗಿದೆ.