Malaika Arora: ಮಗನ ವರ್ಜಿನಿಟಿ ಬಗ್ಗೆ ಕೇಳಿದ ಅಮ್ಮನಿಗೆ ಶಾಕ್ ಕೊಟ್ಟ ಮಗ: ಥೂ ಏನಿದೆಲ್ಲಾ ಅಂತ ನೆಟ್ಟಿಗರು

Written by Soma Shekar

Published on:

---Join Our Channel---

Malaika Arora : ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ಬಗ್ಗೆ ಪ್ರತ್ಯೇಕ ಪರಿಚಯದ ಅಗತ್ಯ ಇಲ್ಲ. ಹಿಂದಿ ಸಿನಿಮಾ ರಂಗದಲ್ಲಿ ಐಟಂ ಹಾಡುಗಳಿಗೆ ಹೆಜ್ಜೆ ಹಾಕಿರುವ ಈ ನಟಿ ತೆಲುಗಿನಲ್ಲಿ ಸಹಾ ಒಂದೆರಡು ಸಿನಿಮಾಗಳಲ್ಲಿ ಡ್ಯಾನ್ಸ್ ಮಾಡಿದ್ದಾರೆ‌. ಸಿನಿಮಾಗಳು ಮಾತ್ರವೇ ಅಲ್ಲದೇ ಕಿರುತೆರೆಯಲ್ಲಿ ರಿಯಾಲಿಟಿ ಶೋ (Reality show) ಗಳ ಜಡ್ಜ್ ಆಗಿ, ಓಟಿಟಿ ವೇದಿಕೆಗಳ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿಯೂ ಹೆಸರನ್ನು ಮಾಡಿದ್ದಾರೆ. ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ (Arbaz Khan) ಜೊತೆಗೆ ವಿಚ್ಛೇದನ ಪಡೆದ ನಂತರ ನಟಿ ಯುವನಟ ಅರ್ಜುನ್ ಕಪೂರ್ ಜೊತೆಗೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದಾರೆ ಮಲೈಕಾ ಅರೋರಾ.

ಮಲೈಕಾ ಅರೋರಾ ಅವರ ಮಗ ಅರ್ಹಾನ್ ಖಾನ್ (Arhan Khan) ಒಂದು ಪಾಡ್ ಕಾಸ್ಟ್ ನಡೆಸುತ್ತಿದ್ದು ಅದಕ್ಕೆ ದಮ್ ಬಿರ್ಯಾನಿ (Dum Biryani) ಎಂದು ಹೆಸರನ್ನು ಇಟ್ಟಿದ್ದಾರೆ. ಹೆಸರಿಗೆ ತಕ್ಕ ಹಾಗೆ ಸಂದರ್ಶನದ ವೇಳೆಯಲ್ಲಿ ಸೆಲೆಬ್ರಿಟಿಗಳ ಹತ್ರ ಭರ್ಜರಿ ಮಸಾಲೆ ಪ್ರಶ್ನೆಗಳನ್ನು ಕೇಳುತ್ತಾರೆ ಅರ್ಹಾನ್. ಈಗ ಎರಡನೇ ಎಪಿಸೋಡ್ ಗೆ ಅರ್ಹಾನ್ ತಾಯಿ ಮಲೈಕಾ ಗೆಸ್ಟ್ ಆಗಿ ಬಂದಿದ್ದು, ಅದರ ಒಂದು ಟೀಸರ್ ಹೊರಗೆ ಬಂದಿದ್ದು, ಇದರಲ್ಲಿ ಮಲೈಕಾ ಮಗನನ್ನು ಕೇಳಿದ ಪ್ರಶ್ನೆ ಎಲ್ಲರಿಗೂ ಶಾಕ್ ನೀಡಿದೆ.

ಹೊಸ ಎಪಿಸೋಡ್ ನಲ್ಲಿ ಮಗನ ಬದಲಾಗಿ ಅಮ್ಮನೇ ನಿರೂಪಕಿಯಾಗಿ ಬದಲಾದಂತೆ ಕಂಡಿದೆ. ಮಲೈಕಾ ತಮ್ಮ ಮಗನನ್ನು, ನೀನು ನಿನ್ನ ವರ್ಜಿನಿಟಿಯನ್ನು (Verginity) ಕಳ್ಕೊಂಡಿದ್ದು ಯಾವಾಗ? ಅನ್ನೋ ಪ್ರಶ್ನೆಯನ್ನು ಕೇಳಿದ್ದಾರೆ. ಇದನ್ನ ಕೇಳಿ ಶಾಕ್ ಆದ ಅರ್ಹಾನ್ ಉತ್ತರ ನೀಡೋ ಬದಲಾಗಿ ತಾಯಿಯನ್ನ, ಅಮ್ಮಾ ನೀನು ಮದುವೆ ಯಾವಾಗ ಆಗ್ತೀಯಾ ಅಂತ ಕೇಳಿದ್ದಾರೆ. ಇದಕ್ಕೆ ಮಲೈಕಾ ಏನು ಉತ್ತರವನ್ನು ಕೊಟ್ರು ಅನ್ನೋದನ್ನ ಪಾಡ್ ಕಾಸ್ಟ್ ನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ.

ಈ ಟೀಸರ್ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರು ವೈವಿದ್ಯಮಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅನೇಕರು ಅಮ್ಮ, ಮಗನು ಆಡಬೇಕಾಗಿರೋ ಮಾತುಗಳು ಇದೇನಾ? ಆಧುನಿಕತೆ ಅನ್ನೋ ಹೆಸರಿಲ್ಲಿ ಅಮ್ಮ ಮಗನ ಬಾಂಧವ್ಯವನ್ನು ಹಾಳು ಮಾಡೋದು ಕೂಡಾ ಕಾರ್ಪೊರೇಟ್ ಕಲ್ಚರ್ ಅನ್ನೋ ಕಾಲ ಬಂದಿದೆ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದೇ ವೇಳೆ ಕೆಲವರು ಅಮ್ಮ ಮಗ ಎಷ್ಟು ಕ್ಲೋಸ್ ಆಗಿದ್ದಾರೆ ಎಂದು ಮೆಚ್ಚುಗೆಗಳನ್ನು ನೀಡಿದ್ದಾರೆ.

Leave a Comment