Amrutha Prem: ಟಗರು ಪಲ್ಯ ಸಿನಿಮಾ ನಂತ್ರ ಅಮೃತಾ ಪ್ರೇಮ್ ಎಲ್ಲಿ? ಏನ್ಮಾಡ್ತಿದ್ದಾರೆ? ಅಭಿಮಾನಿಗಳ ಪ್ರಶ್ನೆ

Written by Soma Shekar

Published on:

---Join Our Channel---

Amrutha Prem: ಇತ್ತೀಚಿಗೆ ಸ್ಯಾಂಡಲ್ವುಡ್ ಗೆ (Sandalwood) ಎಂಟ್ರಿಯನ್ನು ನೀಡಿದ ನವ ನಟಿಯರಲ್ಲಿ ಸ್ಯಾಂಡಲ್ವುಡ್ ನ ಸ್ಟಾರ್ ನಟ ಪ್ರೇಮ್ ಅವರ ಮಗಳು ಅಮೃತ ಪ್ರೇಮ್ (Amrutha Prem) ಸಹಾ ಒಬ್ಬರು. ಡಾಲಿ ಧನಂಜಯ್ ಅವರ ನಿರ್ಮಾಣದ ಟಗರು ಪಲ್ಯ ಸಿನಿಮಾದ ಮೂಲಕ ಅಮೃತಾ ಪ್ರೇಮ್ ಅವರು ಕನ್ನಡ ಸಿನಿಮಾ ರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದಾಗಿದೆ. ಮೊದಲ ಸಿನಿಮಾದಲ್ಲೇ ತಮ್ಮ ಅದ್ಭುತ ಅಭಿನಯದ ಮೂಲಕ ಸಿನಿ ಪ್ರೇಮಿಗಳ ಮನಸ್ಸನ್ನು ಗೆಲ್ಲುವಲ್ಲಿ ಅಮೃತಾ ಯಶಸ್ಸನ್ನ ಪಡೆದುಕೊಂಡರು.‌

ಮೊದಲ ಸಿನಿಮಾದ ಗೆಲುವಿನ ನಂತರ ಅಮೃತಾ ಅವರ ಮುಂದಿನ ಸಿನಿಮಾ ಯಾವುದು? ಯಾವ ನಟನ ಜೊತೆಗೆ ನಟಿ ತೆರೆಯನ್ನು ಹಂಚಿಕೊಳ್ಳುತ್ತಾರೆ? ಎನ್ನುವ ಪ್ರಶ್ನೆಗಳ ಉತ್ತರಕ್ಕಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಟಗರು ಪಲ್ಯ (Tagaru Palya) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆಯನ್ನು ಕಂಡು, ನಿರ್ಮಾಪಕರಿಗೆ ಸಿನಿಮಾ ಮೇಲೆ ಹೂಡಿದ್ದ ಹಣ ವಾಪಸ್ಸು ಬಂದಿತ್ತು. ಇದೇ ವೇಳೆ ಅಮೃತ ಭರವಸೆಯ ನಟಿಯಾಗಿ ಹೊರಹೊಮ್ಮಿದ್ದರು.

ಮಗಳ ಮೊದಲ ಸಿನಿಮಾಕ್ಕೆ ಪ್ರೇಮ್ (Prem) ಅವರು ಪ್ರೋತ್ಸಾಹವನ್ನು ನೀಡಿದ್ದರು. ಮೊದಲ ಸಿನಿಮಾದ ಸಕ್ಸಸ್ ನಂತರ ನಟಿ ಅಮೃತಾ ಅವರು ಸುಮ್ಮನೆ ಕೂತಿಲ್ಲ. ಅವರು ತಮ್ಮ ಮುಂದಿನ ಸಿನಿಮಾಕ್ಕಾಗಿ ಹೊಸ ಹೊಸ ಕಥೆಗಳನ್ನು ಕೇಳುತ್ತಿದ್ದಾರೆ. ಕೆಲವೊಂದು ಕಥೆಗಳನ್ನು ಫೈನಲ್ ಮಾಡಿದ್ದಾರೆ ಎನ್ನಲಾಗಿದ್ದು, ಶೀಘ್ರದಲ್ಲೇ ಅಮೃತಾ ಅವರ ಹೊಸ ಸಿನಿಮಾದ ಅಪ್ಡೇಟ್ ಹೊರಗೆ ಬರಲಿದೆ ಎನ್ನಲಾಗಿದೆ.

ಅಲ್ಲದೇ ಅಮೃತಾ ಅವರು ಸಿನಿಮಾಗಳಲ್ಲಿ ಫಿಟ್ ಆಗಿ ಕಾಣಬೇಕು ಎನ್ನುವ ಕಾರಣಕ್ಕೆ ಜಿಮ್ ನಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಮುಂದಿನ ಸಿನಿಮಾಗಳಿಗಾಗಿ ಅಗತ್ಯ ಇರುವಂತಹ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿತ್ತಿದ್ದಾರೆ ಎನ್ನಲಾಗಿದ್ದು, ಅಭಿಮಾನಿಗಳು ಅವರನ್ನು ಮತ್ತೆ ತೆರೆಯ ಮೇಲೆ ನೋಡೋದಕ್ಕಾಗಿ ಕಾಯ್ತಾ ಇದ್ದಾರೆ.

Leave a Comment