Tharun Sudhir: ಸ್ಯಾಂಡಲ್ವುಡ್ ನ ಜನಪ್ರಿಯ ನಿರ್ದೇಶಕ ತರುಣ್ ಸುಧೀರ್ ಮದುವೆ ಖ್ಯಾತ ನಟಿಯ ಜೊತೆಗೆ?

Written by Soma Shekar

Published on:

---Join Our Channel---

Tharun Sudhir : ಕನ್ನಡ ಸಿನಿಮಾರಂಗ (Sandalwood) ಕಂಡಂತಹ ಅದ್ಭುತ ಕಲಾವಿದರಲ್ಲಿ ಖಳನಾಯಕನ ಪಾತ್ರಗಳಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿರುವ ಹಿರಿಯ ನಟ ದಿವಂಗತ ಸುಧೀರ್ (Sudhir)ಅವರ ಕಿರಿಯ ಪುತ್ರ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ನಿರ್ದೇಶಕ ತರುಣ್ ಸುಧೀರ್ (Tharun Sudhir) ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಅಡಿ ಇಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಎಲ್ಲೆಡೆ ಹರಿದಾಡಿದೆ. ಪ್ರಸ್ತುತ ತರುಣ್ ಸುಧೀರ್ ಅವರು ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಮಹಾನಟಿಯಲ್ಲಿ (Mahanati Show) ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ತರುಣ್ ಸುಧೀರ್ ರವರು ಹೊಸ ಜೀವನದ ಶುಭಾರಂಭವನ್ನು ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ ಎನ್ನುವ ಮಾತೊಂದು ಜೋರಾಗಿ ಕೇಳಿ ಬರುತ್ತಿದೆ. ಸ್ಯಾಂಡಲ್ವುಡ್ ನಲ್ಲಿ ನಟನಾಗಿ ಎಂಟ್ರಿಯನ್ನು ಕೊಟ್ಟಂತಹ ತರುಣ್ ಸುಧೀರ್ ಅವರು ಚೌಕ ಸಿನಿಮಾದ ಮೂಲಕ ನಿರ್ದೇಶಕರಾಗಿ ಬದಲಾಗಿದ್ದಾರೆ. ಈ ಸಿನಿಮಾದ ಬಳಿಕ ದರ್ಶನ್ ಜೊತೆಗೆ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನ ನೀಡುವ ಮೂಲಕ ಇನ್ನಷ್ಟು ಜನಪ್ರಿಯತೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇವೆಲ್ಲವುಗಳ ಬೆನ್ನಲ್ಲೇ ಈಗ ತರುಣ್ ಸುಧೀರ್ ಅವರು ತಮ್ಮ ಮದುವೆಯ ಸಿದ್ಧತೆಗಳನ್ನು ನಡೆಸಿದ್ದಾರೆ ಎಂದು ಸುದ್ದಿಗಳಾಗಿವೆ. ಜನಪ್ರಿಯ ನಟ ಸುಧೀರ್ ಮತ್ತು ಮಾಲತಿ ದಂಪತಿಯ ಕಿರಿಯ ಪುತ್ರನಾಗಿರುವ ತರುಣ್ ಸುಧೀರ್ ಅವರ ವಯಸ್ಸು 40 ರ ಗಡಿಯಲ್ಲಿದೆ. ನಿರ್ದೇಶಕನಾಗಿ ಉತ್ತಮ ಸಿನಿಮಾಗಳನ್ನು ಮಾಡಿರುವ ಅವರು ಮುಂದೆ ಕೂಡಾ ಇನ್ನಷ್ಟು ಅತ್ಯುತ್ತಮ ಸಿನಿಮಾಗಳನ್ನ ನೀಡಬೇಕೆಂಬ ಕನಸನ್ನ ಹೊಂದಿದ್ದಾರೆ.

ಈ ಹಿಂದೆಯೊಮ್ಮೆ ಮದುವೆಯ ಬಗ್ಗೆ ಮಾತನಾಡುತ್ತಾ, ಸದ್ಯಕ್ಕೆ ಮದುವೆಯ ಆಲೋಚನೆ ಇಲ್ಲ. ಮದುವೆಯಾಗದೆ ನೆಮ್ಮದಿಯಾಗಿದ್ದೇನೆ ಎಂದು ಹೇಳಿದ್ದರು. ಆದರೆ ಅವರ ತಾಯಿ ಮಾತ್ರ ಮಗನ ಮದುವೆಯನ್ನು ಮಾಡಲು ನಿರ್ಧರಿಸಿರುವಂತೆ ಕಂಡಿದೆ ಎನ್ನುವ ಮಾತುಗಳು ಹರಿದಾಡಿದ್ದು, ತೆರೆಮರೆಯಲ್ಲಿ ಮದುವೆ ಸಿದ್ಧತೆಗಳು ಜೋರಾಗಿ ನಡೆಯುತ್ತಿದೆ ಎನ್ನುವ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Leave a Comment