Aditi Prabhudeva: ಯುಗಾದಿಗೆ ಸಿಹಿ ಸುದ್ದಿ ಕೊಟ್ಟ ನಟಿ ಅದಿತಿ ಪ್ರಭುದೇವ; ಮುದ್ದು ಮಗುವಿನ ತಾಯಾದ ನಟಿ

Written by Soma Shekar

Updated on:

---Join Our Channel---

Aditi Prabhudeva: ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ (Aditi Prabhudeva) ಅವರ ಹಬ್ಬದ ದಿನದಂದು ತಮ್ಮ ಮನೆಯ ಮಹಾಲಕ್ಷ್ಮಿಯ ಕುರಿತಾದ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದಾರೆ. ಹೌದು, ನಟಿ ಅದಿತಿ ಪ್ರಭುದೇವ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮವನ್ನು ನೀಡಿದ್ದು, ಯುಗಾದಿ ಹಬ್ಬದ ಈ ವಿಶೇಷ ದಿನದಂದು ತಮ್ಮ ಮುದ್ದು ಮಗಳ ಕೈಯ ಫೋಟೋವನ್ನು ನಟಿ ಹಂಚಿಕೊಳ್ಳುವ ಮೂಲಕ ತಮ್ಮೆಲ್ಲಾ ಅಭಿಮಾನಿಗಳೊಂದಿಗೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ನಟಿಯು ಶೇರ್ ಮಾಡಿರುವ ಫೋಟೋದಲ್ಲಿ ಅವರ ಪತಿ ಹಾಗೂ ಮಗಳ ಕೈ ಜೊತೆ ಅವರ ಕೈ ಕೂಡಾ ಇದ್ದು, ಮುದ್ದಾದ ಫೋಟೋ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. 4.4.2024, ನಮ್ಮನೆ ಮಹಾಲಕ್ಷ್ಮಿ, ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ಎನ್ನುವ ಕ್ಯಾಪ್ಷನ್ ನೊಂದಿಗೆ ನಟಿಯು ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಅದಿತಿ ಪ್ರಭುದೇವ ಅವರ ಅಭಿಮಾನಿಗಳು ಫೋಟೋ ನೋಡಿ ಖುಷಿಯಿಂದ ನಟಿಗೆ ಹಬ್ಬದ ಶುಭಾಶಯಗಳನ್ನು ಕೋರುತ್ತಾ ಶುಭ ಹಾರೈಸಿದ್ದಾರೆ.

ಹೆಣ್ಣು ಮಗುವಿನ ತಾಯಿಯಾದ ಅದಿತಿ ಅವರಿಗೆ ಕಂಗ್ರಾಟ್ಸ್ ಹೇಳಿದ್ದಾರೆ ನೆಟ್ಟಿಗರು ಮತ್ತು ಅಭಿಮಾನಿಗಳು. 2024 ರ ಹೊಸ ವರ್ಷದ ಮೊದಲ ದಿನದಂದು ನಟಿ ತಾವು ಆಗಲಿರುವ ವಿಷಯವನ್ನು ಎಲ್ಲರೊಡನೆ ಹಂಚಿಕೊಂಡಿದ್ದರು. ಅನಂತರ ಅವರು ಬೇಬಿ ಬಂಪ್ ಮತ್ತು ಸೀಮಂತ ಶಾಸ್ತ್ರದ ಒಂದಷ್ಟು ಸುಂದರವಾದ ಫೋಟೋ ಗಳನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.

ನಟಿ ಅದಿತಿ ಪ್ರಭುದೇವ ಅವರು ತಮ್ಮ ನಟನೆಯ ಪಯಣವನ್ನು ಕಿರುತೆರೆಯ ಮೂಲಕ ಆರಂಭಿಸಿ ಬೆಳ್ಳಿ ತೆರೆಗೆ ಎಂಟ್ರಿಯನ್ನು ನೀಡಿದ್ದರು. ಸಿನಿಮಾಗಳ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡ ಅವರು ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ನಂತರ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲವಾದರೂ, ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ.

Leave a Comment