Vinay Gowda: ಭರ್ಜರಿ ಅವಕಾಶಗಳನ್ನು ತನ್ನದಾಗಿಸಿಕೊಂಡ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ

Written by Soma Shekar

Published on:

---Join Our Channel---

Vinay Gowda: ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada 10) ಹಿಂದಿನ ಎಲ್ಲಾ ಸೀಸನ್ ಗಳಿಗಿಂತ ಬಹಳ‌ ದೊಡ್ಡ ಮಟ್ಟದಲ್ಲಿ ಸದ್ದು ಮತ್ತು ಸುದ್ದಿಯನ್ನು ಮಾಡಿದ ಸೀಸನ್ ಆಗಿತ್ತು. ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಸುದ್ದಿಯನ್ನು ಮಾಡಿದ ಕೆಲವೇ ಸ್ಪರ್ಧಿಗಳಲ್ಲಿ ಒಬ್ಬರು ವಿನಯ್ ಗೌಡ (Vijay Gowda) ಅವರು. ಬಿಗ್ ಬಾಸ್ ಮನೆಯಲ್ಲಿನ ವಿನಯ್ ಅವರ ಆಟದ ಕುರಿತಾಗಿ ಹೊರಗಡೆ ಒಂದಷ್ಟು ಮೆಚ್ಚುಗೆಗಳು ಹಾಗೂ ಮತ್ತೊಂದಷ್ಟು ಟೀಕೆಗಳು ಸಹಾ ವ್ಯಕ್ತವಾಗಿದ್ದವು. ಬಿಗ್ ಬಾಸ್ ವಿನ್ನರ್ ವಿನಯ್ ಆಗಬಹುದು ಎನ್ನುವ ನಿರೀಕ್ಷೆಗಳನ್ನು ಹುಟ್ಟು ಹಾಕುವಷ್ಟರ ಮಟ್ಟಿಗೆ ಅವರ ಆಟ ಜನರ ಗಮನ ಸೆಳೆದಿತ್ತು.

ಬಿಗ್ ಬಾಸ್ ನಂತರ ವಿನಯ್ ಗೌಡ ಅವರು ಏನ್ಮಾಡ್ತಿದ್ದಾರೆ ? ಎನ್ನುವ ನಿರೀಕ್ಷೆಯಲ್ಲಿದ್ದಂತಹ ಅವರ ಅಭಿಮಾನಿಗಳಿಗೆ ಈಗ ಖುಷಿ ಪಡುವಂತಹ ವಿಷಯವೊಂದು ಸಿಕ್ಕಿದೆ. ವಿನಯ್ ಗೌಡ ಅವರಿಗೆ ಬಿಗ್ ಬಾಸ್ ನಂತರ ಸಿನಿಮಾಗಳಲ್ಲಿ ಸಾಲು ಸಾಲು ಸಿನಿಮಾಗಳ ಅವಕಾಶಗಳನ್ನು ಪಡೆದುಕೊಂಡು ಬ್ಯುಸಿಯಾಗಿದ್ದಾರೆ ಎನ್ನುವ ಸುದ್ದಿಯು ಈಗ ಹರಿದಾಡಿದೆ. ‌

ಬಿಗ್ ಬಾಸ್ ಮನೆಯ ಆಟ ಮುಗಿದು ಅದಾಗಲೇ ನಾಲ್ಕು ತಿಂಗಳುಗಳು ಕಳೆದಿದೆ. ವಿನಯ್ ಅವರು ಯಾವ ಹೊಸ ಪ್ರಾಜೆಕ್ಟ್ ಮೂಲಕ ಪ್ರೇಕ್ಷಕರ ಮುಂದೆ ಬರ್ತಾರೆ ಎನ್ನುವ ನಿರೀಕ್ಷೆ ಗಳೊಂದಿಗೆ ಅಭಿಮಾನಿಗಳು ಕಾಯ್ತಾ ಇದ್ದರು. ಸೀರಿಯಲ್ ಒಂದರಲ್ಲಿ ಅತಿಥಿ ಪಾತ್ರದಲ್ಲಿ ವಿನಯ್ ಅವರು ಮತ್ತು ಅವರ ಪತ್ನಿ ಕಾಣಿಸಿಕೊಂಡಿದ್ದರು. ಅದು ಬಿಟ್ಟರೆ ಅವರ ಹೊಸ ಪ್ರಾಜೆಕ್ಟ್ ಗಳ ವಿಚಾರವು ಎಲ್ಲೂ ಸುದ್ದಿಯಾಗಿರಲಿಲ್ಲ.‌

ಈಗ ಹೊರ ಬಂದಿರುವ ಸುದ್ದಿಗಳ ಪ್ರಕಾರ ವಿನಯ್ ಅವರು ಕನ್ನಡದ ಎರಡು ದೊಡ್ಡ ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಕನ್ನಡ ಮಾತ್ರವೇ ಅಲ್ಲದೇ ಅವರಿಗೆ ತೆಲುಗು, ತಮಿಳು ಭಾಷೆಗಳಿಂದಲೂ ಸಹಾ ಅವಕಾಶಗಳು ಅರಸಿ ಬರುತ್ತಿವೆ ಎನ್ನಲಾಗಿದೆ. ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಸುದ್ದಿ.
ಇದಲ್ಲದೇ ಹೀರೋ ಆಗಿ ಸಹಾ ಒಂದು ಸಿನಿಮಾ ಮಾಡಲಿದ್ದು ಶೀಘ್ರದಲ್ಲೇ ಅಧಿಕೃತ ಸುದ್ದಿ ಹೊರ ಬೀಳಲಿದೆ ಎನ್ನಲಾಗಿದೆ.

Leave a Comment