Entertainment

Puttakkana Makkalu: ಉಮಾಶ್ರೀ ಅವ್ರ ಅಭಿನಯಕ್ಕೆ ಫ್ಯಾನ್ಸ್ ಫಿದಾ; ನಿಮ್ಮ ನಟನೆಗೆ ಕೋಟಿ ನಮನ ಅಂದ್ರು ಪ್ರೇಕ್ಷಕರು

Puttakkana Makkalu: ಕನ್ನಡ ಕಿರುತೆರೆಯ ನಂಬರ್ ಒನ್ ಸೀರಿಯಲ್ ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನ ನಿನ್ನೆಯ ಎಪಿಸೋಡ್ ಬಹಳ ಸುದ್ದಿಯನ್ನು ಮಾಡುತ್ತಿದ್ದು, ಪ್ರೇಕ್ಷಕ ವರ್ಗದಿಂದ ವಿಶೇಷವಾದ ಮೆಚ್ಚುಗೆಗಳು ಹರಿದು ಬರುತ್ತಿದೆ. ಸೀರಿಯಲ್ ನ ಕಥೆಯಲ್ಲಿ ಪುಟ್ಟಕ್ಕನ ಹಿರಿ ಮಗಳು ಸತ್ತಿದ್ದಾಳೆ ಎಂದೇ ಎಲ್ಲರೂ ಭಾವಿಸಿದ್ದು, ಅಪರಿಚಿತ ಶವವನ್ನೇ ಸಹನಾ ಎಂದುಕೊಂಡು ಅದರ ಶವಸಂಸ್ಕಾರವನ್ನು ಸಹಾ ಮಾಡಿ ಮುಗಿಸಿದ್ದಾರೆ. ಈ ವೇಳೆ ಮಗಳನ್ನ ಕಳೆದುಕೊಂಡು ಗೋಳಾಡುವ ತಾಯಿಯ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಅವರ ನಟನೆಗೆ ಪ್ರೇಕ್ಷಕರು ಮಂತ್ರ ಮುಗ್ಧರಾಗಿದ್ದಾರೆ.

ಜೀವಕ್ಕೆ ಜೀವ ಎನಿಸಿದ ಮೂರು ಜನ ಹೆಣ್ಣು ಮಕ್ಕಳಲ್ಲಿ ಪುಟ್ಟಕ್ಕನಿಗೆ ಹಿರಿ ಮಗಳ ಮೇಲೆ ಸ್ವಲ್ಪ ಹೆಚ್ಚಾಗಿಯೇ ಕಾಳಜಿ. ಏಕೆಂದರೆ ಕಿರಿ ವಯಸ್ಸಿನಿಂದಲೇ ಮೆಸ್ ನಲ್ಲಿ ಕೆಲಸ ಮಾಡುತ್ತಾ, ತಂಗಿಯರ ಆರೈಕೆ ಮಾಡುತ್ತಾ ಬೆಳೆದವಳು ಸಹನಾ. ಅಂತಹ ಮಗಳನ್ನು ಕಳೆದುಕೊಂಡ ಪುಟ್ಟಕ್ಕ ತಾಯಿಯಾಗಿ ಕಣ್ಣೀರಿಡುವ ಆಕ್ರಂದನ ಮುಗಿಲು ಮುಟ್ಟಿದ್ದು ನೋಡುಗರ ಮನಸ್ಸನ್ನು ಭಾವುಕರನ್ನಾಗಿ ಮಾಡಿದೆ.

ಚಿತೆಯ ಮೇಲಿರುವ ಮಗಳ ದೇಹವನ್ನು ನೋಡ್ತಾ ನಾನೇ ಪಾಪಿ, ನಾನೇ ಆ ಮಗುನ ಅತ್ತೆ ಮನೆಗೆ ಹೋಗು ಅಂತ ಹೇಳಿ ಹೇಳಿ ಈಗ ಆ ಮಗೂನ ನಾನೇ ಬೆಂಕಿಗೆ ಹಾಕಿ ಬಿಟ್ಟೆ ಎಂದು ತನ್ನ ಎದೆ ಬಡಿದುಕೊಂಡು ಕಣ್ಣೀರು ಹಾಕೋ ದೃಶ್ಯದಲ್ಲಿ ಉಮಾಶ್ರೀ ಅವರು ಮನೋಜ್ಞವಾಗಿ ನಟಿಸಿದ್ದು, ನೋಡುಗರ ಕಣ್ಣಲ್ಲಿ ನೀರನ್ನು ತರಿಸುವ ಹಾಗೆ ನಟನೆಯನ್ನು ಪ್ರದರ್ಶನ ಮಾಡಿ ಅಸಂಖ್ಯಾತ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ.‌

ಮಗಳು ಶಾಶ್ವತವಾಗಿ ದೂರ ಆಗೇ ಬಿಟ್ಟಳು ಅನ್ನೋ ನೋವಲ್ಲಿ ಪುಟ್ಟಕ್ಕ ಬಿಕ್ಕಿ ಬಿಕ್ಕಿ ಅಳುವುದನ್ನು ನೋಡಿ ವೀಕ್ಷಕರ ಕಣ್ಣಾಲಿಗಳು ಸಹಾ ಒದ್ದೆಯಾಗಿದೆ. ಉಮಾಶ್ರೀ ಅವರ ಇಂತಹ ಪ್ರಬುದ್ಧ ಮತ್ತು ನ್ಯಾಚುರಲ್ ಆಗಿ ಕಾಣುವಂತಹ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿ ಸೋಶಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ.

