ಸ್ಯಾಂಡಲ್ ವುಡ್ (Sandalwood) ನಟ ಆಕ್ಷನ್ ಪ್ರಿನ್ಸ್ ಖ್ಯಾತಿಯ ಧ್ರುವ ಸರ್ಜಾ (Dhruva Sarja) ಪ್ರೇರಣಾ (Prerana) ದಂಪತಿ ಪ್ರಸ್ತುತ ಅವರ ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ

ಕೆಲವೇ ದಿನಗಳ ಹಿಂದೆಯಷ್ಟೇ ಈ ಸಿಹಿ ಸುದ್ದಿಯನ್ನು ಧ್ರುವ ಸರ್ಜಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಹಂಚಿಕೊಂಡು ಅಭಿಮಾನಿಗಳೊಂದಿಗೆ ತಮ್ಮ ಖುಷಿಯನ್ನು ಹಂಚಿಕೊಂಡಿದ್ದರು.

ಈಗ ಅದರ ಬೆನ್ನಲ್ಲೇ ಇತ್ತೀಚಿಗಷ್ಟೇ ಧೃವ ಸರ್ಜಾ ಅವರ ಪತ್ನಿ ಪ್ರೇರಣಾ ಅವರಿಗೆ ಸೀಮಂತ ಶಾಸ್ತ್ರ (Baby Shower) ನಡೆದಿದೆ.

ಪ್ರೇರಣಾ (Prerana) ಅವರು ಸಮಾರಂಭದ ವೇಳೆ ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದು, ಧೃವ ಲೈಟ್ ಕಲರ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಕನಕಪುರ ರಸ್ತೆಯ ಫಾರ್ಮ್ ಹೌಸ್ ನಲ್ಲಿ ಪ್ರೇರಣಾ ಅವರ ಸೀಮಂತ ಶಾಸ್ತ್ರವು ಬಹಳ ಸಂಭ್ರಮದಿಂದ ಮತ್ತು ಅದ್ದೂರಿಯಾಗಿ ನಡೆದಿದೆ.

ಚಿರು ಸರ್ಜಾ (Chiru Sarja) ಅವರ ಫೋಟೋವನ್ನು ಫೋನ್ ನಲ್ಲಿ ನೋಡುತ್ತಿರುವ ಧ್ರುವ ಪುತ್ರಿಗೆ ತಂದೆ ತಾಯಿ ಚಿರು ಎಂದು ಹೇಳಿಕೊಡುತ್ತಿರುವುದು ಕಂಡಿದ್ದು, ಈ ದೃಶ್ಯ ಎಲ್ಲರ ಗಮನ ಸೆಳೆದಿದೆ.

ಕಳೆದ ವರ್ಷ ಧ್ರುವ ಸರ್ಜಾ ಅವರ ಮನೆಗೆ ಮುದ್ದು ಮಗಳ ಆಗಮನವಾಗಿತ್ತು. ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.

ಪ್ರೇರಣಾ ಅವರು ಎಂಟು ತಿಂಗಳ ತುಂಬು ಗರ್ಭಿಣಿಯಾಗಿದ್ದು, ಸೀಮಂತ ಶಾಸ್ತ್ರವನ್ನು ಸಾಂಪ್ರದಾಯಕವಾಗಿ ನಡೆಸಲಾಗಿದೆ.