Dhananjay: ಕೋಟಿ ಸರದಾರ ಡಾಲಿ ಧನಂಜಯ್; ಹೊಸ ಪೋಸ್ಟರ್ ನೋಡಿ ಥ್ರಿಲ್ ಆದ ಫ್ಯಾನ್ಸ್

Written by Soma Shekar

Published on:

---Join Our Channel---

Dhananjay : ಸ್ಯಾಂಡಲ್ವುಡ್ ನ ಪ್ರತಿಭಾವಂತ ನಟರ ಹೆಸರು ಬಂದಾಗ ಅಲ್ಲಿ ಡಾಲಿ ಧನಂಜಯ್ (Dhananjay) ಅವರ ಹೆಸರು ಖಂಡಿತ ಇರಲೇಬೇಕು. ಡಾಲಿ ಧನಂಜಯ್ ಅವರ ಹೊಸ ಸಿನಿಮಾ ಯಾವಾಗ ಎಂದು ಕಾಯ್ತಿದ್ದ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳಿಗೆ ಯುಗಾದಿ ದಿನವೇ ಸಿಹಿ ಸುದ್ದಿ ದೊರೆತಿದೆ. ಡಾಲಿ ಧನಂಜಯ್ ಅವರ ಹೊಸ ಸಿನಿಮಾದ ಅಪ್ಡೇಟ್ ಹೊರ ಬಂದಿದ್ದು, ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಹೆಸರನ್ನು ಮಾಡಿರುವಂತಹ ಪರಮೇಶ್ವರ್ ಗುಂಡ್ಕಲ್ (Parameshwar Guntkal) ಅವರು ಈ ಸಿನಿಮಾವನ್ನು ನಿರ್ದೇಶನವನ್ನು ಮಾಡಲಿದ್ದು, ಕಿರುತೆರೆಯಲ್ಲಿ ಪ್ರಯೋಗಗಳನ್ನು ಮಾಡಿರುವ ಪರಮೇಶ್ವರ್ ಅವರು ಇದೀಗ ಬೆಳ್ಳಿ ತೆರೆಯಲ್ಲೂ ತಮ್ಮ ಜಾದೂ ಮಾಡಲು ಮುಂದಾಗಿದ್ದು, ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದು, ಈ ಸಿನಿಮಾಕ್ಕೆ ಕೋಟಿ ಎನ್ನುವ ಹೆಸರನ್ನು ಇಡಲಾಗಿದೆ.

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಇಂದು ಕೋಟಿ ಚಿತ್ರದ ಟೈಟಲ್‌ ರಿಲೀಸ್ ಆಗಿದ್ದು, ಇದರಲ್ಲಿ ಹಣದ ನೋಟುಗಳನ್ನು ಮಡಿಚಿ ಮಾಡಿರುವ ಹಾಗೆ ಕಾಣೋ ಶೀರ್ಷಿಕೆಯಲ್ಲಿ ಧನಂಜಯ್‌ ಅವರ ಕಣ್ಣುಗಳನ್ನು ಮಾತ್ರವೇ ನೋಡಬಹುದಾಗಿದೆ. ಡಾಲಿ ಧನಂಜಯ್‌ ಅವರ ಲುಕ್ ಬಹಳ ವಿಶೇಷವಾಗಿದ್ದು, ಎಲ್ಲರ ಗಮನವನ್ನು ಸೆಳೆಯುತ್ತಿದೆ. ಶೀರ್ಷಿಕೆ ಮತ್ತು ಪೋಸ್ಟರ್ ನೋಡಿದಾಗ ಬಹುಶಃ ಇದು ಕೋಟಿ ಕನಸನ್ನು ಕಾಣುವ ಸಾಮಾನ್ಯನ ಕಥೆ ಇರಬೇಕು ಎನ್ನುವಂತಿದೆ.

Leave a Comment