Rashmika: ರಶ್ಮಿಕಾ ಬರ್ತಡೇಗೆ ಪೋಸ್ಟರ್ ಬಿಡುಗಡೆ; ನಟಿಯ ಲುಕ್ ಗೆ ಬೆಂಕಿ ಅಂತಿದ್ದಾರೆ ಫ್ಯಾನ್ಸ್

Written by Soma Shekar

Published on:

---Join Our Channel---

Rashmika : ನ್ಯಾಷನಲ್ ಕ್ರಶ್ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ (Rashmika) ಅವರ ಜನ್ಮದಿನ ಇಂದು. ನಟಿ ತಮ್ಮ ಹುಟ್ಟು ಹಬ್ಬದ ಖುಷಿಯಲ್ಲಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ರಶ್ಮಿಕಾ ಅವರು ತಾನು ಜನ್ಮದಿನವನ್ನು ಅಬುದಾಬಿಯಲ್ಲಿ ಆಚರಿಸಿಕೊಳ್ಳುವುದಾಗಿ ಹೇಳಿದ್ದರು. ಇನ್ನು ಇಂದು ನಟಿಯ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಅಭಿನಯದ ಎರಡು ಸಿನಿಮಾಗಳ ಅವರ ಫಸ್ಡ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ರಶ್ಮಿಕಾ ನಾಯಕಿಯಾಗಿರುವ ಬಹು ನಿರೀಕ್ಷಿತ ಸಿನಿಮಾ ಪುಷ್ಪ 2 (Pushpa 2) ಹಾಗೂ ಗರ್ಲ್ ಫ್ರೆಂಡ್ ಸಿನಿಮಾಗಳ ಪೋಸ್ಟರ್ ಅನ್ನು ಚಿತ್ರ ತಂಡಗಳು ಇಂದು ನಟಿಯ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿವೆ. ಪುಷ್ಪ 2 ಸಿನಿಮಾ ತನ್ನ ಎಕ್ಸ್ ಖಾತೆಯಲ್ಲಿ ರಶ್ಮಿಕಾ ಅವರ ಲುಕ್ ಅನ್ನು ಬಿಡುಗಡೆ ಮಾಡಿದೆ. ಇದನ್ನ ನೋಡಿ ಅಭಿಮಾನಿಗಳು ಬೆಂಕಿ ತರ ಇದೆ ಅಂತ ಕಾಮೆಂಟ್ ಮಾಡಿದ್ದಾರೆ.

ದುಬಾರಿ ಸೀರೆಯುಟ್ಟು, ಆಭರಣಗಳನ್ನು ತೊಟ್ಟಿರುವ ರಶ್ಮಿಕಾ ಲುಕ್ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಅಲ್ಲದೇ ಪೋಸ್ಟರ್ ನಲ್ಲಿ ಸಿನಿಮಾ ಆಗಸ್ಟ್ ಹದಿನೈದಕ್ಕೆ ಬಿಡುಗಡೆ ಆಗಲಿದೆ ಎಂದು ಕೂಡಾ ತಿಳಿಸಲಾಗಿದೆ. ನಟಿಯ ಅಭಿಮಾನಿಗಳು ಈ ಪೋಸ್ಟರ್ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ, ನಟಿಯ ಅಂದವನ್ನು ಹಾಡಿ ಹೊಗಳಿದ್ದಾರೆ.

ರಶ್ಮಿಕಾ ಅವರ ಮತ್ತೊಂದು ಸಿನಿಮಾ ಗರ್ಲ್ ಫ್ರೆಂಡ್ ನ (Girl Friend) ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಈ ಮೂಲಕ ನಟಿಯ ಜನ್ಮದಿನಕ್ಕೆ ವಿಶೇಷವಾದ ಶುಭಾಶಯವನ್ನು ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ನಟಿಯ ಅಭಿಮಾನಿಗಳು ರಶ್ಮಿಕಾ ಫೋಟೋಗಳನ್ನು ಶೇರ್ ಮಾಡಿಕೊಂಡು ನಟಿಗೆ ಶುಭಾಶಯವನ್ನು ತಿಳಿಸುತ್ತಿದ್ದಾರೆ.

Leave a Comment