Vidya Balan: ನಾನು ಧಾರ್ಮಿಕ ಸಂಸ್ಥೆ ಮತ್ತು ಕಟ್ಟಡಗಳಿಗೆ ನಯಾ ಪೈಸೆ ದೇಣಿಗೆ ಕೊಡಲ್ಲ; ವಿದ್ಯಾಬಾಲನ್ ಹೀಗೆ ಹೇಳಿದ್ದೇಕೆ?

Written by Soma Shekar

Published on:

---Join Our Channel---

Vidya Balan: ಬಾಲಿವುಡ್ ನ (Bollywood) ಜನಪ್ರಿಯ ನಟಿಯರಲ್ಲಿ ವಿದ್ಯಾ ಬಾಲನ್ (Vidya Balan) ಸಹಾ ಒಬ್ಬರಾಗಿದ್ದಾರೆ. ಸಿನಿಮಾ ರಂಗದಲ್ಲಿ ತನಗಾಗಿ ಒಂದು ಪ್ರತ್ಯೇಕ ಸ್ಥಾನವನ್ನು ಪಡೆದುಕೊಂಡಿರುವ ಈ ನಟಿ ಇತ್ತೀಚಿಗೆ ಮಾತನಾಡುತ್ತಾ, ತಾನು ಯಾವುದೇ ಕಾರಣಕ್ಕೂ ಕೂಡಾ ಧಾರ್ಮಿಕ ಕಟ್ಟಡಗಳ (Religious Structure) ನಿರ್ಮಾಣಕ್ಕೆ ಮತ್ತು ಧಾರ್ಮಿಕ ಸಂಸ್ಥೆಗಳಿಗೆ (Religious institutions) ದೇಣಿಗೆಯನ್ನು (Donation) ನೀಡೋದಿಲ್ಲ ಎನ್ನುವ ಮಾತುಗಳನ್ನು ಹೇಳಿದ್ದು ನಟಿಯ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಜೊತೆಗೆ ದೊಡ್ಡ ಮಟ್ಟದಲ್ಲಿ ಸುದ್ದಿ ಸಹಾ ಆಗಿದೆ.

ನಟಿಯು ಇತ್ತೀಚಿಗೆ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದ ವೇಳೆಯಲ್ಲಿ ಒಂದಷ್ಟು ವಿಚಾರಗಳನ್ನು ಮುಕ್ತವಾಗಿ ಮಾತನಾಡಿದ್ದಾರೆ. ದೇಶದಲ್ಲಿ ಧೃವೀಕರಣ (Polarisation) ಅನ್ನೋದು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಈ ಹಿಂದೆ ಧಾರ್ಮಿಕ ಗುರುತು ಎನ್ನುವುದು ನಮ್ಮಲ್ಲಿ ಇರಲಿಲ್ಲ, ಆದರೆ ಈಗ ಅದು ರಾಜಕೀಯ ಮಾತ್ರವಲ್ಲ ಸೋಶಿಯಲ್ ಮೀಡಿಯಾದಲ್ಲೂ ಕಾಣುತ್ತಿದೆ.

ಇದೇ ವೇಳೆ ನಟಿ ತಾನೇಕೆ ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆ ನೀಡುವುದಿಲ್ಲ ಎನ್ನುವ ವಿಚಾರಕ್ಕೆ ಉತ್ತರ ನೀಡಿದ್ದಾರೆ. ನಾನು ಆಸ್ಪತ್ರೆ, ಶಿಕ್ಷಣ, ನೈರ್ಮಲ್ಯ, ಆರೋಗ್ಯ ಇಂತಹ ವಿಚಾರಗಳಿಗೆ ದೇಣಿಗೆಯನ್ನು ನೀಡುತ್ತೇನೆ. ನನ್ನನ್ನ ಯಾರಾದರೂ ಧಾರ್ಮಿಕ ಸಂಸ್ಥೆ, ಧಾರ್ಮಿಕ ಕಟ್ಟಡ ನಿರ್ಮಾಣ ಇಂತಹುವುಗಳಿಗೆ ದೇಣಿಗೆ ಕೇಳಿದರೆ ನಾನು ಖಂಡಿತ ನೀಡುವುದಿಲ್ಲ.

ಬದಲಾಗಿ ಆಸ್ಪತ್ರೆ, ಶಾಲೆ, ಶೌಚಾಲಯ ನಿರ್ಮಾಣ ಮಾಡುತ್ತೇನೆ ಎಂದರೆ ನಾನು ಬಹಳ ಸಂತೋಷದಿಂದ ದೇಣಿಗೆಯನ್ನು ನೀಡುತ್ತೇನೆ. ಆದರೆ ಧಾರ್ಮಿಕ ಸಂಸ್ಥೆಗಳಿಗೆ ನಾನು ಹಣ ನೀಡುವುದಿಲ್ಲ ಎಂದು ಹೇಳಿದ್ದಾರೆ. ನಟಿ ಹೇಳಿದ ಮಾತುಗಳಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ನಟಿ ಹೇಳಿದ್ದು ನಿಜ ಎಂದರೆ ಇನ್ನೂ ಕೆಲವರು ದೇವಾಲಯಗಳ ದುಡ್ಡು ಸರ್ಕಾರ ಜನರಿಗೆ ಬಳಸೋ ವಿಚಾರ ಇವರಿಗೆ ಗೊತ್ತಿಲ್ಲ ಎಂದಿದ್ದಾರೆ.

Leave a Comment