Lakshmi Nivasa: ಜಾಹ್ನವಿಯ ಮುಟ್ಟಿದ ಡಾಕ್ಟರ್ ಕೈ ಮುರಿದ ಸೈಕೋ ಜಯಂತ್: ಅತಿಯಾಯ್ತು, ಇವನಿಗೆ ಚಿಕಿತ್ಸೆ ಕೊಡ್ಸಿ ಎಂದ ನೆಟ್ಟಿಗರು

Written by Soma Shekar

Published on:

---Join Our Channel---

Lakshmi Nivasa Serial : ಲಕ್ಷ್ಮೀ ನಿವಾಸ ಸೀರಿಯಲ್ (Lakshmi Nivasa Serial) ದಿನದಿಂದ ದಿನಕ್ಕೆ ಜನರ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡು ಮುಂದೆ ಸಾಗಿದೆ. ಈಗ ವಾಹಿನಿಯು ಇಂದಿನ ಎಪಿಸೋಡ್ ನ ಪ್ರೊಮೋ ವನ್ನು ಶೇರ್ ಮಾಡಿಕೊಂಡ‌ ಮೇಲೆ ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಅನ್ನೋ ಹಾಗೆ ಕಾಮೆಂಟ್ ಗಳು ಹರಿದು ಬಂದಿದೆ. ನೆಟ್ಟಿಗರು ನೀಡಿರೋ ಪ್ರತಿಕ್ರಿಯೆಗಳು ಕೂಡಾ ಒಂದಕ್ಕಿಂತ ಮತ್ತೊಂದು ಅನ್ನೋ ಹಾಗೆ ಇದೆ ಅಂದ್ರೆ ತಪ್ಪಾಗೋದಿಲ್ಲ.

ಸೀರಿಯಲ್ ನಲ್ಲಿ ಎಂಟ್ರಿ ಕೊಟ್ಟಾಗ ಜಯಂತ್ (Jayanth) ಪಾತ್ರ ನೋಡಿ ಪ್ರೇಕ್ಷಕರು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ರು. ಜಾಹ್ನವಿ ಜಯಂತ್ ಗೆ ಜೋಡಿಯಾಗಬೇಕು ಅಂತಿದ್ರು. ಆದ್ರೆ ಈಗ ಜಾಹ್ನವಿ ಬಗ್ಗೆ ಅದೇ ಪ್ರೇಕ್ಷಕರು ಅಯ್ಯೋ ಪಾಪ, ಗಿಡುಗನ ಕೈಗೆ ಸಿಕ್ಕ ಗಿಳಿ ಆದ್ಲು ಜಾಹ್ನವಿ ಅಂತ ದಯೆ ತೋರಿಸೋ ಹಾಗೆ ಆಗಿದೆ ಅಂದ್ರೆ ಸುಳ್ಳಲ್ಲ.

ಹೆಂಡ್ತಿ ಮೇಲೆ ಸಿಕ್ಕಾಪಟ್ಟೆ ಪ್ರೀತಿ ಇಟ್ಕೊಂಡಿರೋ ಜಯಂತ್ ಹೆಂಡ್ತಿ ಬಗ್ಗೆ ಅಷ್ಟೇ ಪೊಸೆಸಿವ್ ಕೂಡಾ ಆಗಿದ್ದಾನೆ. ಅಲ್ಲದೇ ಮದುವೆ ಆದ ಮೇಲೆ ಅವನೊಬ್ಬ ಸೈಕೋ ಅಂತ ಗೊತ್ತಾಗಿ ಅನೇಕರು ಶಾಕ್ ಆಗಿದ್ದಾರೆ ಕೂಡಾ. ಇನ್ನು ಇವತ್ತಿನ ಎಪಿಸೋಡ್ ನಲ್ಲಿ ಜಯಂತ್ ಹೆಂಡ್ತಿಯನ್ನ ಆಸ್ಪತ್ರೆಗೆ ಕರ್ಕೊಂಡು ಬಂದಿದ್ದಾನೆ.

