Rakhi Sawant: ಹುಡುಗಿಯರೇ ರೇಪ್ ಮಾಡಿಸಿಕೊಳ್ತಾರೆ, ಬಾಲಿವುಡ್ ನ ಕರಾಳ ಸತ್ಯ ಬಾಯ್ಬಿಟ್ಟ ರಾಖಿ ಸಾವಂತ್

Written by Soma Shekar

Published on:

---Join Our Channel---

Rakhi Sawant: ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ ಅನ್ನೋದು ಈಗಾಗಲೇ ಗೊತ್ತಾಗಿದೆ. ಸ್ಟಾರ್ ನಟಿಯರೇ ಈ ಬಗ್ಗೆ ಮಾತನಾಡೋ ಮೂಲಕ ಈ ವಿಚಾರಕ್ಕೆ ಇನ್ನಷ್ಟು ಸ್ಪಷ್ಟನೆಯನ್ನು ಸಹಾ ಕೊಟ್ಟಿದ್ದಾಗಿದೆ. ಸಿನಿಮಾದಲ್ಲಿ ಅವಕಾಶಗಳು ಬೇಕು ಅನ್ನೋದಾದ್ರೆ ನಿರ್ಮಾಪಕ, ನಿರ್ದೇಶಕ, ಹಾಗೂ ಇನ್ನೂ ಕೆಲವರ ಜೊತೆಗೆ ಕಾಂಪ್ರಮೈಸ್ ಮಾಡ್ಕೋಬೇಕು ಮತ್ತು ಅವರು ಕರೆದಾಗ ಮಂಚಕ್ಕೆ ಹೋಗಬೇಕು, ಹೋದ್ರೆ ಅವಕಾಶ ಇಲ್ದೇ ಹೋದ್ರೆ ಸ್ಟ್ರಗಲ್ ಅಂತ ಸಾಕಷ್ಟು ಜನ ನಟಿಯರು ತಮಗಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಕೆಲವು ನಟಿಯರಾದರೆ ತಾವು ಯಾವುದಕ್ಕೂ ಒಪ್ಪಲಿಲ್ಲ ಬದಲಾಗಿ ಮತ್ತು ಸ್ವಂತ ಪರಿಶ್ರಮದಿಂದಲೇ ಇವತ್ತು ನಟಿಯರಾಗಿ ಬೆಳೆದಿದ್ದೇವೆ ಅನ್ನೋ ಮಾತುಗಳನ್ನು ಸಹಾ ಹೇಳಿಕೊಂಡಿದ್ದಾರೆ. ಆದರೆ ಈ ವಿಚಾರದ ಇನ್ನೊಂದು ಮುಖ ಅಥವಾ ಕರಾಳ ಸತ್ಯದ ಬಗ್ಗೆ ಬಾಲಿವುಡ್ ನ ಡ್ರಾಮಾ ಕ್ವೀನ್ ಖ್ಯಾತಿಯ ನಟಿ ರಾಖಿ ಸಾವಂತ್ (Rakhi Sawant) ಬಿಚ್ಚಿಡುವ ಮೂಲಕ ಹೊಸ ಸಂಚಲನವನ್ನೇ ಸೃಷ್ಟಿಸಿದ್ದಾರೆ.‌

ರಾಖೀ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಇಂಡಸ್ಟ್ರಿಯಲ್ಲಿ ರೇಪ್ ನಡೆಯೋದಿಲ್ಲ. ಬದಲಾಗಿ ಯುವತಿಯರೇ ರೇಪ್ ಮಾಡಿಸಿಕೊಳ್ಳಲು ಮುಂದೆ ಬರ್ತಾರೆ. ಅಶ್ಲೀಲ, ಅಸಭ್ಯ ರೀತಿಯಲ್ಲಿ ವರ್ತಿಸಿ ತಮ್ಮ ಮುಂದೆ ಇರೋರನ್ನು ಉತ್ತೇಜಿಸಿ, ಪ್ರಚೋದನೆ ನೀಡಿ ಅದನ್ನೆಲ್ಲಾ ರೆಕಾರ್ಡ್ ಮಾಡಿಕೊಂಡು ನಂತರ ನಿರ್ಮಾಪಕ (Producer), ನಿರ್ದೇಶಕರನ್ನು (Directors) ಬ್ಲಾಕ್ ಮೇಲೆ ಮಾಡಿ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ.

ಆ ಯುವತಿಯರಿಗೆ ನಟನೆಯ ಗಂಧ ಗಾಳಿ ಸಹಾ ಗೊತ್ತಿರೋದಿಲ್ಲ. ಆದರೆ ತಮ್ಮ ಹತ್ರ ಇರೋ ವೀಡಿಯೋ ಹಿಡ್ಕೊಂಡು ನಮ್ಮನ್ನ ಹಿರೋಯಿನ್ ಆಗಿ ಮಾಡಿ ಇಲ್ಲ ಅಂದ್ರೆ ಈ ವೀಡಿಯೋವನ್ನು ನಿಮ್ಮ ಮನೆಯವರಿಗೆ ತೋರಿಸ್ತೀವಿ ಅಂತ ಬ್ಲಾಕ್ ಮೇಲ್ ಮಾಡ್ತಾರೆ. ಇದರಿಂದ ಬೇರೆ ದಾರಿ ಇಲ್ಲದ ನಿರ್ಮಾಪಕರು ಮತ್ತು ನಿರ್ದೇಶಕರು ಅವರನ್ನು ನಟಿಯರನ್ನಾಗಿ ಮಾಡ್ತಾರೆ ಅಂತ ರಾಖೀ ಸಾವಂತ್ ಹೇಳಿರುವ ವಿಚಾರ ವೈರಲ್ ಆಗಿದೆ.

ರಾಖಿಯ ಮಾತುಗಳು ವೈರಲ್ ಆದ ಕೂಡಲೇ ಅನೇಕರು ಸೋಶಿಯಲ್ ಮೀಡಿಯಾಗಳಲ್ಲಿ ರಾಖಿ ಸಾವಂತ್ ದೀಪಿಕಾ ಪಡುಕೋಣೆನ ಟಾರ್ಗೆಟ್ ಮಾಡ್ತಾ ಇದ್ದಾರೆ ಅನ್ನೋ ಮಾತುಗಳನ್ನ ಹೇಳೋಕೆ ಆರಂಭ ಮಾಡಿದ್ದಾರೆ. ರಾಖಿ ಯಾರ ಬಗ್ಗೆ ಹೇಳಿದ್ರೋ ಗೊತ್ತಿಲ್ಲವಾದ್ರೂ ಒಟ್ನಲ್ಲಿ ಯುವತಿಯರು ನಟಿಯರಾಗೋಕೆ ಬ್ಲಾಕ್ ಮೇಲ್ ಮಾಡ್ತಾರೆ ಅನ್ನೋ ವಿಷಯ ಮಾತ್ರ ಈಗ ಸಖತ್ ಸುದ್ದಿಯಾಗಿದೆ.

Leave a Comment