Lakshmi Nivasa: ಭಾವನಾ ಕತ್ತಲ್ಲಿ ಸಿದ್ಧೇಗೌಡ್ರು ಕಟ್ಟಿದ ತಾಳಿ; ಸೇವಂತಿ ಸೇವಂತಿ ಸಿನಿಮಾ ತೋರಿಸ್ಬೇಡಿ ಅಂತ ನೆಟ್ಟಿಗರ ರಿಕ್ವೆಸ್ಟ್

Written by Soma Shekar

Published on:

---Join Our Channel---

Lakshmia Nivasa: ಲಕ್ಷ್ಮೀನಿವಾಸ (Lakshmi Nivasa) ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಮಾತ್ರವೇ ಅಲ್ಲದೇ ಟಿ ಆರ್ ಪಿ ವಿಚಾರದಲ್ಲೂ ಮುಂದಿದ್ದು ಟಾಪ್ ಎರಡನೇ ಸ್ಥಾನವನ್ನು ಅಲಂಕರಿಸಿರುವ ಸೀರಿಯಲ್ ಇದಾಗಿದೆ. ಸಾಕಷ್ಟು ಪಾತ್ರಗಳನ್ನು ಹೊಂದಿರುವ ಈ ಸೀರಿಯಲ್ ನಲ್ಲಿ ಪ್ರತಿಯೊಂದು ಪಾತ್ರಕ್ಕೂ ವಿಶೇಷ ಪ್ರಾಧಾನ್ಯತೆ ಇದೆಯಾದರೂ ಸದ್ಯಕ್ಕೆ ಜಯಂತ್ ಜಾಹ್ನವಿ ಮತ್ತು ಸಿದ್ಧೇಗೌಡ್ರು ಮತ್ತು ಭಾವನಾ ನಡುವಿನ ಕಥೆ ಹೈಲೈಟ್ ಆಗಿ ಕಂಡಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

ಒಂದು ಕಡೆ ಸಿದ್ಧೇಗೌಡ್ರಿಗೆ (Siddegowda) ಪೂರ್ವಿ ಜೊತೆ ಮದುವೆ ಮಾಡೋಕೆ ಎಲ್ಲರೂ ಸೇರಿ ನಿಶ್ಚಯ ವನ್ನು ಮಾಡಿದ್ದಾರೆ. ಪೂರ್ವಿಗೆ ಸಿದ್ದೇಗೌಡರು ಓದಿಲ್ಲ ಅನ್ನೋ ಕಾರಣಕ್ಕೆ ಮದುವೆ ಇಷ್ಟ ಇಲ್ಲ. ಆದ್ರೆ ಸೌಪರ್ಣಿಕಾ ಮತ್ತೆ ಸಿದ್ದೇಗೌಡ್ರ ಅತ್ತಿಗೆ ಪೂರ್ವಿ ಮನಸ್ಸನ್ನು ಬದಲಾಯಿಸಿ ಮದುವೆಗೆ ಒಪ್ಪಿಕೊಳ್ಳೋ ಹಾಗೆ ಮಾಡೋಕೆ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಸಿದ್ದುಗೆ ಅವರ ಅತ್ತಿಗೆ ನೀವು ಭಾವನ ಹತ್ತಿರ ಪ್ರೀತಿ ವಿಷಯ ಹೇಳಬೇಕಾಗಿತ್ತು, ಪೂರ್ವಿಗೆ ಒಂದು ಸಲ ತಾಳಿ ಕಟ್ಟಿದ ಮೇಲೆ ಎಲ್ಲಾ ಮುಗಿದ ಹಾಗೆ ಅಂತ ಸಿದ್ದು ಮನಸಲ್ಲಿ ಭಯವನ್ನು ಹುಟ್ಟಿಸಿದ್ದಾರೆ.‌

ಮನೆಯವರೆಲ್ಲ ಒಪ್ಪಿರೋದ್ರಿಂದ ಎಲ್ಲಿ ಮದುವೆ ಆಗಿಬಿಡುತ್ತೋ ಅನ್ನೋ ಭ ಯ ಮತ್ತು ಆತಂಕದಲ್ಲಿ ಸಿದ್ದೇಗೌಡ್ರು ದೇವಿಯ ತಾಳಿಯನ್ನ ತಗೊಂಡು ಬಂದು, ರಾತ್ರಿ ಎಲ್ಲರೂ ಮಲಗಿರುವಾಗ ಭಾವನಾ ಕೊರಳಿಗೆ ತಾಳಿಯನ್ನ ಕಟ್ಟಿ ಬಂದಿದ್ದಾಗಿದೆ. ಬೆಳಗ್ಗೆ ಎದ್ದಾಗ ತನ್ನ ಕೊರಳಲ್ಲಿ ತಾಳಿಯನ್ನು ನೋಡಿ ಭಾವನ (Bhavana) ಕೂಡಾ ಬೆಚ್ಚಿ ಬಿದ್ದಿದ್ದಾಳೆ. ಯಾರ ಹತ್ರಾನೂ ಅದನ್ನ ಹೇಳಿಕೊಳ್ಳೋಕೆ ಆಗದೇ ಈಗ ವೇದನೆಯನ್ನ ಅನುಭವಿಸುತ್ತಿದ್ದಾಳೆ.

ಈ ಸನ್ನಿವೇಶಗಳನ್ನು ನೋಡಿದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಮೆಚ್ಚುಗೆಗಳು ಹರಿದು ಬರ್ತಿವೆ. ಆದರೆ ಇದೇ ವೇಳೆ ಕೆಲವರು ಸೇವಂತಿ ಸೇವಂತಿ ಸಿನಿಮಾದಲ್ಲೂ ಕೂಡಾ ಇದೇ ರೀತಿ ಇದೆ, ದಯವಿಟ್ಟು ಸೀರಿಯಲ್ ನಲ್ಲಿ ಇನ್ಮುಂದೆ ಆ ಸಿನಿಮಾ ತೋರಿಸಬೇಡಿ ಅಂತ ಕೆಲವರು ಕಾಮೆಂಟ್ ಗಳನ್ನು ಮಾಡಿದ್ರೆ, ಇನ್ನೂ ಕೆಲವರು ಇನ್ಮೇಲೆ ಲಕ್ಷ್ಮೀ ನಿವಾಸದಲ್ಲಿ ಸೇವಂತಿ ಸೇವಂತಿ ಸಿನಿಮಾ ನೋಡಬಹುದು ಅಂತ ವ್ಯಂಗ್ಯ ಸಹಾ ಮಾಡ್ತಿದ್ದಾರೆ.

Leave a Comment