Tollywood Heroins: ಮೊದಲ ಸಿನಿಮಾದಿಂದಲೇ ಸ್ಟಾರ್ ಗಳಾದ ಈ ಇಬ್ಬರ ಅಬ್ಬರ ತಗ್ಗಿದ್ದೇಕೆ? ಚಾನ್ಸ್ ಸಿಕ್ತಿಲ್ಲ ಯಾಕೆ?

Written by Soma Shekar

Published on:

---Join Our Channel---

Tollywood Heroins: ಸಿನಿಮಾ ರಂಗದಲ್ಲಿ ಕೆಲವು ನಟ ನಟಿಯರಿಗೆ ಮೊದಲ ಸಿನಿಮಾದ ಮೂಲಕವೇ ದೊಡ್ಡ ಕ್ರೇಜ್ ಸೃಷ್ಟಿಯಾಗುತ್ತದೆ ಮತ್ತು ಒಂದೇ ಸಿನಿಮಾದಿಂದ ರಾತ್ರೋ ರಾತ್ರಿ ಸ್ಟಾರ್ ಗಳ ಮಟ್ಟಕ್ಕೆ ಹೆಸರನ್ನು ಮಾಡಿ ಬಿಡುತ್ತಾರೆ. ಜಸ್ಟ್ ಒಂದು ಸಿನಿಮಾ ಅವರ ಅದೃಷ್ಟವನ್ನೇ ಬದಲಿಸಿಬಿಡುತ್ತದೆ. ಟಾಲಿವುಡ್ ನಲ್ಲಿ ಸಹಾ ಇತ್ತೀಚಿನ ವರ್ಷಗಳಲ್ಲಿ ಈ ರೀತಿ ಮೊದಲ ಸಿನಿಮಾದ ಮೂಲಕ ಮೋಡಿ ಮಾಡಿದವರಲ್ಲಿ ಇಬ್ಬರು ನಟಿಯರ (Tollywood Heroins) ಹೆಸರು ಮಂಚೂಣಿಯಲ್ಲಿದೆ. ಅವರೇ ನಟಿಯರಾದ ಕೃತಿ ಶೆಟ್ಟಿ ಮತ್ತು ಶ್ರೀಲೀಲಾ.

ಕೃತಿ ಶೆಟ್ಟಿ (Kriti Shetty) ಉಪ್ಪೆನ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿಯನ್ನ ಕೊಟ್ರು. ಈ ಸಿನಿಮಾ ದೊಡ್ಡ ಸಕ್ಸಸ್ ಅನ್ನು ಪಡೆದು ನಟಿ ಬೇಬಮ್ಮ ಪಾತ್ರದ ಮೂಲಕ ಅಪಾರ ಅಭಿಮಾ‌ನಿಗಳನ್ನು ಪಡೆದರು ಮತ್ತು ಜನ ಅದೇ ಹೆಸರಿನಿಂದ ನಟಿಯನ್ನು ಕರೆಯಲು ಆರಂಭಿಸಿದರು. ಮೊದಲ ಸಿನಿಮಾದ ಮೂಲಕವೇ ಕೃತಿ ಸ್ಟಾರ್ ಆಗಿ ಬಿಟ್ಟರು.

ಇನ್ನೊಂದೆಡೆ ನಟಿ ಶ್ರೀಲೀಲಾ (Sreeleela) ಅವರ ಟಾಲಿವುಡ್ ಎಂಟ್ರಿಯ ಸಿನಿಮಾ ಪೆಳ್ಳಿಸಂದಡಿ ನಿರೀಕ್ಷಿತ ಗೆಲುವನ್ನು ಸಾಧಿಸದೇ ಹೋದರೂ ಶ್ರೀಲೀಲಾ ಅದೃಷ್ಟವನ್ನು ಬದಲಾಯಿಸಿತು. ಈ ಸಿನಿಮಾ ಮೂಲಕ ಟಾಲಿವುಡ್ ಗಮನ ಸೆಳೆದ ಶ್ರೀಲೀಲಾ ಮೊದಲ ಸಿನಿಮಾದ ಮೂಲಕವೇ ಭರ್ಜರಿ ಕ್ರೇಜ್ ಅನ್ನು ಹುಟ್ಟು ಹಾಕಿದರು ಎನ್ನುವುದರಲ್ಲಿ ಎರಡು ಮಾತಿಲ್ಲ.

