Lakshmi Nivasa: ಏನ್ ಸೈಕೋ ಇವ್ನು, ಹೆಂಡ್ತಿ ಜೊತೆ ಮಾತಾಡಿದ್ದಕ್ಕೆ ಕೊಲೆ ಮಾಡೋಕೆ ಹೋಗೋದಾ? ಅಂದ್ರು ನೆಟ್ಟಿಗರು

Written by Soma Shekar

Published on:

---Join Our Channel---

Lakshmi Nivasa Serial : ಜೀ ಕನ್ನಡ (Zee Kannada) ವಾಹಿನಿಯಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ಸದ್ಯಕ್ಕಂತೂ ಟಾಪ್ ಒನ್ ಸೀರಿಯಲ್ ಆಗಿದೆ. ಈ ಸೀರಿಯಲ್ ನಲ್ಲಿ ಇತ್ತೀಚಿಗೆ ಎಲ್ಲರ ಗಮನವನ್ನು ಸೆಳೀತಿರೋ ಪಾತ್ರ ಜಾಹ್ನವಿಯ ಸೈಕೋ ಪತಿ ಜಯಂತ್ (Jayanth) ಪಾತ್ರ ಅನ್ನೋದು ಗೊತ್ತೇ ಇದೆ. ಜಾಹ್ನವಿ ಮುಂದೆ ಒಂದು ತರ, ಹಿಂದೆ ಇನ್ನೊಂದು ತರ ವರ್ತಿಸೋ ಜಯಂತ್ ನ ಅಸಲಿ ಬಣ್ಣ ಏನೂ ಅನ್ನೋದು ಜಾಹ್ನವಿಗೆ ಇನ್ನೂ ಗೊತ್ತಾಗಿಲ್ಲ. ಅತಿಯಾದ ಪ್ರೀತಿ ಅನ್ನೋ ಹೆಸರಲ್ಲಿ ಜಾಹ್ನವಿಯನ್ನ ತನ್ನ ಮನೆಯಲ್ಲೇ ಬಂಧಿ ಮಾಡಿದ್ದಾನೆ.

ಮನೆಯಲ್ಲೆಲ್ಲಾ ಕ್ಯಾಮರಾಗಳನ್ನು ಇಟ್ಟು ಜಾಹ್ನವಿಯ ದಿನಚರಿಯ ಮೇಲೆ ಒಂದು ಕಣ್ಣು ಇಟ್ಟಿದ್ದಾನೆ. ಜಾಹ್ನವಿಯನ್ನು ಮುಟ್ಟಿ ಪರೀಕ್ಷೆ ಮಾಡಿದ ಅನ್ನೋ ಕಾರಣಕ್ಕೆ ಡಾಕ್ಟರ್ ನ ಕೈ ಮುರಿದು ಬಂದಿದ್ದಾನೆ. ಜಾಹ್ನವಿ ಅಮ್ಮನ ಮನೆಗೆ ಹೋಗಬೇಕು ಅಂದಾಗ್ಲೂ ಪ್ರೀತಿಯ ಮಾತುಗಳಿಂದ ಎಮೋಷನಲ್ ಬ್ಲಾಕ್ ಮೇಲ್ ಮಾಡಿ ಅವಳು ತಾಯಿ ಮನೆಗೆ ಹೋಗದಂತೆ ತಡೀತಾ ಇದ್ದಾನೆ. ಆದ್ರೆ ಜಾನುಗೆ ಮಾತ್ರ ಇದೆಲ್ಲಾ ಕೂಡಾ ತನ್ನ ಗಂಡನಿಗೆ ತನ್ನ ಮೇಲೆ ಸಿಕ್ಕಾಪಟ್ಟೆ ಪ್ರೀತಿ ಅಂತ ಅನಿಸ್ತಾ ಇದೆ.

ಮದುವೆ ನಂತರ ಈಗ ಜಾಹ್ನವಿ ಕಾಲೇಜಿಗೆ ಎಕ್ಸಾಂ ಬರೆಯೋಕೆ ಬಂದಿದ್ದಾಳೆ. ಅವಳ ಜೊತೆ ಜಯಂತ್ ಕೂಡಾ ಡ್ರಾಪ್ ಅಂಡ್ ಪಿಕಪ್ ಮಾಡೋ ನೆಪದಲ್ಲಿ ಬಂದಿದ್ದು, ಕಾಲೇಜ್ ಹತ್ರ ಜಾಹ್ನವಿ ಜೊತೆ ಯಾರೆಲ್ಲಾ ಕ್ಲೋಸ್ ಆಗಿ ಮಾತಾಡ್ತಾ ಇದ್ದಾರೆ ಅನ್ನೋದನ್ನೂ ಗಮನಿಸಿದ್ದಾನೆ. ಈ ವೇಳೆ ಒಬ್ಬ ಯುವಕ ಜಾನು ಜೊತೆಗೆ ಕ್ಲೋಸ್ ಆಗಿ ಮಾತನಾಡೋದನ್ನ ನೋಡಿದ ಜಯಂತ್ ಗೆ ಅವನ್ಯಾರು ಅಂತ ಅನುಮಾನ ಬಂದಿದೆ. ‌ತನ್ನ ಹೆಂಡ್ತಿ ಜೊತೆ ಕ್ಲೋಸ್ ಆಗಿದ್ದಾನೆ ಅಂತ ಸಿಟ್ಟಾಗಿದ್ದಾನೆ.

ತನ್ನ ಚಿನ್ನುಮರಿ ಜೊತೆಗೆ ಕ್ಲೋಸ್ ಆಗಿದ್ದಾನೆ ಅನ್ನೋ ಅಸಮಾಧಾನದಿಂದ ಅವನನ್ನ ಕೊಲ್ಲೋದಕ್ಕೆ ಮುಂದಾಗಿದ್ದಾನೆ ಜಯಂತ್. ಅದಕ್ಕಾಗಿ ಅವನು ನೇರವಾಗಿ ಕಾಲೇಜಿನ ಮಹಡಿಗೆ ಬಂದು ತಲುಪಿದ್ದಾನೆ‌. ಕೆಳಗಡೆ ಜಾನು ಜೊತೆಗೆ ಮಾತಾಡ್ತಾ ಇದ್ದ ಯುವಕ ನಿಂತಿದ್ದಾನೆ. ಜಯಂತ್ ಕಾಂಪೌಂಡ್ ಗೋಡೆ ಮೇಲೆ ಇದ್ದ ಪಾಟ್ ಒಂದನ್ನು ಕೆಳಗೆ ಬೀಳಿಸಿದ್ದಾನೆ. ಅದು ಆ ಯುವಕನ ಮೇಲೆ ಬಿತ್ತಾ? ಹೆಂಡ್ತಿ ಮೇಲಿನ ಅತಿಯಾದ ಪ್ರೀತಿಯಿಂದ ಜಯಂತ್ ಕೊಲೆ ಮಾಡೋಕು ಮುಂದಾಗಿ ಬಿಟ್ನಾ? ಅನ್ನೋದು ಇಂದಿನ ಎಪಿಸೋಡ್ ನಲ್ಲಿ ಗೊತ್ತಾಗಲಿದೆ.

Leave a Comment