Sreeleela: ಆ ಸ್ಟಾರ್ ನಟನ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕೋದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಶ್ರೀಲೀಲಾ

Written by Soma Shekar

Published on:

---Join Our Channel---

Sreeleela: ಸ್ಟಾರ್ ನಟಿ ಶ್ರೀಲೀಲಾ (Sreeleela) ಟಾಲಿವುಡ್ ನಲ್ಲಿ ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ, ಸ್ಟಾರ್ ನಟರ ಜೊತೆಗೆ ನಟಿಸಿದ್ದಾರೆ ಮತ್ತು ದೊಡ್ಡ ಹೆಸರನ್ನು ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶ್ರೀಲೀಲಾ ಸಿನಿಮಾಗಳು ದೊಡ್ಡ ಸಕ್ಸಸ್ ಪಡೆದಿಲ್ಲವಾದರೂ ಕೂಡಾ ನಟಿ ಸ್ಟಾರ್ ‌ನಟಿಯರ ಸಾಲಿನಲ್ಲಿ ಹೆಸರನ್ನ ಪಡೆದುಕೊಂಡಿದ್ದಾರೆ. ಶ್ರೀಲೀಲಾ ಅವರು ಪ್ರಸ್ತುತ ಪವನ್ ಕಲ್ಯಾಣ್ ಜೊತೆಗೆ ಒಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಬೇರೆ ಹೊಸ ಸಿ‌ನಿಮಾಗಳ ಕುರಿತಾಗಿ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ಸಾಮಾನ್ಯವಾಗಿ ಸ್ಟಾರ್ ನಟಿಯರು ತಾವು ಯಶಸ್ವಿ ನಟಿಯರಾಗಿರುವಾಗಲೇ ಐಟಂ ಸಾಂಗ್ ಗಳನ್ನು (item song) ಮಾಡೋದು ಅಪರೂಪ. ಆದರೆ ಈಗ ಶ್ರೀಲೀಲಾ ಅಂತದೊಂದು ಸಾಹಸವನ್ನು ಮಾಡಲು ಮುಂದಾಗಿದ್ದಾರೆ. ನಟಿಯು ಹೊಸ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆಯನ್ನು ಹಾಕೋದಕ್ಕೆ ಗ್ರೀನ್ ಸಿಗ್ನಲ್ ಅನ್ನು ನೀಡಿದ್ದಾರೆ ಅನ್ನೋ ಸುದ್ದಿ ಈಗ ಟಾಲಿವುಡ್ (Tollywood) ಅಂಗಳದಲ್ಲಿ ಗಿರಕಿ ಹೊಡೆಯುತ್ತಿದೆ.

ಶ್ರೀಲೀಲಾ ಟಾಲಿವುಡ್ ನಲ್ಲಿ ನಟಿಸಿದ ಮೊದಲ ಸಿನಿಮಾ ಫ್ಲಾಪ್ ಆದ್ರೂ ಕೂಡಾ ನಟಿಗೆ ದೊಡ್ಡ ಜನಪ್ರಿಯತೆಯನ್ನು ಕಂಡುಕೊಟ್ಟಿತು. ಇನ್ನು ಶ್ರೀಲೀಲಾ ಡ್ಯಾನ್ಸ್ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ತೆಲುಗಿನಲ್ಲಿ ಮಾಸ್ ಮಹಾರಾಜ್ ಖ್ಯಾತಿಯ ರವಿತೇಜ (Raviteja), ಮಹೇಶ್ ಬಾಬು ರಂತಹ (Mahesh Babu) ಸ್ಟಾರ್ ನಟರು ಸಹಾ ಶ್ರೀಲೀಲಾ ಡ್ಯಾನ್ಸ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಹೊರ ಬಂದಿರುವ ಸುದ್ದಿಗಳ ಪ್ರಕಾರ ಶ್ರೀಲೀಲಾ ತಮಿಳಿನಲ್ಲಿ ಸ್ಟಾರ್ ನಟ ದಳಪತಿ ವಿಜಯ್ (Thalapathi Vijay) ಅವರ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಚಿತ್ರತಂಡ ನಟಿಯನ್ನು ಸಂಪರ್ಕಿಸಿದ್ದು, ಹಾಡಿನ ವಿಚಾರವಾಗಿ ಮಾತುಕತೆ ‌ಮುಗಿದಿದೆ ಎಂರು ತಿಳಿದು ಬಂದಿದೆ. ಶ್ರೀಲೀಲಾಗೆ ಮೊದಲು ಬಾಲಿವುಡ್ ನ ನಟಿಯರನ್ನು ಸಂಪರ್ಕಿಸಿ ಕೊನೆಗೆ ಅವಕಾಶ ಶ್ರೀಲೀಲಾಗೆ ದಕ್ಕಿದೆ.

Leave a Comment