Kalki 2898AD: ಹಾಲಿವುಡ್ ಸಿನಿಮಾಗಳಿಗೇ ಟಕ್ಕರ್, ಕಲ್ಕಿ 2898 AD ಟ್ರೇಲರ್ ನೋಡಿ ಸಿನಿ ಪ್ರೇಮಿಗಳ ಖುಷಿ

Written by Soma Shekar

Published on:

---Join Our Channel---

Kalki 2898 AD: ಅಕ್ಷರಶಃ ಹಾಲಿವುಡ್ ಸಿನಿಮಾಗಳನ್ನ ಕಣ್ಮುಂದೆ ತರುವಂತಹ ಅದ್ಭುತ ಸಿನಿಮಾವೊಂದನ್ನು ತೆಲುಗು ಚಿತ್ರರಂಗ (Tollywood) ನಿರ್ಮಾಣ ಮಾಡಿದ್ದು, ಪ್ರೇಕ್ಷಕರ ಮುಂದೆ ತರುವುದಕ್ಕೆ ಸಜ್ಜಾಗಿದೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ನಾಯಕನಾಗಿ ಬಾಲಿವುಡ್ ನ ಹಿರಿಯ ನಟ ಅಮಿತಾ ಬಚ್ಚನ್ ಮತ್ತು ದಕ್ಷಿಣದ ಸ್ಟಾರ್ ನಟ ಕಮಲಹಾಸನ್ ಸೇರಿದಂತೆ ಬಹುತಾರಾಗಣವಿರುವ ಕಲ್ಕಿ 2898 ಎಡಿ (Kalki 2898 AD) ಸಿನಿಮಾದ ಟ್ರೇಲರ್ ನಿನ್ನೆ ಸಂಜೆ ಬಿಡುಗಡೆಯಾಗಿದ್ದು, ಹೊಸ ಬಿರುಗಾಳಿಯನ್ನು ಎಬ್ಬಿಸಿದೆ. ಇದೊಂದು ಫ್ಯಾಂಟಸಿ ಹಾಗೂ ವಿಜ್ಞಾನ ಮೇಳೈಸಿರುವ ದೃಶ್ಯ ಕಾವ್ಯದಂತೆ ಕಂಡಿದೆ.

ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಕಲ್ಕಿ 2898 ಎಡಿ ಸಿನಿಮಾದಲ್ಲಿ ಬಾಲಿವುಡ್ ಬೆಡಗಿಯರಾದ ದೀಪಿಕಾ ಪಡುಕೋಣೆ (Deepika Padukone) ಮತ್ತು ದಿಶಾ ಪಟಾನಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ಮಹಾನಟಿ ಸಿನಿಮಾ ಖ್ಯಾತಿಯ ನಿರ್ದೇಶಕ ನಾಗ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ಇದೇ ಜೂನ್ 27ರಂದು ಸಿನಿಮಾ ವಿಶ್ವದಾದ್ಯಂತ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ನಿನ್ನೆ ಬಿಡುಗಡೆಯಾದ ಟ್ರೈಲರ್ ಅನ್ನು ನೋಡಿ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ಖುಷಿಯ ಜೊತೆಗೆ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ.‌ ಅದರಲ್ಲೂ ವಿಶೇಷವಾಗಿ ಕಮಲ ಹಾಸನ್ ಅವರ ಗೆಟಪ್ ಮತ್ತು ಮೇಕ್ ಓವರ್ ನೋಡಿ ಸಿನಿ ಪ್ರೇಮಿಗಳು ಅಚ್ಚರಿಯನ್ನ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಗಳಲ್ಲಿ ಸಿನಿಮಾ ಟ್ರೇಲರ್ ಕುರಿತಾಗಿ ಅಪಾರವಾದ ಮೆಚ್ಚುಗೆಗಳು ಹರಿದು ಬರುತ್ತಿವೆ. ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ತಮ್ಮ ತಂದೆ ಅಮಿತಾ ಬಚ್ಚನ್ ಅವರ ಪಾತ್ರವನ್ನು ಮೆಚ್ಚಿ ಮಾತನಾಡಿದ್ದಾರೆ.

ಅದ್ಭುತ ಫ್ಯಾಂಟಸಿ ಕಥಾನಕದೊಂದಿಗೆ ಪ್ರೇಕ್ಷಕರ ಮುಂದೆ ಬರಲಿರುವ ಕಲ್ಕಿ 2898 ಎಡಿ ಕುರಿತಾಗಿ ನಿರ್ದೇಶಕ ನಾಗ್ ಅಶ್ವಿನ್ (Nag Aswin) ಅವರು ನಾನು ಯಾವಾಗಲೂ ಭಾರತೀಯ ಪುರಾಣ ಮತ್ತು ವೈಜ್ಞಾನಿಕ ಕಾದಂಬರಿಗಳಿಂದ ಆಕರ್ಷಿತನಾಗಿದ್ದು, ಈ ಸಿನಿಮಾದಲ್ಲಿ ಆ ಎರಡು ಅಂಶಗಳನ್ನು ಕೂಡಾ ವಿಲೀನಗೊಳಿಸಿದ್ದೇನೆ ಎನ್ನುವ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಇದೀಗ ಸಿನಿಮಾ ಟ್ರೇಲರ್ ಸಿನಿ ಪ್ರೇಮಿಗಳ ನಿರೀಕ್ಷೆಗಳನ್ನು ನೂರು ಪಟ್ಟು ಹೆಚ್ಚಿಸಿದೆ.

Leave a Comment