Sreeleela: ಬಾಲಿವುಡ್ ನಲ್ಲಿ ಶ್ರೀಲೀಲಾ ಕಮಾಲ್, ಸಾಲು ಸಾಲು ಸಿನಿಮಾ ಆಫರ್, ಸ್ಟಾರ್ ನಟನಿಗೆ ನಾಯಕಿ

Written by Soma Shekar

Published on:

---Join Our Channel---

Sreeleela: ತೆಲುಗು ಸಿನಿಮಾ ರಂಗಕ್ಕೆ ಹಾರಿದ ನಟಿಯರಲ್ಲಿ ಅವಕಾಶಗಳ ವಿಷಯದಲ್ಲಿ ಅದೃಷ್ಟ ಪಡೆದವರು ನಟಿ ಶ್ರೀಲೀಲಾ (Sreeleela). ಟಾಲಿವುಡ್ ನಲ್ಲಿ ಮೊದಲ ಸಿನಿಮಾ ಸೋತರೂ ನಟಿಗೆ ಮಾತ್ರ ಸ್ಟಾರ್ ನಟರ ಸಿನಿಮಾಗಳಲ್ಲಿ ಏಕಕಾಲಕ್ಕೆ ಸಾಲು ಸಾಲು ಅವಕಾಶ ಸಿಕ್ಕಿತು. ಅವಕಾಶದಲ್ಲಿ ಸಿಕ್ಕ ಅದೃಷ್ಟ ನಟಿಗೆ ಸಿನಿಮಾ ಗೆಲುವಿನಲ್ಲಿ ಸಿಗಲಿಲ್ಲ. ಶ್ರೀಲೀಲಾ ಅವರು ನಟಿಸಿದ ಸಿನಿಮಾಗಳು ಬಹುತೇಕ ಸೋಲನ್ನು ಕಂಡವು. ಸದ್ಯಕ್ಕೆ ನಟಿ ಟಾಲಿವುಡ್ ನಲ್ಲಿ ನಟ ರವಿತೇಜ ಮತ್ತು ನಿತಿನ್ ಅವರ ಸಿನಿಮಾಗಳಲ್ಲಿ ಎರಡನೇ ಬಾರಿಗೆ ನಾಯಕಿಯಾಗುತ್ತಿದ್ದಾರೆ ಎನ್ನುವುದು ಸುದ್ದಿಗಳು.

ಈಗ ನಟಿ ರಶ್ಮಿಕಾ ನಂತರ ಶ್ರೀಲೀಲಾ ಕಡೆಗೆ ಬಾಲಿವುಡ್ (Bollywood) ಗಮನ ನೀಡಿದೆ. ಟಾಲಿವುಡ್ ನಂತರ ಈಗ ಬಾಲಿವುಡ್ ಬಾಗಿಲು ಶ್ರೀಲೀಲಾಗಾಗಿ ತೆರೆದಿದೆ.‌ ಕೆಲವೇ ದಿನಗಳ ಹಿಂದೆಯಷ್ಟೇ ಶ್ರೀಲೀಲಾ ಬಾಲಿವುಡ್ ನ ಹಿರಿಯ ನಟ ಸೈಫ್ ಅಲಿ ಖಾನ್ ಅವರ ಪುತ್ರ ಇಬ್ರಾಹಿಂ ಅಲಿ ಖಾನ್ ಅವರ ಬಾಲಿವುಡ್ ನ ಚೊಚ್ಚಲ ಸಿನಿಮಾದಲ್ಲಿ ನಾಯಕಿಯಾಗುತ್ತಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿತ್ತು.

ಈಗ ಅದರ ಬೆನ್ನಲ್ಲೇ ಮತ್ತೊಂದು ಹೊಸ ಸುದ್ದಿ ಹೊರಗೆ ಬಂದಿದೆ. ಈ ಹೊಸ ಸುದ್ದಿ ಏನು ಎನ್ನುವುದಾದರೆ ಶ್ರೀಲೀಲಾ ಬಾಲಿವುಡ್ ನ ಜನಪ್ರಿಯ ನಟ ವರುಣ್ ಧವನ್ (Varun Dhawan) ಜೊತೆಗೆ ಹೊಸ ಸಿನಿಮಾದಲ್ಲಿ ನಾಯಕಿಯಾಗಲಿದ್ದಾರೆ ಎನ್ನಲಾಗಿದೆ. ಅಂದ, ಅಭಿನಯ ಮತ್ತು ಡ್ಯಾನ್ಸ್ ವಿಚಾರದಲ್ಲಿ ಹೆಸರನ್ನು ಗಿಟ್ಟಿಸಿಕೊಂಡಿರುವ ಶ್ರೀಲೀಲಾಗೆ ಈಗ ಬಾಲಿವುಡ್ ಅವಕಾಶಗಳು ಅರಸಿ ಬರುತ್ತಿವೆ.

ವರುಣ್ ಧವನ್ ಜೊತೆಗಿನ ಹೊಸ ಸಿನಿಮಾ ಕಥೆಯನ್ನು ಕೇಳಿ ನಟಿ ಥ್ರಿಲ್ ಆಗಿದ್ದಾರೆನ್ನಲಾಗಿದೆ. ಇದೇ ಸಿನಿಮಾದಲ್ಲಿ ಮತ್ತೊಬ್ಬ ಜನಪ್ರಿಯ ನಟಿ ಮೃಣಾಲ್ ಠಾಕೂರ್ ಸಹಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಶ್ರೀಲೀಲಾ ಬಾಲಿವುಡ್ ನಲ್ಲೂ ಕಮಾಲ್ ಮಾಡ್ತಾರಾ ಕಾದು ನೋಡಬೇಕಾಗಿದೆ. ಇದೇ ವೇಳೆ ನಟಿಯ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ ಅನ್ನೋದ್ರಲ್ಲಿ ಅನುಮಾನ ಇಲ್ಲ.

Leave a Comment