Nayanthara: ರಾತ್ರಿಯಾದರೆ ಶುರು ಆಗ್ತಿತ್ತು, ಕೊನೆಗೆ ನಯನತಾರಾನ ಅಪಾರ್ಟ್ಮೆಂಟ್ ಬಿಟ್ಟು ಹೋಗಿ ಅಂದಿದ್ರು

Written by Soma Shekar

Published on:

---Join Our Channel---

Nayanthara: ಸೌತ್ ಬ್ಯೂಟಿ ನಯನತಾರ (Nayanthara) ಲೇಡಿ ಸೂಪರ್ ಸ್ಟಾರ್ ಖ್ಯಾತಿಯನ್ನು ಪಡೆದುಕೊಂಡಿರುವ ಜನಪ್ರಿಯ ನಟಿಯಾಗಿದ್ದಾರೆ. 75 ಸಿನಿಮಾಗಳಲ್ಲಿ ನಟಿಸಿರುವ ನಯನತಾರಾ ಶಾರೂಖ್ ಖಾನ್ (Shahrukh Khan) ಅಭಿನಯದ ಜವಾನ್ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿಯನ್ನು ನೀಡಿದ್ದಾಗಿದೆ. ನಿರ್ದೇಶಕ ವಿಘ್ನೇಶ್ ಶಿವನ್ (Vignesh Sivan) ಜೊತೆಗೆ ದಾಂಪತ್ಯಕ್ಕೆ ಅಡಿಯಿಟ್ಟು, ಬಾಡಿಗೆ ತಾಯಿಯ ಮೂಲಕ ಇಬ್ಬರು ಮಕ್ಕಳನ್ನು ಪಡೆದು ಸುಖ ಸಂಸಾದ ಜೀವನ ನಡೆಸುತ್ತಿದ್ದಾರೆ.

ಖ್ಯಾತ ನಿರ್ಮಾಪಕ ಅನಂತನನ್ ಅವರು ನಟಿಯ ಬಗ್ಗೆ ಒಂದಷ್ಟು ಆಸಕ್ತಿಕರ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಹಿಂದೆ ನಟಿ ಚೆನ್ನೈನ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಿದ್ದಾಗ ಅಲ್ಲಿ ಸಿಕ್ಕಾಪಟ್ಟೆ ಗಲಾಟೆ ಮಾಡುತ್ತಿದ್ದರಂತೆ, ಅಕ್ಕ ಪಕ್ಕದವರು ನಟಿಯ ಗಲಾಟೆಯಿಂದ ರೋಸಿ ಹೋಗಿದ್ದರಂತೆ. ರಾತ್ರಿಯಾದರೆ ನಟಿಯ ಗಲಾಟೆ ಶುರುವಾಗುತ್ತಿತ್ತು ಎಂದು ಅನಂತನನ್ ಅವರು ಹೇಳಿಕೊಂಡಿದ್ದಾರೆ.

ಮಧ್ಯರಾತ್ರಿ ವೇಳೆಯಲ್ಲೂ ಫೋನ್ ನಲ್ಲಿ ಅಥವಾ ವ್ಯಕ್ತಿಗಳ ಜೊತೆಗೆ ಜೋರಾಗಿ ಮಾತನಾಡುತ್ತಿದ್ದರಂತೆ. ಮಕ್ಕಳು ಆಡುವಾಗ ನಮ್ಮ ಅಪಾರ್ಟ್ಮೆಂಟ್ ಕಾರಿಡಾರ್ ನಲ್ಲಿ ಏಕೆ ವೇಗವಾಗಿ ಆಟೋ ಓಡಿಸುತ್ತೀರಾ ಎಂದು ಆಟೋ ಡ್ರೈವರ್ ಜೊತೆಗೆ ಜಗಳ ಮಾಡಿಕೊಂಡಿದ್ದರಂತೆ. ಒಂದು ಸಲ ರಾತ್ರಿ ವೇಳೆ ಡಿಲೆವರಿ ಬಾಯ್ ಜೊತೆಗೆ ತಗಾದೆ ತೆಗೆದು ಜಗಳ ಮಾಡಿದ ಉದಾಹರಣೆ ಸಹಾ ಇದೆಯಂತೆ. ನಿರ್ಮಾಪಕರ ಸಂಘಕ್ಕೆ ನಟಿಯ ಮೇಲೆ ಐವತ್ತಕ್ಕೂ ಹೆಚ್ಚು ದೂರುಗಳು ಬಂದಿದ್ದವಂತೆ.

ಕೊನೆಗೆ ಅಪಾರ್ಟ್ಮೆಂಟ್ ನವರು ನಟಿಯ ತಲೆನೋವು ತಡೆಯಲಾರದೆ ಖಾಲಿ ಮಾಡುವಂತೆ ಹೇಳಿದ್ದರಂತೆ. ಅದೇ ಕಾರಣಕ್ಕೆ ನಟಿ ಅಲ್ಲಿಂದ ಅಪಾರ್ಟ್ಮೆಂಟ್ ಖಾಲಿ ಮಾಡಿಕೊಂಡು ಹೋದರು. ಈಗ ತಮ್ಮದೇ ಸ್ವಂತ ದೊಡ್ಡ ಅಪಾರ್ಟ್ಮೆಂಟ್ ನಲ್ಲಿ ಇದ್ದಾರೆ. ಅಲ್ಲಿ ಅವರ ನೆರೆ ಹೊರೆ ಯವರು ಹೇಗಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ ನಿರ್ಮಾಪಕ. ಅವರ ಈ ಮಾತುಗಳಿಗೆ ಪರ ವಿರೋಧ ಪ್ರತಿಕ್ರಿಯೆಗಳು ಹರಿದು ಬಂದಿವೆ.

Leave a Comment