Sreeleela: ಅಯ್ಯೋ, ಶ್ರೀಲೀಲಾಗೆ ಇದೆಂತ ಪರಿಸ್ಥಿತಿ ಬಂತು; ಬೇಸರದಲ್ಲಿ ಫ್ಯಾನ್ಸ್, ಶಾಕ್ ಆದ್ರು ಇದೇ ನಿಜ

Written by Soma Shekar

Published on:

---Join Our Channel---

Sreeleela: ಟಾಲಿವುಡ್ ಗೆ (Tollywood) ಎಂಟ್ರಿ ಕೊಟ್ಟ ಅಲ್ಪ ಸಮಯದಲ್ಲೇ ಕಮಾಲ್ ಮಾಡಿದ್ದ ನಟಿ ಶ್ರೀಲೀಲಾ (Sreeleela) ಸಾಲು ಸಾಲು ಸ್ಟಾರ್ ನಟರ ಜೊತೆಗೆ ಸಿನಿಮಾಗಳನ್ನು ಮಾಡುತ್ತಿದ್ದರು. ಆದರೆ ಇದೀಗ ನಟಿಗೆ ಅದೃಷ್ಟ ಕೈಕೊಟ್ಟ ಹಾಗಿದೆ. ಸ್ಟಾರ್ ನಟರ ಜೊತೆಗೆ ಶ್ರೀಲೀಲಾ ಮಾಡಬೇಕಿದ್ದ ಸಿನಿಮಾಗಳ ಅವಕಾಶ ಈಗ ನಟಿಯ ಕೈ ಜಾರಿ ಹೋಗುತ್ತಿವೆ ಎನ್ನುವುದು ಅವರ ಅಭಿಮಾನಿಗಳಿಗೆ ದೊಡ್ಡ ಶಾಕಿಂಗ್ ಸುದ್ದಿಯಾಗಿದೆ. ಕೆಲವೇ ದಿನಗಳ ಹಿಂದೆಯಷ್ಟೇ ಸ್ಟಾರ್ ನಟನ ಸಿನಿಮಾದಿಂದ ಹೊರ ಬಂದಿದ್ದ ಶ್ರೀಲೀಲಾ ಈಗ ಮತ್ತೊಬ್ಬ ಸ್ಟಾರ್ ಸಿನಿಮಾದಿಂದ ಔಟ್ ಆಗಿದ್ದಾರೆ.

ಹೌದು, ಕೆಲವೇ ದಿನಗಳ ಹಿಂದೆಯಷ್ಟೇ ನಟಿ ವಿಜಯ ದೇವರಕೊಂಡ (Vijaya Devarakonda) ಜೊತೆಗೆ ನಟಿಸಬೇಕಿದ್ದ ಸಿನಿಮಾದಿಂದ ಹೊರ ಬಂದ ವಿಷಯ ಸುದ್ದಿ ಆಗಿತ್ತು. ಚಿತ್ರದ ಮುಹೂರ್ತ ನಡೆದಾಗ ಹಾಜರಿದ್ದ ಶ್ರೀಲೀಲಾ ಈಗ ಆ ಸಿನಿಮಾದಿಂದ ಹೊರ ನಡೆದಿದ್ದು, ಬೇರೊಬ್ಬ ನಟಿ ಶ್ರೀಲೀಲಾ ಜಾಗಕ್ಕೆ ನಾಯಕಿಯಾಗಿ ಎಂಟ್ರಿಯನ್ನು ಕೊಟ್ಟಿದ್ದಾರೆ ಎನ್ನುವ ಸುದ್ದಿ ಎಲ್ಲರಿಗೂ ದೊಡ್ಡ ಶಾಕ್ ನೀಡಿತ್ತು. ಈಗ ಅದರ ಬೆನ್ನಲ್ಲೇ ಮತ್ತೊಂದು ಸುದ್ದಿ ಇನ್ನಷ್ಟು ಅಚ್ಚರಿ ಮೂಡಿಸಿದೆ.

ಶ್ರೀಲೀಲಾ ತೆಲುಗಿನ ಮತ್ತೊಬ್ಬ ಸ್ಟಾರ್ ನಟ ನಿತಿನ್ (Nithin) ಜೊತೆಗೆ ಒಂದು ಸಿನಿಮಾಕ್ಕೆ ನಾಯಕಿಯಾಗಿರುವ ವಿಚಾರ ಅಧಿಕೃತ ಘೋಷಣೆ ಆಗಿ ಸಾಕಷ್ಟು ಸಮಯವೇ ಕಳೆದಿತ್ತು. ಸಿನಿಮಾಕ್ಕೆ ರಾಬಿನ್ ಹುಡ್ ಎನ್ನುವ ಟೈಟಲ್ ಅನ್ನು ನೀಡಲಾಗಿತ್ತು. ಈ ಹಿಂದೆ ಸಹಾ ಒಂದು ಸಿನಿಮಾದಲ್ಲಿ ನಿತಿನ್ ಮತ್ತು ಶ್ರೀಲೀಲಾ ಜೋಡಿಯಾಗಿ ನಟಿಸಿದ್ದರಿಂದ ಹೊಸ ಸಿನಿಮಾದಲ್ಲಿ ಮತ್ತೊಮ್ಮೆ ಜೋಡಿಯಾಗಲಿದ್ದಾರೆಂದು ಅಭಿಮಾನಿಗಳು ಖುಷಿಯಾಗಿದ್ದರು.

ಆದರೆ ಈಗ ಈ ಹೊಸ ಸಿನಿಮಾದಿಂದ ಶ್ರೀಲೀಲಾ ಅವರನ್ನು ಕೈಬಿಡಲಾಗಿದೆ. ಇಷ್ಟು ದಿನ ಟಾಲಿವುಡ್ ನಲ್ಲಿ ಲಕ್ಕಿ ಸ್ಟಾರ್ ಎಂದೇ ಹೆಸರನ್ನು ಮಾಡಿದ್ದ ನಟಿಗೆ ಈಗ ಸಿನಿಮಾಗಳು ಕೈ ತಪ್ಪಿ ಹೋಗುತ್ತಿರುವುದು ಸಂಕಷ್ಟವನ್ನು ತಂದೊಡ್ಡಿದೆ. ಸದ್ಯಕ್ಕೆ ಶ್ರೀಲೀಲಾ ಕೈಯಲ್ಲಿ ಇರುವುದು ಪವನ್ ಕಲ್ಯಾಣ್ (Pawan Kalyan) ಜೊತೆಗಿನ ಉಸ್ತಾದ್ ಭಗತ್ ಸಿಂಗ್ ಸಿನಿಮಾ ಮಾತ್ರ ಎನ್ನುವುದು ಸಹಾ ನಿಜ. ಮುಂದಿನ ದಿನಗಳಲ್ಲಿ ಮತ್ತೆ ನಟಿಗೆ ಲಕ್ ವರ್ಕ್ ಮಾಡುತ್ತಾ? ಕಾದು ನೋಡಬೇಕಾಗಿದೆ.

Leave a Comment