Ratan Rajput: ನಿರ್ದೇಶಕ, ನಿರ್ಮಾಪಕ ಮಾತ್ರ ಅಲ್ಲ ಚಾನ್ಸ್ ಬೇಕಂದ್ರೆ ಆ ವ್ಯಕ್ತಿ ಜೊತೆಗೂ ಮಲಗಬೇಕು; ನಟಿ ಹೇಳಿದ ಸತ್ಯ

Written by Soma Shekar

Published on:

---Join Our Channel---

Ratan Rajput: ಹೊರ ಜಗತ್ತಿಗೆ ಬಣ್ಣದ ಲೋಕದಂತೆ ಕಾಣುವ ಸಿನಿಮಾ ರಂಗದ (film industry) ಒಳಗೆ ಒಂದಷ್ಟು ನಂಬಲಾರದ ಸತ್ಯಗಳು ಇವೆ ಎನ್ನುವುದು ಆಗಾಗ ಕೇಳಿ ಬರುವ ಮಾತಾಗಿದೆ. ಅದರಲ್ಲಿ ಒಂದು ಕಾಸ್ಟಿಂಗ್ ಕೌಚ್. ಸಾಕಷ್ಟು ಜನ ನಟಿಯರು ಈಗಾಗಲೇ ಕಾಸ್ಟಿಂಗ್ ಕೌಚ್ ಕುರಿತಾಗಿ, ವೃತ್ತಿ ಜೀವನದ ಆರಂಭದಲ್ಲಿ ತಮಗೆ ಎದುರಾದ ಕಹಿ ಅನುಭವಗಳ ಕುರಿತಾಗಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಸ್ಟಾರ್ ನಟಿಯರು ಸಹಾ ತಮಗೂ ಈ ಅನುಭವ ಆಗಿದೆ ಎನ್ನುವ ಮೂಲಕ ಕಾಸ್ಟಿಂಗ್ ಕೌಚ್ ಅನ್ನೋದು ನಿಜವಾಗಿಯೂ ಅಸ್ತಿತ್ವದಲ್ಲಿದೆ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ.

ಇದೇ ವಿಚಾರವಾಗಿ ಬಾಲಿವುಡ್ ನ ಕಿರುತೆರೆಯಲ್ಲಿ ಹೆಸರನ್ನು ಮಾಡಿರುವಂತಹ ನಟಿ ರತನ್ ರಜಪೂತ್ (Ratan Rajput) ಕೂಡಾ ಮಾತನಾಡಿದ್ದು, ಈ ನಟಿಯು ದಕ್ಷಿಣ ಸಿನಿಮಾ ರಂಗದಲ್ಲಿ ತನಗೆ ಎದುರಾದ ಕಹಿ ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ. ರತನ್ ಕಿರುತೆರೆಯಲ್ಲಿ ನಟಿಸುವಾಗಲೇ ಅವರಿಗೆ ಸಾಕಷ್ಟು ಸಿನಿಮಾಗಳಿಂದ ಅವಕಾಶಗಳು ಅರಸಿ ಬಂದಿದ್ದವಂತೆ. ಹಾಗೇ ದಕ್ಷಿಣದಿಂದಲೂ ಅವರಿಗೆ ಅವಕಾಶಗಳು ಬಂದಿದ್ದವು ಎನ್ನಲಾಗಿದೆ.

ಕೆಲವರು ಉತ್ತಮ ನಿರ್ದೇಶಕರು ಇದ್ದರು. ಅದು ಬಿಟ್ಟರೆ ಮತ್ತೆ ಕೆಲವರು ನನಗೆ ಅವರು ದೇಹದ ತೂಕವನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆಯನ್ನು ನೀಡಿದ್ದರು. ತುಂಬಾ ತೆಳ್ಳಗಿದ್ದ ನಾನು ಅವರ ಮಾತನ್ನು ಒಪ್ಪಿಕೊಂಡೆ. ಅದಾದ ನಂತರ ಅವರು ಕೆಲಸಕ್ಕಾಗಿ ರಾಜಿ ಮಾಡಿಕೊಳ್ಳುವಂತೆ ಹೇಳಿದರು. ಅಲ್ಲದೇ ಇದೆಲ್ಲಾ ನಿಮಗೆ ಗೊತ್ತಿರೋದೇ ಅಲ್ವಾ ಎನ್ನುವ ಮಾತನ್ನು ಸಹಾ ಹೇಳಿದರಂತೆ.

ಇಂಡಸ್ಟ್ರಿಯಲ್ಲಿ ಒಳ್ಳೆ ಅವಕಾಶಗಳು ಬೇಕಾದ್ರೆ ನಿರ್ದೇಶಕ, ನಿರ್ಮಾಪಕ ಮತ್ತು DOP ಜೊತೆ ಕೂಡಾ ಕಾಂಪ್ರಮೈಸ್ ಆಗಬೇಕು ಅಂತ ಹೇಳಿದ್ರಂತೆ. ಹೀಗೆ ತನಗೆ ಸಿನಿಮಾ ಅವಕಾಶ ಬಂದಾಗ ಎಂತಹ ಪರಿಸ್ಥಿತಿ ಎದುರಾಗಿತ್ತು ಎನ್ನುವುದನ್ನು ಹಂಚಿಕೊಳ್ಳುವ ಮೂಲಕ ರತನ್ ಅವರು ದಕ್ಷಿಣ ಸಿನಿಮಾ ರಂಗದಲ್ಲೂ ಕಾಸ್ಟಿಂಗ್ ಕೌಸ್ ಅನ್ನೋದು ಇದೆ ಎನ್ನುವ ಮಾತನ್ನು ಹೇಳಿದ್ದಾರೆ.

Leave a Comment