Kalki 2898AD Review : ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್ ಮಹಾನಟಿಯಂತಹ ಬ್ಲಾಕ್ ಬಸ್ಟರ್ ಸಿನಿಮಾ ನಿರ್ದೇಶನ ಮಾಡಿದ ನಾಗ್ ಅಶ್ವಿನ್ (Nag Ashwin) ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವ ಸಿನಿಮಾ ಕಲ್ಕಿ 2898ಎಡಿ (Kalki 2898 AD review) ಬಾರಿ ಬಜೆಟ್ ನಲ್ಲಿ ನಿರ್ಮಾಣವಾಗಿದೆ. ಈ ಸಿನಿಮಾ ದೇಶದಲ್ಲಿ ಬಹುನಿರೀಕ್ಷಿತ ಸಿನಿಮಾ ಆಗಿ ಸಾಕಷ್ಟು ಸದ್ದು ಮತ್ತು ಸುದ್ದಿಯನ್ನು ಮಾಡಿತ್ತು. ಈಗ ಸಿನಿಮಾ ಬಿಡುಗಡೆಯ ನಂತರ ಸಿನಿಮಾದ ಕುರಿತಾಗಿ ವಿಮರ್ಶೆಗಳು ಹೊರ ಬಂದಿದ್ದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಮೆಚ್ಚುಗೆಗಳು ಹರಿದು ಬರುತ್ತಿದೆ.
ಪುರಾಣ, ವೈಜ್ಞಾನಿಕತೆ ಹಾಗೂ ಫ್ಯಾಂಟಸಿಯ ಸಮ್ಮಿಲನದಿಂದ ಮೂಡಿಬಂದ ಅದ್ಭುತ ಕಥೆಯನ್ನು ಒಂದು ಅಪರೂಪದ ದೃಶ್ಯ ಕಾವ್ಯವಾಗಿ ನಿರ್ದೇಶಕ ನಾಗ್ ಅಶ್ವಿನ್ ತೆರೆಯ ಮೇಲೆ ಮೂಡಿಸಿದ್ದಾರೆ. ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಅಶ್ವತ್ಥಾಮನಿಗೆ ಶ್ರೀಕೃಷ್ಣನು ಕೊಡುವ ಶಾಪದಿಂದ ಆರಂಭವಾಗುವ ಕಥೆಯು ಕಲ್ಕಿಯ ಜನನದೊಂದಿಗೆ ಬೆಸೆದುಕೊಳ್ಳುತ್ತದೆ. ಪಾಂಡವರ ಮೇಲೆ ಸೇಡು ತೀರಿಸಿಕೊಳ್ಳಲು ಅಶ್ವತ್ಥಾಮನು (Amitab Bachchan) ಉತ್ತರೆಯ ಗರ್ಭದಲ್ಲಿದೆ ಶಿಶುವಿನ ಮೇಲೆ ಅಸ್ತ್ರಪ್ರಯೋಗ ಮಾಡಿ ಕೊಲ್ಲುತ್ತಾನೆ.
ಅದಕ್ಕೆ ಶ್ರೀ ಕೃಷ್ಣನು ಅಶ್ವತ್ಥಾಮನ ಹಣೆಯ ಮೇಲಿದ್ದ ಹೊಳೆಯುವ ಮಣಿಯನ್ನು ಕಿತ್ತುಕೊಂಡು, ಭೂಮಿಯ ಮೇಲೆ ಶಾಶ್ವತವಾಗಿ ಬದುಕಿರು, ಬೆಟ್ಟಗುಡ್ಡಗಳಲ್ಲಿ ಅಲೆದಾಡು ಎಂದು ಅಶ್ವತ್ ಆಮೇಲೆ ಶಾಪ ನೀಡುತ್ತಾನೆ. ಅಲ್ಲದೇ ಪಾಪ ಪರಿಹಾರಕ್ಕಾಗಿ ಕಲ್ಕಿಯಾಗಿ ಜನಿಸಲಿರುವ ತನ್ನನ್ನು ಕೊಲ್ಲುವ ಶಕ್ತಿಗಳು ಕೂಡಾ ಹುಟ್ಟಿಕೊಳ್ಳುತ್ತವೆ. ಆಗ ನೀನೆ ರಕ್ಷಣೆ ಮಾಡಬೇಕೆಂದು ನಿನ್ನ ಮಣಿ ನಿನ್ನ ಬಳಿ ಸೇರುತ್ತದೆ ಕೃಷ್ಣನು ತಿಳಿಸುತ್ತಾನೆ.
