Meghana Raj: ಅಮ್ಮನೊಂದಿಗೆ ಹೊಸ ಫೋಟೋ ಶೂಟ್ ನಲ್ಲಿ ಮಿಂಚಿದ ಮೇಘನಾ ರಾಜ್; ಹಾಡಿ ಹೊಗಳಿದ ಫ್ಯಾನ್ಸ್

Written by Soma Shekar

Published on:

---Join Our Channel---

Meghana Raj: ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ (Meghana Raj) ಅವರು ಸಾಕಷ್ಟು ಹೆಸರನ್ನು ಮಾಡಿರುವ ಮತ್ತು ಅಭಿಮಾನಿಗಳನ್ನು ಹೊಂದಿರುವ ನಟಿಯಾಗಿದ್ದಾರೆ. ಸಿನಿಮಾಗಳಲ್ಲಿ ನಟಿ ಅಷ್ಟಾಗಿ ಸಕ್ರಿಯವಾಗಿಲ್ಲವಾದರೂ ಸಹಾ ನಟಿಯನ್ನು ಅಭಿಮಾನಿಸುವ ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆ ಏನಿಲ್ಲ, ನಟಿಯ ಹೊಸ ಸಿನಿಮಾದ ನಿರೀಕ್ಷೆಯಲ್ಲಿ ಇದ್ದಾರೆ ಅಭಿಮಾನಿಗಳು.

ಮೇಘನಾ ರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯವಾಗಿದ್ದು, ಆಗಾಗ ಕೆಲವೊಂದು ವಿಶೇಷ ಸಂದರ್ಭಗಳ ಹಾಗೂ ವಿಶೇಷ ದಿನಗಳ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾರೆ.

ಈಗ ನಟಿಯು ಹೊಸ ಫೋಟೋ ಶೂಟ್ ವೊಂದರ ಅಂದವಾದ ಫೋಟೋ ಗಳನ್ನು ಶೇರ್ ಮಾಡಿಕೊಂಡಿದ್ದು, ಹೊಸ ಫೋಟೋಗಳನ್ನು ನೋಡಿದ ಅಭಿಮಾನಿಗಳಂತೂ ಬಹಳ ಖುಷಿಯಿಂದ ಮೆಚ್ಚುಗೆಗಳನ್ನು ಹರಿಸಿದ್ದಾರೆ.‌

ಮೇಘನಾ ರಾಜ್ ಅವರು ತಮ್ಮ ತಾಯಿ ಹಿರಿಯ ನಟಿ ಪ್ರಮೀಳಾ ಜೋಷಾಯ್ (Prameela Joshay) ಅವರ ಜೊತೆಗೆ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದು , ಅಮ್ಮ ಮಗಳ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸಂತೋಷದಿಂದ ಕಾಮೆಂಟ್ ಮಾಡಿದ್ದಾರೆ.

ಅಮ್ಮ ಮಗಳ ಫೋಟೋ ನೋಡಿದ ನೆಟ್ಟಿಗರು ತಮ್ಮ ಕಾಮೆಂಟ್ ಗಳಲ್ಲಿ ಮೇಘನಾ ಅವರ ತಾಯಿ ಪ್ರಮೀಳಾ ಜೋಷಾಯ್ ಅವರು ಮೇಘನಾ ಅವರಿಗೆ ಅಂದದಲ್ಲಿ ಟಕ್ಕರ್ ನೀಡಿದ್ದಾರೆ ಎಂದು ಮೆಚ್ಚುಗೆಗಳನ್ನು ನೀಡಿದ್ದಾರೆ. ‌

ಮೇಘನಾ ರಾಜ್ ಅವರು ಸೀರೆಯುಟ್ಟು ಅಂದವಾಗಿ ಕಂಡಿದ್ದು, ಅಭಿಮಾನಿಗಳು ಬಹಳ ಸುಂದರವಾಗಿದ್ದೀರಾ, ಅಪ್ಸರೆಯಂತೆ ಕಾಣುತ್ತಿದ್ದೀರಾ ಎಂದೆಲ್ಲಾ ಹಾಡಿ ಹೊಗಳುತ್ತಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

Leave a Comment