ಶಾರ್ವರಿ ಕುತಂತ್ರಕ್ಕೆ ಮಂಗಳ ಹಾಡಿದ ಮಹೇಶ; ಗಂಡನ ವಿರುದ್ಧ ಖತರ್ನಾಕ್ ಪ್ಲಾನ್ ರೆಡಿ ಮಾಡಿದ್ದಾಳಾ ಶಾರ್ವರಿ

Written by Soma Shekar

Published on:

---Join Our Channel---

Srirastu Shubhamastu: ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದು ವಿಭಿನ್ನವಾದ ಕಥೆ ಮತ್ತು ಕಥಾನಕದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿರುವ ಸೀರಿಯಲ್ ಶ್ರೀರಸ್ತು ಶುಭಮಸ್ತು (Srirastu Shubhamastu) ಸೀರಿಯಲ್. ಆರಂಭದಿಂದಲೂ ವಿಶೇಷವಾಗಿ ಪ್ರೇಕ್ಷಕರನ್ನು ಆಕರ್ಷಿಸುತ್ತಿರುವ ಈ ಸೀರಿಯಲ್ ನಲ್ಲಿ ಹೊಸ ಟ್ವಿಸ್ಟ್ ಸಿಕ್ಕಾಪಟ್ಟೆ ಕುತೂಹಲವನ್ನು ಕೆರಳಿಸಿದೆ. ಈ ಸೀರಿಯಲ್ ನಲ್ಲಿ ಶಾರ್ವರಿ ಮುಖ್ಯವಾದ ವಿಲನ್ ಆಗಿದ್ದು, ಇಡೀ ಕುಟುಂಬದ ಮುಂದೆ ತಾನು ಒಳ್ಳೆಯವಳ ಹಾಗೆ ನಟಿಸುತ್ತಲೇ ತನ್ನ ಕುತಂತ್ರಗಳನ್ನು ತಾನು ಮಾಡುತ್ತಿದ್ದಾಳೆ.

ಆದರೆ ಶಾರ್ವರಿ (Sharvari) ಗಂಡ ಮಹೇಶ್ ಗೆ ತನ್ನ ಹೆಂಡ್ತಿ ವರ್ಷಗಳ ಹಿಂದೆ ಮಾಡಿದ್ದ ಕುತಂತ್ರ, ಅತ್ತಿಗೆ ಸಾವಿಗೆ ಕಾರಣವಾಗಿದ್ದು ಹೇಗೆ ಅನ್ನೋದೆಲ್ಲಾ ನೆನಪಾಗಿದೆ‌. ಅದಕ್ಕೆ ಶಾರ್ವರಿಯನ್ನ ಈಗ ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾನೆ‌. ಮಹಿಳಾ ಸಂಘಕ್ಕೆ ಅತ್ತಿಗೆ ತುಳಸಿಯನ್ನು ಅಧ್ಯಕ್ಷಳನ್ನಾಗಿ ಮಾಡಿದ್ದು, ಶಾರ್ವರಿಗೆ ಮನೆ ಕೆಲಸಗಳನ್ನು ಮಾಡುವಂತೆ ಮಾಡಿದ್ದಾನೆ. ಇಷ್ಟ ಇಲ್ಲದೇ ಹೋದರೂ ಶಾರ್ವರಿ ಮೈಬಗ್ಗಿಸಿ ಕೆಲಸ ಮಾಡುವ ಹಾಗೆ ಆಗಿದೆ‌.

ಇದರ ಬೆನ್ನಲ್ಲೇ ಈಗ ಮಹೇಶ (Mahesh) ಈಗ ಮನೆಯ ಎಲ್ಲರ ಮುಂದೆ ಅಸಲಿ ಸತ್ಯ ಏನು ಅನ್ನೋದನ್ನ ಒಪ್ಪಿಕೊಳ್ಳಬೇಕು ಅಂತ ಶಾರ್ವರಿಗೆ ವಾರ್ನಿಂಗ್ ನೀಡಿದ್ದು, ಶಾರ್ವರಿ ಕೂಡಾ ತಾನು ಎಲ್ಲಾ ವಿಷಯಗಳನ್ನು ಹೇಳ್ತೀನಿ ಅಂತ ಎಲ್ಲರ ಮುಂದೆ ಹೇಳೋಕೆ ಹೊರಟಿದ್ದಾಳೆ. ಆದರೆ ಶಾರ್ವರಿ ನಿಜವಾಗಲೂ ಎಲ್ಲಾ ಸತ್ಯಗಳನ್ನು ಇಷ್ಟು ಸುಲಭವಾಗಿ ಒಪ್ಪಿಕೊಳ್ತಾಳಾ? ಅನ್ನೋದೇ ಈಗ ಪ್ರೇಕ್ಷಕರ ಪ್ರಶ್ನೆಯಾಗಿದೆ.

ಶಾರ್ವರಿ ಅಷ್ಟು ಸುಲಭವಾಗಿ ಎಲ್ಲವನ್ನ ಬಾಯಿ ಬಿಡೋಂತ ಕ್ಯಾರೆಕ್ಟರ್ ಅಲ್ಲ. ಸೈಲೆಂಟ್ ಆಗೇ ಏನೂ ದೊಡ್ಡ ಪ್ಲಾನ್ ಮಾಡಿರೋ ಹಾಗೆ ಕಾಣ್ತಿದೆ. ತನ್ನ ಮೇಲೆ ಅಧಿಕಾರ ಚಲಾಯಿಸ್ತಿರೋ ಮಹೇಶನ್ನ ಸುಮ್ಮನೆ ಬಿಡ್ತಾಳಾ ಶಾರ್ವರಿ, ತನ್ನ ಕುತಂತ್ರಕ್ಕೆ ಅಡ್ಡಿಯಾಗ್ತಾ ಇರೋ ಗಂಡ ಮಹೇಶ್ ಅನ್ನ ಕಂಟ್ರೋಲ್ ನಲ್ಲಿ ಇಡೋಕೆ ಮತ್ತೆ ಏನಾದ್ರು ಖತರ್ನಾಕ್ ಪ್ಲಾನ್ ಮಾಡಿದ್ದಾಳಾ? ಅನ್ನೋ ಅನುಮಾನ ಎಲ್ಲರಲ್ಲೂ ಇದೆ.

Leave a Comment