Prakash Raj: ಮೋದಿಯನ್ನು ಮೂರು ಬಿಟ್ಟ ಮಹಾಪ್ರಭು ಎನ್ನುತ್ತಾ ಐದು ಪ್ರಶ್ನೆ ಕೇಳಿದ ಪ್ರಕಾಶ್ ರಾಜ್; ಏನದು ಪ್ರಶ್ನೆಗಳು?

Written by Soma Shekar

Published on:

---Join Our Channel---

Prakash Raj : ನಟ ಪ್ರಕಾಶ್ ರಾಜ್ (Prakash Raj) ಅವರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ಟೀಕಿಸುವುದು ಸಾಮಾನ್ಯವಾದ ವಿಚಾರವಾಗಿದೆ. ಆದರೆ ಈಗ ಚುನಾವಣೆಗಳ ಸಮಯದಲ್ಲಿ ಪ್ರಕಾಶ್ ರಾಜ್ ಅವರ ಮಾತಿನ ಧಾಟಿ ಇನ್ನಷ್ಟು ಬಿರುಸಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಮತ್ತಷ್ಟು ಚುರುಕಾಗಿ ಅವರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ, ಕೇಂದ್ರ ಸರ್ಕಾರ ಮತ್ತು ಮೋದಿ ಕುರಿತಾಗಿ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಈಗ ಅವರು ಪ್ರಧಾ‌ನಿಯನ್ನ ಮೂರು ಬಿಟ್ಟ ಪ್ರಭು ಎಂದು ಟೀಕಿಸುತ್ತಾ, ಐದು ಪ್ರಶ್ನೆಗಳನ್ನು ಕೇಳಿದ್ದಾರೆ.

ಪ್ರಕಾಶ್ ರಾಜ್ ಅವರು ಪ್ರಧಾ‌ನಿ ನರೇಂದ್ರ ಮೋದಿ ಅವರ ಇತ್ತೀಚಿನ ಮಂಗಳ ಸೂತ್ರದ ಹೇಳಿಕೆಯ ಕುರಿತಾಗಿ ಸ್ವಲ್ಪ ಖಾರವಾಗಿಯೇ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದು, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅವರು ಐದು ಪ್ರಶ್ನೆಗಳನ್ನು ಬರೆದುಕೊಂಡಿದ್ದು, ಪ್ರಧಾನಿಗೆ ಅವರು ಈ ಐದು ಪ್ರಶ್ನೆಗಳನ್ನು ಕೇಳಿರುವುದು ಸ್ಪಷ್ಟವಾಗಿದೆ. ಪ್ರಕಾಶ್ ರಾಜ್ ಅವರ ಈ ಪೋಸ್ಟ್ ಈಗ ವೈರಲ್ ಆಗಿದೆ. ನಟ ತಮ್ಮ ಪೋಸ್ಟ್ ನಲ್ಲಿ ಕೇಳಿರುವ ಐದು ಪ್ರಶ್ನೆಗಳು ಹೀಗಿವೆ.

ಮೂರೂ ಬಿಟ್ಟ ಮಹಾಪ್ರಭುಗಳ ಕೆಂಗಣ್ಣು ಮಂಗಳಸೂತ್ರದ ಮೇಲೆ ಬಿದ್ದಿದೆ, ಆಯ್ತು ಮಂಗಳಸೂತ್ರದ ಬಗ್ಗೆಯೇ ಮಾತಾಡೋಣ.
ಪುಲ್ವಾಮಾದ 40 ಸೈನಿಕರ ಮಡದಿಯರ ಮಂಗಳಸೂತ್ರ ಕಿತ್ತವರು ಯಾರು?
ದೆಹಲಿ ಗಡಿಯಲ್ಲಿ ಪ್ರತಿಭಟನಾ ನಿರತ ನೂರಾರು ರೈತರ ಸಾವಾಯ್ತಲ್ಲ, ಆ ಮನೆಗಳ ಮಂಗಳಸೂತ್ರ ಕಿತ್ತವರು ಯಾರು?

ಲಾಕ್’ಡೌನ್ ಮಹಾವಲಸೆಯಲ್ಲಿ ರಸ್ತೆಯಲ್ಲೇ ಪ್ರಾಣ ಬಿಟ್ಟ ಲೆಕ್ಕವಿಕ್ಕದಷ್ಟು ಕಾರ್ಮಿಕರ ಪತ್ನಿಯರ ಮಂಗಳಸೂತ್ರ ಕಿತ್ತವರು ಯಾರು?
ನೋಟ್ ಬ್ಯಾನ್ ನಿಂದ ATM ಕ್ಯೂನಲ್ಲೇ ಪ್ರಾಣ ಕಳೆದುಕೊಂಡ ಮನೆಗಳ ಮಂಗಳಸೂತ್ರ ಕಿತ್ತವರು ಯಾರು? ಮಣಿಪುರದ ಗಲಭೆಯಲ್ಲಿ ಹತ್ಯೆಯಾದ ಮನೆಗಳ ಮಂಗಳಸೂತ್ರ ಕಿತ್ತವರು ಯಾರು ? ಎಂದು ಐದು ಪ್ರಶ್ನೆಗಳನ್ನು ಕೇಳಿದ್ದಾರೆ.‌

Leave a Comment