ಕಲಿಯುಗದಲ್ಲಿ ಭೂಮಿಯ ಮೇಲೆ ಪಾಪಗಳು ಬೆಳೆದು ಕಾಶಿನಗರದಲ್ಲಿ ಒಂದು ಹನಿ ನೀರಿಗೂ ಜನ ಪರದಾಡುವಂತಾಗಿರುತ್ತದೆ. ಸುಪ್ರೀಂ ಯಾಸ್ಕಿನ್ (Kamal Hassan) ಕಾಂಪ್ಲೆಕ್ಸ್ ಅನ್ನುವ ನಗರವನ್ನು, ಹೊಸ ಸಾಮ್ರಾಜ್ಯವನ್ನು ಸೃಷ್ಟಿಸುತ್ತಾನೆ. ಅಲ್ಲಿರುವ ಜನರಿಗೆ ನರಕವನ್ನು ತೋರಿಸುತ್ತಾರೆ. ಸಂತಾನ ಉತ್ಪತ್ತಿ ಮಾಡುವ ಯುವತಿಯರನ್ನು ಮಾತ್ರ ತೆಗೆದುಕೊಂಡು ಹೋಗಿ ಅವರ ಮೇಲೆ ಪ್ರಯೋಗ ನಡೆಸುತ್ತಾರೆ.
ಸುಪ್ರೀಂ ಯಾಸ್ಕಿನ್ ನೀಡುವಂತಹ ಫಾರ್ಮುಲಾವನ್ನು ಫರ್ಟಿಲಿಟಿ ಇರುವ ಹುಡುಗಿಯರ ಗರ್ಭದಲ್ಲಿ ಇಂಜೆಕ್ಟ್ ಮಾಡುತ್ತಾರೆ. ಅದನ್ನು ಕನಿಷ್ಠ 120 ದಿನಗಳವರೆಗೆ ಭರಿಸುವ ಹೆಣ್ಣಿನ ಗರ್ಭದಿಂದ ಸೀರಮ್ ಕಲೆಕ್ಟ್ ಮಾಡುತ್ತಾರೆ. ಯಾವ ಹೆಣ್ಣು ಕೂಡಾ 120 ದಿನಕ್ಕಿಂತ ಹೆಚ್ಚು ಅದನ್ನು ಭರಿಸಲು ಸಾಧ್ಯವಾಗೋದಿಲ್ಲ. ಆದರೆ ಕಾಂಪ್ಲೆಕ್ಸ್ ನಲ್ಲಿ ಕೆಲಸ ಮಾಡುವ ಸುಮತಿ (Deepika Padukone) 150 ದಿನಗಳವರೆಗೆ ಅದನ್ನು ಭರಿಸುತ್ತಾಳೆ ಮತ್ತು ಯಾರ ಗಮನಕ್ಕೂ ಬರದಂತೆ ಎಚ್ಚರ ವಹಿಸುತ್ತಾಳೆ.
ಮತ್ತೊಂದು ಕಡೆ ಭೈರವ (Prabhas) ಹಣ ಕೊಟ್ಟವರ ಪರವಾಗಿ ಕೆಲಸ ಮಾಡುತ್ತಿದ್ದಾನೆ .ಒಂದು ಮಿಲಿಯನ್ ಯೂನಿಟ್ಸ್ ಸಂಪಾದನೆ ಮಾಡಿ ಕಾಂಪ್ಲೆಕ್ಸ್ ನಲ್ಲಿ ಸೆಟಲ್ ಆಗಬೇಕು ಎನ್ನುವುದು ಅವನ ಆಸೆಯಾಗಿರುತ್ತೆ. ಅದಕ್ಕೆ ಅವನ ಕಾರು ಬುಜ್ಜಿ (Bujji Car) ಸಹಾಯವಾಗಿರುತ್ತೆ. ಇನ್ನೊಂದು ಕಡೆ ಭವಿಷ್ಯತ್ತಿನ ಒಳ್ಳೆಯ ದಿನಗಳಿಗಾಗಿ ಶಂಬಾಲ ಎನ್ನುವ ರಹಸ್ಯ ನಗರದಿಂದ ಒಂದಷ್ಟು ಜನ ಯೋಧರು ಕಾಂಪ್ಲೆಕ್ಸ್ ವಿರುದ್ಧ ಹೋರಾಟ ನಡೆಸುತ್ತಾರೆ.
ಸುಮತಿ ಬಗ್ಗೆ ತಿಳಿದು ಕಾಂಪ್ಲೆಕ್ಸ್ ನಲ್ಲಿ ಇರುವವರು ಅವಳ ಗರ್ಭದಿಂದ ಸೀರಮ್ ಪಡೆಯಲು ಪ್ರಯತ್ನ ಮಾಡುತ್ತಾರೆ. ಆದರೆ ಬುದ್ಧಿವಂತಿಕೆಯಿಂದ ಸುಮತಿ ತಪ್ಪಿಸಿಕೊಂಡು ಬರುತ್ತಾಳೆ. ದೇವರನ್ನು ತನ್ನ ಗರ್ಭದಲ್ಲಿ ಬರುತ್ತಿದ್ದಾಳೆ ಎನ್ನುವುದನ್ನು ತಿಳಿದ ಅಶ್ವತ್ಥಾಮ ಆಕೆಯ ರಕ್ಷಣೆಗೆ ಬರುತ್ತಾನೆ. ಅವನಿಗೆ ಅವನ ಮಣಿ ಕೂಡ ಸಿಗುತ್ತದೆ.