ಹೀಗೆ ಮೊದಲ ಸಿನಿಮಾದ ಮೂಲಕವೇ ಸದ್ದು, ಸುದ್ದಿ ಮಾಡಿದ ಈ ಇಬ್ಬರು ನಟಿಯರಿಗೆ ಮೊದಲ ಸಿನಿಮಾ ನಂತರ ಸ್ಟಾರ್ ನಟರ ಜೊತೆಗೆ ನಟಿಸುವ ಅವಕಾಶಗಳು ಅರಸಿ ಬಂದವು. ಅದರಲ್ಲೂ ನಟಿ ಶ್ರೀಲೀಲಾ ಬೇರೆಲ್ಲಾ ನಟಿಯರನ್ನು ಹಿಂದಿಕ್ಕಿ ಸಿಕ್ಕಾಪಟ್ಟೆ ಬೇಡಿಕೆ ಪಡೆದ ನಟಿಯಾಗಿ, ಏಕಕಾಲದಲ್ಲಿ ಎಂಟು ಸಿನಿಮಾಗಳಲ್ಲಿ ನಟಿಯಾಗಿ ನಟಿಸುತ್ತಿರುವ ವಿಚಾರಗಳು ಸುದ್ದಿಯಾದವು.

ಕೃತಿ ಅವರಿಗೆ ಮೊದಲ ಸಿನಿಮಾ ನಂತರ ನಾಗಚೈತನ್ಯ ಜೊತೆ ನಟಿಸಿದ ಸಿನಿಮಾ ಹೊರತಾಗಿ ಬೇರೆ ಯಾವುದೇ ಸಿನಿಮಾದಲ್ಲೂ ಗೆಲುವು ಸಿಕ್ಕಿಲ್ಲ. ಶ್ರೀಲೀಲಾಗೆ ಸಹಾ ರವಿತೇಜ ಜೊತೆಗೆ ನಟಿಸಿದ ಸಿನಿಮಾ ಒಂದನ್ನ ಬಿಟ್ಟರೆ ಉಳಿದ ಸಿನಿಮಾಗಳಲ್ಲಿ ಅಂತಹ ದೊಡ್ಡ ಯಶಸ್ಸು ಖಂಡಿತ ಸಿಕ್ಕಿಲ್ಲ.

ಮೊದಲ ಸಿನಿಮಾ ನಂತರ ನಿರಂತರವಾಗಿ ಸಾಲು ಸಾಲು ಸಿನಿಮಾಗಳ ಆಫರ್ ಅನ್ನು ಪಡೆದುಕೊಂಡ ಈ ಇಬ್ಬರು ನಟಿಯರಿಗೆ ಈಗ ಹೊಸ ಅವಕಾಶಗಳು ಪಡೆಯುವುದು ಕಷ್ಟವಾಗಿದೆ ಎನ್ನಲಾಗಿದೆ‌. ಕೃತಿ ಶೆಟ್ಟಿ ಸದ್ಯಕ್ಕೆ ತಮಿಳಿನ ಸಿನಿಮಾವೊಂದಕ್ಕೆ ನಾಯಕಿಯಾಗಿದ್ದಾರೆ. ಶ್ರೀಲೀಲಾ ಕೈಯಲ್ಲಿ ಎರಡು ಸಿನಿಮಾಗಳು ಮಾತ್ರವೇ ಇದೆ ಎನ್ನಲಾಗಿದೆ.

Leave a Comment