Srirastu Shubhamastu: ಒಂದೇ ಸಲ ಇಷ್ಟೊಂದು ಶಾಕ್ ಕೊಡಬೇಡಿ, ಹಾರ್ಟ್ ಅಟ್ಯಾಕ್ ಆಗ್ಬಹುದು, ತುಳಸಿಗೆ ಫ್ಯಾನ್ಸ್ ಸಲಹೆ

Written by Soma Shekar

Published on:

---Join Our Channel---

Srirastu Shubhamastu: ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ಪ್ರಸಾರ ಆಗ್ತಾ ಇರೋ ಬಹುತೇಕ ಎಲ್ಲಾ ಸೀರಿಯಲ್ ಗಳಲ್ಲೂ (Kannada Serials) ನಾಯಕಿ ಅಂದ್ರೆ ಅವಳು ಅಗತ್ಯಕ್ಕಿಂತ ಹೆಚ್ಚು ಒಳ್ಳೆಯವಳಾಗಿರ್ತಾಳೆ ಹಾಗೂ ಕೆಟ್ಟವರು ಕೊಡುವಂತಹ ಎಲ್ಲಾ ಟಾರ್ಚರ್ ಗಳನ್ನು ಅನುಭವಿಸಿಕೊಂಡು ತನ್ನಲಿ ತಾನು ನೋವನ್ನು ನುಂಗಿಕೊಂಡು ಬದುಕುವಂತ ಕ್ಯಾರೆಕ್ಟರ್ ಆಗಿರುತ್ತೆ. ಅದರಲ್ಲೂ ನಾಯಕಿಯ ಪಾತ್ರಕ್ಕೆ ಕಣ್ಣೀರು ಅನ್ನೋದು ಅನಿವಾರ್ಯ ಅನ್ನೋ ರೀತಿಯಲ್ಲಿ ಆಗಿದೆ. ಇಂತಹ ಪಾತ್ರಗಳೇ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಪದೇ ಪದೇ ಅದೇ ಹಾಡು ಎನ್ನುವಂತೆ ಒಂದೇ ರೀತಿಯ ಪಾತ್ರಗಳನ್ನು ನೋಡಿ ಪ್ರೇಕ್ಷಕರು ಕೂಡಾ ಬೇಸರಗೊಂಡಿದ್ದಾರೆ.

ಇದರ ಬದಲಾಗಿ ಸೀರಿಯಲ್ ನಲ್ಲಿ ನಾಯಕಿ ವಿಲನ್ ಗೆ ಸವಾಲು ಹಾಕಿ ಅವಳ ಮುಂದೆ ತಾನೇನೂ ಕಡಿಮೆ ಇಲ್ಲ ಎನ್ನುವಂತೆ ಎದ್ದು ನಿಂತಾಗ, ಧೈರ್ಯವಾಗಿ ಮಾತನಾಡಿದಾಗ ಅದನ್ನ ನೋಡೋದಕ್ಕೆ ಪ್ರೇಕ್ಷಕರು ಇಷ್ಟಪಡುತ್ತಾರೆ. ಉದಾಹರಣೆಗೆ ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ನಾಯಕಿ ಭೂಮಿಕಾ ಅತ್ತೆ ಶಕುಂತಲಾಗೆ ಆಗಾಗ ನೀಡುವ ಕೌಂಟರ್ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದೆ. ಇದಲ್ಲದೇ ಇತ್ತೀಚಿನ ದಿನಗಳಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಭಾಗ್ಯ ಕೆಲಸ ಗಿಟ್ಟಿಸಿಕೊಂಡು ಇನ್ಮುಂದೆ ಸಂಪಾದನೆ ಮಾಡ್ತಾಳೆ ಅನ್ನೋದು ಪ್ರೇಕ್ಷಕರಿಗೆ ಒಂದಷ್ಟು ಖುಷಿಯನ್ನು ನೀಡಿದೆ.

ಇವೆಲ್ಲವುಗಳ ನಡುವೆ ಜನಪ್ರಿಯ ಧಾರಾವಾಹಿ ಶ್ರೀರಸ್ತು ಶುಭಮಸ್ತುವಿನಲ್ಲಿ (Srirastu Shubhamastu) ನಾಯಕ ತುಳಸಿ ಪಾತ್ರದ ಬಗ್ಗೆ ಜನ ಮೆಚ್ಚಿದ ನೀಡುತ್ತಿದ್ದಾರೆ. ವಿಧವೆ, ಎರಡು ಮಕ್ಕಳ ತಾಯಿಯಾದ ತುಳಸಿ ಅನಿಶ್ಚಿತ ಪರಿಸ್ಥಿತಿಗಳಲ್ಲಿ ಮಾಧವನನ್ನು ಮದುವೆಯಾಗಿ ಆತನ ಮನೆಗೆ ಕಾಲಿಡಬೇಕಾಗುತ್ತೆ. ಆ ಮನೆಯಲ್ಲಿ ಕೆಲವರು ತುಳಸಿಯನ್ನು ಇಷ್ಟಪಟ್ಟರೆ, ಮಿಲನ್ ಪಾತ್ರಗಳು ತುಳಸಿಯನ್ನು ಗೋಳಾಡಿಸಲು ಒಂದಲ್ಲಾ ಒಂದು ತಂತ್ರವನ್ನು ಹೂಡೋದು ಸಾಮಾನ್ಯವಾಗಿದೆ. ಆದರೆ ಈಗ ಅಲ್ಲೊಂದು ಬದಲಾವಣೆ ಕಂಡಿದೆ.

