Movies

Mahesh Babu: ಅಲ್ಲಿ ಕಂಡ ಗೆಲುವಿನ ಬೆನ್ನಲ್ಲೇ ಈಗ ಬೆಂಗಳೂರಿನ ಮೇಲೆ ಕಣ್ಣಿಟ್ಟ ಮಹೇಶ್ ಬಾಬು

Mahesh Babu: ಟಾಲಿವುಡ್ ನ (Tollywood) ವಿಚಾರಕ್ಕೆ ಬಂದರೆ ಇಲ್ಲಿನ ಸ್ಟಾರ್ ನಟರು ಸಿನಿಮಾಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಸಿನಿಮಾಗಳ ಕೆಲಸಗಳ ಜೊತೆಗೆ ಅವರು ಉದ್ಯಮಿಗಳು ಸಹಾ ಆಗಿದ್ದಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಅಲ್ಲು ಅರ್ಜುನ್ (Allu Arjun), ಮಹೇಶ್ ಬಾಬು ಇನ್ನೂ ಮೊದಲಾದ ನಾಯಕ ನಟರು ಮಲ್ಟಿಪ್ಲೆಕ್ಸ್ ನ ಉದ್ಯಮಕ್ಕೆ ಇಳಿದಿದ್ದಾರೆ. ಹೈದರಾಬಾದ್ ನಲ್ಲಿ ಈಗಾಗಲೇ ಮಲ್ಟಿಪ್ಲೆಕ್ಸ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ನಟರಲ್ಲಿ ಮಹೇಶ್ ಬಾಬು ಅವರ ಎಎಂಬಿ ಸಿನಿಮಾಸ್ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಈಗ ಮಹೇಶ್ ಬಾಬು (Mahesh Babu) ಅವರು ಇನ್ನೊಂದು ಹೆಜ್ಜೆ ಮುಂದೆ ಇಡಲು ಸಜ್ಜಾಗಿದ್ದು ತಮ್ಮ ಎಎಂಬಿ ಸಿನಿಮಾಸ್ ಅನ್ನು (AMB cinemas) ಬೆಂಗಳೂರಿಗೆ ವಿಸ್ತರಿಸಲು ನಟ ಸಿದ್ಧತೆಗಳನ್ನು ನಡೆಸಿದ್ದಾರೆ. ಏಪ್ರಿಲ್ 24 ರಂದು ಬೆಂಗಳೂರಿನಲ್ಲಿ ಎಎಂಬಿ ಸಿನಿಮಾಸ್ ನ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ. ಈ ವೇಳೆ ನಿರ್ಮಾಪಕ ರಾಕಲೈನ್ ವೆಂಕಟೇಶ್ ಅವರು ತಂಡಕ್ಕೆ ಶುಭವನ್ನು ಹಾರೈಸಿದ್ದಾರೆ. ಮಹೇಶ್ ಬಾಬು ಅವರ ಎಎಂಬಿ ಮಲ್ಟಿಪ್ಲೆಕ್ಸ್ ಅತ್ಯಾಧುನಿಕ ಶೈಲಿಯ ಮಲ್ಟಿಪ್ಲೆಕ್ಸ್ ಆಗಿದೆ.

ಇದಕ್ಕೆ ಜನರಿಂದ ಸಹಾ ಉತ್ತಮ ಪ್ರತಿಕ್ರಿಯೆ ಮತ್ತು ಮೆಚ್ಚುಗೆಗಳು ಹರಿದು ಬಂದಿದೆ. ಬೆಂಗಳೂರಿನಲ್ಲಿ ಎಎಂಬಿ ಸಿನಿಮಾಸ್ ಅನ್ನು ಆರಂಭಿಸುವ ಆಲೋಚನೆ ಮಹೇಶ್ ಬಾಬು ಅವರಿಗೆ ಬಹಳ ದಿನಗಳಿಂದಲೂ ಇತ್ತು. ಆದರೆ ಸರಿಯಾದ ಜಾಗದ ನಿರೀಕ್ಷೆಯಲ್ಲಿದ್ದ ನಟ, ಇದೀಗ ಸರಿಯಾದ ಸ್ಥಳ ಸಿಕ್ಕಿರುವ ಕಾರಣ ತಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದ್ದಾರೆ.

ಬೆಂಗಳೂರಿನ ಮೆಜೆಸ್ಟಿಕ್ ಕಪಾಲಿ ಚಿತ್ರ ಮಂದಿರವನ್ನು ಈಗಾಗಲೇ ಕೆಡವಲಾಗಿದೆ. ಅದರ ಜಾಗದಲ್ಲಿ ಒಂದು ಮಲ್ಟಿಪ್ಲೆಕ್ಸ್ ತಲೆ ಎತ್ತಲಿದೆ ಎನ್ನುವ ಸುದ್ದಿ ಕೆಲವು ವರ್ಷಗಳ ಹಿಂದೆಯೇ ಆಗಿತ್ತು. ಈಗ ಅದೇ ಜಾಗದಲ್ಲಿ ಎಎಂಬಿ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಲಾಗುವುದು ಎನ್ನಲಾಗಿದೆ. ಇಲ್ಲಿ ಕನ್ನಡ ಸಿನಿಮಾಗಳಿಗೆ ಹೆಚ್ಚು ಅವಕಾಶ ಸಿಗಲಿ ಎನ್ನುವುದು ಸಿನಿ ಪ್ರೇಮಿಗಳ ಆಶಯವಾಗಿದೆ.