Soma Shekar

Recent Posts

Cannes 2024: ಗೋಲ್ಡನ್ ಆಸ್ಕರ್ ನಂತೆ ಕಂಡ ಶೋಭಿತಾ, ಅಂದದ ಪ್ರವಾಹ ಇದು ಎಂದ ಫ್ಯಾನ್ಸ್

Cannes 2024 : ಕಾನ್ ಸಿನಿಮೋತ್ಸವಕ್ಕೆ (Cannes 2024) ಅದರದ್ದೇ ಆದ ಒಂದು ವಿಶೇಷತೆ ಇದೆ. ಈ ಸಿನಿಮಾ ಉತ್ಸವದ…

11 hours ago

Pavithra Jayaram: ಚಂದು ಪವಿತ್ರಾ ಬಗ್ಗೆ ಹೊರ ಬಂದ ಸುದ್ದಿಗಳು, ಚಂದು ಸಾವಿನ ಬೆನ್ನಲ್ಲೇ ಪವಿತ್ರಾ ಅವರ ಪುತ್ರನ ಸ್ಪಷ್ಟನೆ

Pavithra Jayaram: ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಹೆಸರನ್ನು ಮಾಡಿದ್ದ ನಟಿ ಪವಿತ್ರಾ ಜಯರಾಂ (Pavithra Jayaram) ಅವರು ಕೆಲವೇ…

12 hours ago

Anushka Shetty: ಕೂಡಿ ಬಂತು ಕಂಕಣ ಭಾಗ್ಯ; ಕನ್ನಡದವರನ್ನೇ ಮದ್ವೆ ಆಗಲಿರುವ ಅನುಷ್ಕಾ, ಫ್ಯಾನ್ಸ್ ಖುಷಿ

Anushka Shetty: ಸಿನಿಮಾ ಸೆಲೆಬ್ರಿಟಿಗಳ ಮದುವೆ ವಿಚಾರಗಳ ಕುರಿತಸಗಿ ಆಗಾಗ ಕೆಲವೊಂದು ಸುದ್ದಿಗಳು ಹೊರ ಬರುತ್ತಲೇ ಇರುತ್ತದೆ. ಅದರಲ್ಲೂ ಸ್ಟಾರ್…

15 hours ago

Shanti Williams: ಗರ್ಭಿಣಿ ಆಗಿದ್ರೂ ಹಣ ಕೊಟ್ಟಿದ್ದೆ: ನಟ ಮೋಹನ್ ಲಾಲ್ ಇನ್ನೊಂದು ಮುಖ ತೋರಿಸಿದ ಹಿರಿಯ ನಟಿ

Shanti Williams: ಮಲೆಯಾಳಂ ಸಿನಿಮಾ ರಂಗದ ಹಿರಿಯ ನಟಿ, ಪ್ರಸ್ತುತ ಸಿನಿಮಾ ರಂಗದಿಂದ ದೂರವೇ ಉಳಿದಿರುವ ನಟಿ ಶಾಂತಿ ವಿಲಿಯಮ್ಸ್…

17 hours ago

Amruthadhaare: ಮಲ್ಲಿಗೆ ಸ್ಕೆಚ್ ಹಾಕಿದ ಜೈದೇವ್, ಆದ್ರೆ ಆಗಿದ್ದು ಮಾತ್ರ ಬೇರೆ, ಮಹಿಮಾ ಎಂಟ್ರಿ ಶಕುಂತಲಾ ಶಾಕ್

Amruthadhaare: ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿನ ಹೊಸ ಟ್ವಿಸ್ಟ್ ಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿದೆ. ಮಲ್ಲಿಯನ್ನು ಮುಗಿಸಲು ಜೈದೇವ್…

18 hours ago

Kiara Advani: ಕಾನ್ ಸಿನಿಮೋತ್ಸವದಲ್ಲಿ ಅಂದದ ಕಿಚ್ಚು ಹೊತ್ತಿಸಿದ ಕಿಯಾರಾ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

Kiara Advani: ಕಾನ್ (Cannes 2024) ಸಿನಿಮಾ ಉತ್ಸವ ಬಂತೆಂದರೆ ಅಲ್ಲಿ ವಿಶ್ವದ ಸಿನಿಮಾ ತಾರೆಯರ ಚಿತ್ರ ವಿಚಿತ್ರ ಹಾಗೂ…

1 day ago

This website uses cookies.