Shruti Haasan: ಹಾಲಿವುಡ್ ಸಿನಿಮಾನೇ ಬೇಡ ಅಂತ ಹೊರ ಬಂದ ಸ್ಟಾರ್ ನಟಿ: ಶಾಕ್ ನಲ್ಲಿ ಫ್ಯಾನ್ಸ್

Written by Soma Shekar

Published on:

---Join Our Channel---

Shruti Haasan: ನಟಿ ಶೃತಿ ಹಾಸನ್ ಸದ್ಯಕ್ಕಂತೂ ದಕ್ಷಿಣ ಸಿನಿಮಾ ರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಚಿರಂಜೀವಿ, ಬಾಲಕೃಷ್ಣ ಮತ್ತು ಪ್ರಭಾಸ್ ಜೊತೆಗೆ ನಟಿಸಿ ಯಶಸ್ವಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಮತ್ತೊಮ್ಮೆ ದಕ್ಷಿಣ ಸಿನಿಮಾ ರಂಗದಲ್ಲಿ (South Cinema) ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಆದರೆ ಇವೆಲ್ಲವುಗಳ ನಡುವೆಯೇ ಈಗ ನಟಿ ಸಿನಿಮಾವೊಂದರಿಂದ ಹೊರಗೆ ಬಂದಿರುವ ವಿಚಾರ ಸುದ್ದಿಯಾಗುವ ಮೂಲಕ ಎಲ್ಲರ ಗಮನವನ್ನು ಸೆಳೆದಿದೆ ಮತ್ತು ಅಭಿಮಾನಿಗಳು ಶಾಕ್ ಆಗಿದ್ದಾರೆ.

ಇಂಗ್ಲೀಷ್ ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣ ಆಗುತ್ತಿರುವ ಸಿನಿಮಾ ಚೆನ್ನೈ ಸ್ಟೋರಿ (Chennai Story). ಈ ಸಿನಿಮಾದಲ್ಲಿ ಶ್ರುತಿ ಹಾಸನ್ (Shruti Haasan) ಎಂಟ್ರಿಯನ್ನು ಕೊಟ್ಟಿದ್ದಾರೆನ್ನುವ ಸುದ್ದಿಯೊಂದು ಎಲ್ಲೆಡೆ ಹರಿದಾಡಿತ್ತು. ಆದರೆ ಈಗ ಹೊರ ಬಂದಿರುವ ಹೊಸ ಸುದ್ದಿಯ ಪ್ರಕಾರ ಶೃತಿ ಹಾಸನ್ ಅವರು ಈ ಸಿನಿಮಾದಿಂದ ಶ್ರುತಿ ಹೊರ ಬಂದಿದ್ದಾರೆಂದು ಹೇಳಲಾಗುತ್ತಿದೆ.

ಈ ಹಿಂದೆ ಚಿತ್ರದ ಮುಹೂರ್ತ ನಡೆದ ಸಂದರ್ಭದಲ್ಲಿ ಈ ಸಿನಿಮಾದಲ್ಲಿ ನಟಿ ಸಮಂತಾ (Samantha) ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಸಮಂತಾ ತಮ್ಮ ಅನಾರೋಗ್ಯ ಕಾರಣದಿಂದ ಈ ಸಿನಿಮಾಕ್ಕೆ ನೋ ಹೇಳಿದ್ರಿಂದ ಸಮಂತಾ ಜಾಗಕ್ಕೇ ಶೃತಿ ಹಾಸನ್ ಅವರ ಎಂಟ್ರಿಯಾಗಿತ್ತು. ಆದರೆ ಈಗ ಈ ಇಬ್ಬರಲ್ಲಿ ಯಾರೂ ಕೂಡಾ ಈ ಸಿನಿಮಾದಲ್ಲಿ ನಟಿಸುತ್ತಿಲ್ಲ ಎನ್ನಲಾಗಿದೆ. ಈ ಸಿನಿಮಾ ಕಾದಂಬರಿ ಆಧಾರಿತ ಎನ್ನಲಾಗಿದೆ.

ತಿಮೇರಿ ಆರ್ ಮುರಾರಿ ಅವರ ದಿ ಅರೇಂಜ್ಮೆಂಟ್ ಆಫ್ ಲವ್ ಕಾದಂಬರಿಯನ್ನು ಆಧರಿಸಿದ ಕಥೆ ಇದು ಎನ್ನಲಾಗಿದ್ದು, ಈ ಸಿನಿಮಾ ಮೂಲಕ ಶೃತಿ ಹಾಸನ್ ಹಾಲಿವುಡ್ ಗೆ ಎಂಟ್ರಿ ಕೊಡ್ತಾ ಇದ್ದಾರೆ ಎಂದು ಅವರ ಅಭಿಮಾ‌ನಿಗಳಂತೂ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದರು. ಆದರೆ ಈಗ ಅಭಿಮಾನಿಗಳ ಆಸೆ ನಿರಾಸೆಯಾಗಿದೆ. ಇನ್ನು ನಟಿ ಈ ಸಿನಿಮಾದಿಂದ ಹೊರಗೆ ಬರಲು ಕಾರಣವೇನು ಎನ್ನುವುದು ಮಾತ್ರ ಇನ್ನೂ ಬಹಿರಂಗವಾಗಿಲ್ಲ.

Leave a Comment