Soma Shekar

Recent Posts

Amruthadhaare: ಸೀರಿಯಲ್ ನಲ್ಲಿ ಈ ಜೋಡಿಯ ಕೆಮಿಸ್ಟ್ರಿ ಸೂಪರ್: ಆದ್ರೆ ಛಾಯಾಸಿಂಗ್ ರಾಜೇಶ್ ಅವ್ರನ್ನ ಹೀಗೆ ಕರೀತಾರ?

Amruthadhaare : ಕನ್ನಡ ಕಿರುತೆರೆಯ ಬಹುಜನಪ್ರಿಯ ಧಾರಾವಾಹಿಯಾಗಿರುವ ಅಮೃತಧಾರೆಯಲ್ಲಿ ರಾಜೇಶ್ ನಟರಂಗ (Rajesh Nataranga) ಅವರು ಗೌತಮ್ ದೀವಾನ್ ಪಾತ್ರದಲ್ಲಿ…

37 mins ago

Pranitha Subhash: ದಕ್ಷಿಣ ಭಾರತೀಯರನ್ನು ಆಫ್ರಿಕನ್ನರಿಗೆ ಹೋಲಿಕೆ ಮಾಡಿದ ಪಿತ್ರೋಡಾಗೆ ಖಡಕ್ ಉತ್ತರ ಕೊಟ್ಟ ಪ್ರಣೀತಾ

Pranitha Subhash: ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ (Sam Pitroda) ಇತ್ತೀಚಿನ ದಿನಗಳಲ್ಲಿ ತಾವು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳಿಂದ ಸಾಕಷ್ಟು…

3 hours ago

Puttakkana Makkalu: ಉಮಾಶ್ರೀ ಅವ್ರ ಅಭಿನಯಕ್ಕೆ ಫ್ಯಾನ್ಸ್ ಫಿದಾ; ನಿಮ್ಮ ನಟನೆಗೆ ಕೋಟಿ ನಮನ ಅಂದ್ರು ಪ್ರೇಕ್ಷಕರು

Puttakkana Makkalu: ಕನ್ನಡ ಕಿರುತೆರೆಯ ನಂಬರ್ ಒನ್ ಸೀರಿಯಲ್ ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನ ನಿನ್ನೆಯ ಎಪಿಸೋಡ್…

19 hours ago

Jyothi Rai: ಕನ್ನಡ ಕಿರುತೆರೆಯ ಜನಪ್ರಿಯ ನಟಿಯ ಅಶ್ಲೀಲ ವೀಡಿಯೋ ವೈರಲ್; ಸೋಶಿಯಲ್ ಮೀಡಿಯಾದಲ್ಲಿ ಸಂಚಲನ

Jyothi Rai: ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ದೊಡ್ಡ ಹೆಸರನ್ನು ಮಾಡಿರುವ, ಪ್ರಸ್ತುತ ತೆಲುಗು ಕಿರುತೆರೆಯಲ್ಲಿ ಮತ್ತು ವೆಬ್ ಸೀರೀಸ್ ಗಳಲ್ಲಿ…

21 hours ago

SeethaRama Serial: ಭಾರ್ಗವಿ ಕನಸಿಗೆ ಕೊಳ್ಳಿಯಿಟ್ಟ ಲಾಯರ್; ಸೀತಾ ರಾಮನ ಜೀವನಕ್ಕೇ ಮಾರಕ ಆಗ್ತಾಳಾ ಭಾರ್ಗವಿ?

SeethaRama Serial : ಸೀತಾರಾಮ ಸೀರಿಯಲ್ ನಲ್ಲಿ (SeethaRama Serial) ಸೀತಾ ಮತ್ತು ರಾಮನ ಮದುವೆಯ ಮಾತುಕತೆ ವಿಚಾರ ಮುಂದುವರೆಯುತ್ತಿದೆ.…

1 day ago

Amruthadhaare : ಗೌತಮ್ ಮುಂದೆ ಬಯಲಾಯ್ತು ಭೂಮಿಕಾ ಮತ್ತು ಜೀವಾ ಸತ್ಯ; ಗೌತಮ್ ದೀವಾನ್ ಪ್ಲಾನ್ ಸಕ್ಸಸ್ ಆಯ್ತಾ?

Amruthadhaare: ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ನಾಯಕಿ ಭೂಮಿಕಾ ತಮ್ಮನಾಗಿರುವ ಜೀವ ಕೆಲವು ಕಾರಣಗಳಿಂದ ಫುಡ್ ಡೆಲಿವರಿ ಬಾಯ್ ಆಗಿ…

1 day ago

This website uses cookies.