ಡಾಕ್ಟರ್ ಜಾಹ್ನವಿನ (Jahnavi) ಚೆಕಪ್ ಮಾಡೋಕಂತ ಅವಳ ಬೆನ್ನ ಮೇಲೆ ಸ್ಟೆತೋಸ್ಕೋಪ್ ಇಟ್ಟಿದ್ದು, ನಂತರ ನಾಡಿ ಮಿಡಿತ ಚೆಕ್ ಮಾಡೋಕಂತ ಅವಳ ಕೈಯನ್ನು ಹಿಡಿದುಕೊಂಡಿದ್ದು ಜಯಂತ್ ಗೆ ಸಿಕ್ಕಾಪಟ್ಟೆ ಕಿರಿಕಿರಿಯನ್ನು ಉಂಟು ಮಾಡಿದ್ದು, ತನ್ನ ಅಸಹನೆಯನ್ನು ಕಂಟ್ರೋಲ್ ಮಾಡ್ಕೊಂಡಿದ್ದಾನೆ.

ಆಮೇಲೆ ಪ್ರಿಸ್ಕ್ರಿಪ್ಷನ್ ಬರ್ಕೊಡ್ತೀನಿ ಅಂತ ಹೇಳಿದ ಡಾಕ್ಟರ್ ಜಾಹ್ನವಿ ಭುಜದ ಮೇಲೆ ಕೈಯಿಟ್ಟು ಹುಷಾರು ಎಂದು ಹೇಳಿದ್ದು ನೋಡಿದ ಮೇಲಂತೂ ಜಯಂತ್ ಕೋಪ ನೆತ್ತಿಗೇರಿದೆ. ನಂತರ ಜಯಂತ್ ಜಾಹ್ನವಿಯನ್ನ ಹೊರಗೆ ಕೂರಿಸಿ, ತಾನು ಮಾತ್ರೆಗಳನ್ನು ತರೋದಾಗಿ ಹೇಳಿ ಡಾಕ್ಟರ್ ಹತ್ರ ಹೋಗಿದ್ದಾನೆ.

ನನ್ನ ಬಿಟ್ಟು ಬೇರೆ ಯಾರೂ ಜಾಹ್ನವಿನ ಮುಟ್ಟಬಾರದು ಅಂತ ಡಾಕ್ಟರ್ ಕೈ ಮುರಿದು ಬಂದಿದ್ದಾನೆ. ಪ್ರೊಮೋ ನೋಡಿದ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡುತ್ತಾ ಸೈಕೋ ಜಯಂತ್ ದು ಅತಿಯಾಯ್ತು ಅಂದ್ರೆ, ಹ್ಯಾಂಡ್ಸಮ್ ನಟ ಭಯಂಕರ ರೂಪ ಎಂದು ಹೊಗಳಿದ್ದಾರೆ. ಲೇಡಿ ಡಾಕ್ಟರ್ ಹತ್ರ ಕರ್ಕೊಂಡು ಹೋಗಬೇಕಿತ್ತು ಎಂದಿದ್ದಾರೆ ಕೆಲವರು.

ಇದೇ ವೇಳೆ ಕಾಮೆಂಟ್ ನಲ್ಲಿ, ಮೊದಲು ಈ ಸೈಕೋ ಗೆ ಟ್ರೀಟ್ಮೆಂಟ್ ಕೊಡಿಸಿ ಎಂದೆಲ್ಲಾ ಹೇಳ್ತಿದ್ದಾರೆ ನೆಟ್ಟಿಗರು. ಒಟ್ನಲ್ಲಿ ಜಯಂತ್ ಪಾತ್ರ ಮಾತ್ರ ಪ್ರೇಕ್ಷಕರ ಗಮನ ಸೆಳೆದಿದೆ ಮತ್ತು ಆ ಪಾತ್ರಕ್ಕೆ ಪಾಸಿಟಿವ್ ಮತ್ತು ನೆಗೆಟಿವ್ ಎರಡೂ ರೀತಿಯ ಪ್ರತಿಕ್ರಿಯೆಗಳು ಹರಿದು ಬಂದಿವೆ.

Leave a Comment