Pranitha Subhash: ಮುದ್ದು ಮಗಳ ಜೊತೆಗೆ ಹೊಸ ಫೋಟೋ ಶೂಟ್ ನಲ್ಲಿ ಮಿಂಚಿದ ಪ್ರಣೀತಾ: ಸೋ ಕ್ಯೂಟ್ ಅಂದ್ರು ಫ್ಯಾನ್ಸ್

Written by Soma Shekar

Published on:

---Join Our Channel---

Pranitha Subhash: ಸ್ಯಾಂಡಲ್ವುಡ್ ನಟ ಸ್ಟಾರ್ ನಟಿಯರಲ್ಲಿ ಪ್ರಣೀತಾ ಸುಭಾಷ್ ಅವರು ಸಹಾ ಒಬ್ಬರಾಗಿದ್ದಾರೆ. ಪ್ರಣೀತ (Pranitha Subhash) ಅವರು ಕನ್ನಡ ಮಾತ್ರವೇ ಅಲ್ಲದೇ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲೂ ನಟಿಸುವ ಮೂಲಕ ಪಂಚಭಾಷಾ ತಾರೆಯಾಗಿ ಹೆಸರನ್ನ ಪಡೆದುಕೊಂಡಿರುವ ನಟಿಯಾಗಿದ್ದಾರೆ. ದಕ್ಷಿಣದ ಸ್ಟಾರ್ ಗಳ ಜೊತೆಯಲ್ಲಿ ತೆರೆಯನ್ನು ಹಂಚಿಕೊಂಡಿದ್ದಾರೆ ನಟಿ ಪ್ರಣೀತಾ‌ ಸುಭಾಷ್.

ಪ್ರಣೀತಾ ಅವರು ಪೊರ್ಕಿ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿಯನ್ನು ನೀಡಿದರು. ಅನಂತರ ಅವರ ಸಿನಿ ಪಯಣ ಕನ್ನಡದಿಂದ ಅನ್ಯ ಭಾಷೆಗಳ ಕಡೆಗೂ ನಡೆಯಿತು. ವೈವಿದ್ಯಮಯ ಪಾತ್ರಗಳ ಮೂಲಕ ಪ್ರಣೀತಾ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ನಟಿ ಪ್ರಣೀತಾ ಅವರು ಮದುವೆ ನಂತರ ಸಿನಿಮಾಗಳಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ ಮತ್ತು ತಮ್ಮ ಕುಟುಂಬ ಮತ್ತು ಮುದ್ದು ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಪ್ರಣೀತಾ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಸಂದರ್ಭಗಳ ಫೋಟೋಗಳನ್ನು ಶೇರ್ ಮಾಡು ನಟಿ ಈಗ ತಮ್ಮ ಮುದ್ದು ಮಗಳ ಜೊತೆಗೆ ಫೋಟೋ ಶೂಟ್ ಮಾಡಿಸಿರುವ ಬಹಳ ಸುಂದರವಾದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ.

ಪ್ರಣೀತಾ ಅವರು ಶೇರ್ ಮಾಡಿದ ಫೋಟೋಗಳಿಗೆ ಅವರ ಅಭಿಮಾನಿಗಳು ಮತ್ತು ನೆಟ್ಟಿಗರು ಮೆಚ್ಚುಗೆಗಳನ್ನು ನೀಡಿದ್ದು, ಕಾಮೆಂಟ್ ಮಾಡಿದ ಮಂದಿ ಪ್ರಣೀತಾ ಅವರ ಮಗಳು ಸೂ ಕ್ಯೂಟ್ ಎಂದು ಮೆಚ್ಚುಗೆಗಳನ್ನು ನೀಡಿದ್ದಾರೆ. ಅಮ್ಮ ಮಗಳ ಫೋಟೋಗಳು ತುಂಬಾ ಸುಂದರವಾಗಿದೆ ಎಂದೂ ಕಾಮೆಂಟ್ ಮಾಡಿದ್ದಾರೆ.

Leave a Comment