ಸೀರಿಯಲ್ ಪ್ರೇಮಿಗಳ ಮನಸ್ಸನ್ನು ಅರ್ಥ ಮಾಡಿಕೊಂಡ ಹಾಗೆ ನಿರ್ದೇಶಕರು ಸಹಾ ಸೀರಿಯಲ್ ನಲ್ಲಿ ಅಭಿಮಾನಿಗಳು ಖುಷಿ ಪಡುವಂತಹ ವಿಷಯಗಳನ್ನು ತೋರಿಸುತ್ತಿದ್ದಾರೆ. ಕಿರಿಯ ಮಗ ಅಭಿಯ ಮನಸ್ಸನ್ನು ಗೆಲ್ಲಲು ತುಳಸಿ (Tulasi) ಡ್ರೈವಿಂಗ್ ಕಲಿತಾಗಿದೆ. ಕಂಪನಿ ವಾರ್ಷಿಕೋತ್ಸವದಲ್ಲಿ ಭರತನಾಟ್ಯ ಮಾಡಿ ಎಲ್ಲರಿಗೂ ಅಚ್ಚರಿಯನ್ನ ಮೂಡಿಸಿದ್ದಾಳೆ. ಈ ಎಪಿಸೋಡ್ ಗಳಂತೂ ಪ್ರೇಕ್ಷಕರ ಮನಸಿಗೆ ಬಹಳ ಖುಷಿಯನ್ನು ನೀಡಿ, ಮೆಚ್ಚುಗೆಗಳು ಹರಿದು ಬರುವಾಗಲೇ ಮತ್ತೊಂದು ಶಾಕ್ ಕಂಡಿದೆ.

ಮಾಧವನ ಗೆಳೆಯ ಮನೆಗೆ ಬಂದ ಸಂದರ್ಭದಲ್ಲಿ ತುಳಸಿಯನ್ನು ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳುತ್ತಾನೆ. ಅದಕ್ಕೆ ಶಾರ್ವರಿ ವ್ಯಂಗ್ಯ ಮಾಡುತ್ತಾ, ತುಳಸಿಗೆ ಇಂಗ್ಲಿಷ್ ಬರೋದಿಲ್ಲ ಅಂತ ಹಂಗಿಸುವಾಗಲೇ ತುಳಸಿ ಇಂಗ್ಲೀಷ್ ನಲ್ಲಿ ಉತ್ತರ ಕೊಟ್ಟು ಎಲ್ಲರಿಗೂ ಶಾಕ್ ನೀಡುತ್ತಾಳೆ. ಇದನ್ನು ನೋಡಿದ ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ, ಒಬ್ಬ ಗೃಹಿಣಿ ಮನಸ್ಸು ಮಾಡಿದರೆ ಏನು ಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ತುಳಸಿ ಪಾತ್ರ ಖಂಡಿತ ಅದ್ಭುತ ಉದಾಹರಣೆಯಾಗಿದೆ ಅಂತ ಕಾಮೆಂಟ್ ಗಳನ್ನು ಮಾಡಿದ್ದಾರೆ.

ತುಳಸಿ ಪಾತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ತುಳಸಿ ಕಣ್ಣೀರು ನೋಡಿ ಸಾಕಾಗಿ, ಇನ್ಮೇಲೆ ಸೀರಿಯಲ್ ನೋಡಬಾರದು ಅನ್ಕೊಂಡಿದ್ವಿ, ಆದರೆ ಈಗ ತುಳಸಿ ಪಾತ್ರಕ್ಕೆ ಬೆಲೆ ಬಂದಿದೆ. ಹೆಣ್ಣು ಮನಸ್ಸು ಮಾಡಿದ್ರೆ ಎಲ್ಲಾ ಸಾಧ್ಯ ಅನ್ನೋದಕ್ಕೆ ಸಾಕ್ಷಿ ಇದು ಎಂದು ಕಾಮೆಂಟ್ ಗಳಲ್ಲಿ ಮೆಚ್ಚುಗೆಗಳನ್ನು ನೀಡಿದ್ದಾರೆ. ಕೆಲವರು ತಮಾಷೆ ಮಾಡ್ತಾ ಮನೆಯವರು ಇನ್ನೂ ಭರತನಾಟ್ಯ ನೋಡಿದ ಶಾಕ್ ನಲ್ಲೇ ಇದ್ದಾರೆ, ಆದರೆ ಬೆನ್ನಲ್ಲೇ ಮತ್ತೆ ಇನ್ನೊಂದು ಶಾಕ್ ಕೊಡ್ರೆ ಅವರಿಗೆ ಹಾರ್ಟ್ ಅಟ್ಯಾಕ್ ಆಗಬಹುದು ಎಚ್ಚರ ಅಂತ ಕೂಡಾ ಕಾಮೆಂಟ್ ಮಾಡಿದ್ದಾರೆ.

Leave a Comment