ಇನ್ನೊಂದು ಕಡೆ ಸುಮತಿಯನ್ನು ಹಿಡಿದು ತಂದರೆ ಬೇಕಾದಷ್ಟು ಯೂನಿಟ್ ಕೊಡುವುದಾಗಿ ಹೇಳಿದಾಗ, ಭೈರವ ಅವಳನ್ನು ಹಿಡಿಯುವ ಪ್ರಯತ್ನಕ್ಕೆ ಮುಂದಾಗುತ್ತಾನೆ. ಈ ಸಂದರ್ಭದಲ್ಲಿ ಅಶ್ವತ್ಥಾಮ ತನ್ನ ಶಕ್ತಿಗಳಿಂದ ಅವಳನ್ನು ರಕ್ಷಿಸುವ ಕೆಲಸದಲ್ಲಿ ಭೈರವ ನ ಜೊತೆಗೆ ಹೋರಾಟ ಮಾಡುತ್ತಾನೆ. ಈ ಹೋರಾಟದ ದೃಶ್ಯಗಳು ತೆರೆಯ ಮೇಲೆ ಲೆ ಇನ್ನೊಂದು ಲೆವೆಲ್ ಗೆ ಕರೆದುಕೊಂಡು ಹೋಗುತ್ತದೆ.
ಹಾಗಾದರೆ ಅಶ್ವತ್ಥಾಮ ಒಬ್ಬನೇ ಸುಮತಿಯನ್ನು ಕಾಪಾಡ್ತಾನಾ? ಭೈರವನ ಆಸೆ ನೆರವೇರುತ್ತಾ ? ಭೈರವ ಮತ್ತು ಅಶ್ವತ್ಥಾಮನ ಮತ್ತೆ ಎಂತಹ ಹೋರಾಟ ನಡೆಯುತ್ತೆ ? ಹೋರಾಟದಲ್ಲಿ ಗೆದ್ದವರು ಯಾರು ಅನ್ನೋದನ್ನ ಸಿನಿಮಾದಲ್ಲಿ ನೋಡಬೇಕಾಗಿದೆ. ಈ ಸಿನಿಮಾದಲ್ಲಿ ವಿಜಯ ದೇವರು ಕೊಂಡ , ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್, ರಾಜ ಮೌಳಿ, ಆರ್‌ಜಿವಿ, ಫರಿಯಾ, ಅನುದೀಪ್ ರಂತಹ ನಟರು ಇದ್ದಾರೆ.
ಅವರ ಪಾತ್ರಗಳು ಏನು ಎನ್ನುವುದನ್ನು ಸಿನಿಮಾದಲ್ಲಿ ನೋಡಬೇಕು. ಆದರೆ ನಿರ್ದೇಶಕ ಮತ್ತು ಚಿತ್ರತಂಡ ಅಷ್ಟು ಜನ ಸ್ಟಾರ್ ಗಳು ಇರುವ ವಿಷಯವನ್ನು ಬಹಳ ಸೀಕ್ರೆಟ್ ಆಗಿ ಇಟ್ಟಿದ್ದು ಖಂಡಿತ ವಿಶೇಷವಾಗಿದೆ. ಸಿನಿಮಾದಲ್ಲಿ ಅಮಿತಾಬ್, ಪ್ರಭಾಸ್ ಮತ್ತು ದೀಪಿಕಾ ಅಭಿನಯ ಸಿಕ್ಕಾಪಟ್ಟೆ ಥ್ರಿಲ್ ನೀಡುತ್ತದೆ. ದೃಶ್ಯಗಳು ಪ್ರೇಕ್ಷಕರಿಗೆ ಮೈನವಿರೇಳುವಂತೆ ಮಾಡುತ್ತದೆ.
ಸಿನಿಮಾದಲ್ಲಿ ವಿಶುಯಲ್ಸ್ ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿದೆ. ಅಂತರಾಷ್ಟ್ರೀಯ ಮಟ್ಟದ ವಿಶುಯಲ್ಸ್ ಇದರಲ್ಲಿ ನೋಡಬಹುದಾಗಿದೆ. ಟೆಕ್ನಿಕಲ್ ಆಗಿಯೂ ಸಿನಿಮಾ ಬಹಳ ಸ್ಟ್ರಾಂಗ್ ಆಗಿದೆ. ಸಿನಿಮಾಟೋಗ್ರೇಫಿ, ವಿಶಯಲ್ ಎಫೆಕ್ಟ್ಸ್ ತಂಡವು ಅದ್ಭುತವಾಗಿ ಕೆಲಸ ಮಾಡಿದೆ. ನಾಗ್ ಅಶ್ವಿನ್ ಮತ್ತು ಅವರ ತಂಡದ ನಾಲ್ಕು ವರ್ಷಗಳ ಶ್ರಮ ಈಗ ತೆರೆಯ ಮೇಲೆ ಅದ್ಭುತ ದೃಶ್ಯ ಕಾವ್ಯವಾಗಿ ಮೂಡು ಬಂದಿದೆ.