Namratha Gowda: ಪ್ಲಾನ್ ಮಾಡಿದ ಹಾಗೆ ಯಾವ್ದೂ ಆಗ್ತಿಲ್ಲ, ಬಿಗ್ ಬಾಸ್ ಅನುಭವದ ಬಗ್ಗೆ ನಮ್ರತಾ ಶಾಕಿಂಗ್ ಮಾತು

Written by Soma Shekar

Published on:

---Join Our Channel---

Namratha Gowda: ಬಿಗ್ ಬಾಸ್ ಕನ್ನಡ ಸೀಸನ್ ಹತ್ತು (Bigg Boss Kannada 10) ಮುಗಿದು ಮೂರು ತಿಂಗಳಿಗೂ ಅಧಿಕ ಸಮಯವಾಗುತ್ತಾ ಬಂದಿದ್ದರೂ ಈ ಸೀಸನ್ ಮತ್ತು ಸ್ಪರ್ಧಿಗಳ‌ ವಿಚಾರವಾಗಿ ಒಂದಲ್ಲಾ ಒಂದು ಸುದ್ದಿಯಾಗುವ ಮೂಲಕ ಸೀಸನ್ ಹತ್ತರ ಚರ್ಚೆಗಳು ಇನ್ನೂ ನಡೆಯುತ್ತಲೇ ಇದೆ. ಈಗ ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ವಾರಕ್ಕೆ ಎಂಟ್ರಿಯನ್ನು ನೀಡಿದ್ದ ಸ್ಪರ್ಧಿ, ನಾಗಿಣಿ ಖ್ಯಾತಿಯ ನಟಿ ನಮ್ರತಾ ಗೌಡ (Namratha Gowda) ಅವರು ಒಂದಷ್ಟು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡು ಸುದ್ದಿಯಾಗಿದ್ದಾರೆ. ನಟಿ ಬಿಗ್ ಬಾಸ್ ನಂತರದ ಬೆಳವಣಿಗೆಗಳ ಕುರಿತಾಗಿ ಒಂದಷ್ಟು ಮಾತುಗಳನ್ನ ಆಡಿದ್ದಾರೆ.

ಬಿಗ್ ಬಾಸ್ ನಲ್ಲಿ (Bigg Boss) ಪ್ಲಾನ್ ಮಾಡಿದಂತೆ ಯಾವುದೂ ನಡೀತಿಲ್ಲ ಎನ್ನುವ ಅಚ್ಚರಿಯ ಮಾತುಗಳನ್ನು ನಮ್ರತಾ ಅವರು ಆಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ನಮ್ರತಾ, ವಿನಯ್, ಇಶಾನಿ, ರಕ್ಷಕ್, ಮೈಕಲ್ ಅಜಯ್ ಅವರು ಹೆಚ್ಚು ಆತ್ಮೀಯರಾಗಿದ್ರು. ಅವರನ್ನ ಒಂದು ಗ್ರೂಪ್ ಎಂಬುದಾಗಿಯೇ ಪ್ರೇಕ್ಷಕರು ಸಹಾ ನೋಡಿದ್ರು ಅನ್ನೋದು ಎಲ್ಲರಿಗೂ ತಿಳಿದಿರೋ ವಿಷಯವೇ ಆಗಿದೆ.

ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಶೋ ಮುಗಿದ ಮೇಲೆ ವಾರಕ್ಕೊಂದು ದಿನ ಸಿಗೋಣ, ಪಾರ್ಟಿ ಮಾಡೋಣ ಎಂದೆಲ್ಲಾ ಮಾತನಾಡಿಕೊಂಡಿದ್ವಿ. ಬಿಗ್ ಬಾಸ್ ಮುಗಿದ ಮೇಲೆ ಆರಂಭದಲ್ಲಿ ಒಂದೆರಡು ಸಲ ಭೇಟಿ ಮಾಡಿದ್ದೀವಿ. ಆ ರೀತಿಯ ಬೇಟಿಗಳು ಅನಂತರ ನಿರಂತರವಾಗಿ ನಡೀತಿಲ್ಲ ಅಂತ ನಮ್ರತಾ ಅವರು ಮಾದ್ಯಮವೊಂದರ ಜೊತೆಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.‌

ದಿನಾ ಸಿಗಬೇಕು ಇಲ್ಲ ಅಂದ್ರೆ ವಾರಕ್ಕೊಮ್ಮೆ ಆದ್ರೂ ಸಿಗಬೇಕಂತ ಬಿಗ್ ಬಾಸ್ ನಲ್ಲಿ ಪ್ಲಾನ್ ಮಾಡಿದ್ವಿ. ಆದ್ರೆ ಅದೆಲ್ಲಾ ನಡೀತಾ ಇಲ್ಲ. ನನ್ನ ಸರ್ಕಲ್ ನಲ್ಲಿ ಇರೋರಿಗೆ ನನ್ನ ಬರ್ತಡೇಗೆ ಕರೆಸಿದ್ದೆ. ರೆಗ್ಯುಲರ್ ಆಗಿ ನಾನು ಯಾರ ಜೊತೆಗೂ ಕಂಟ್ಯಾಕ್ಟ್ ನಲ್ಲಿ ಇಲ್ಲ. ವಿನಯ್, ಇಶಾನಿ ಜೊತೆಗೆ ಆಗಾಗ ಕಾಲ್ ನಲ್ಲಿ ಮಾತಾಡ್ತೀನಿ. ಈವೆಂಟ್ ಗಳಲ್ಲಿ ರಕ್ಷಕ್, ಕಾರ್ತಿಕ್ ಹಾಗೂ ಇತರರ ಜೊತೆ ಮಾತಾಡ್ತೀನಿ ಎಂದಿದ್ದಾರೆ ನಮ್ರತಾ.

ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅದೇ ಒಂದು ಲೋಕ ಅನ್ಸುತ್ತೆ. ಮನೆಯೊಳಗೆ ಇರೋ ಬಾಂಡಿಂಗ್ ಹೊರಗೂ ಮುಂದುವರೆಯುತ್ತೆ ಅಂತ ಹೇಳೋದು ಕಷ್ಟ. ಹೊರಗಡೆ ಬಂದ ಮೇಲೆ ಎಲ್ಲರೂ ಅವರವರ ಕೆಲಸಗಳಲ್ಲಿ ಬ್ಯುಸಿ ಇರ್ತಾರೆ. ಆದ ಕಾರಣ ಪದೇ ಪದೇ ಭೇಟಿ ಮಾಡೋದು ಸಾಧ್ಯವಾಗೋದಿಲ್ಲ ಎಂದಿದ್ದಾರೆ ನಮ್ರತಾ. ಬಿಗ್ ಬಾಸ್ ನಂತರ ನಟಿ ಅಭಿಮಾನಿಗಳ ಮುಂದೆ ಯಾವಾಗ ಬರ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.

Leave a Comment