ಶಿವಾರಾಧನೆಯಲ್ಲಿ ಒಲಂಪಿಕ್ಸ್ ಪದಕ ವಿಜೇತ: ರಿಯಲ್ ಬಾಹುಬಲಿ ಎಂದ‌ ನೆಟ್ಟಿಗರು

ಟೋಕಿಯೋ ಒಲಂಪಿಕ್ಸ್ ನಲ್ಲಿ ಪದಕವನ್ನು ಗೆದ್ದ ನಂತರ ಭಾರತೀಯ ಕುಸ್ತಿಪಟು ರವಿ ದಹಿಯಾ ಅವರಿಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಅಸಂಖ್ಯಾತ ಭಾರತೀಯರು ಶುಭಾಶಯಗಳನ್ನು ಕೋರಿ ಮೆಚ್ಚುಗೆಯನ್ನು ಸೂಚಿಸಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ರವಿ ದಹಿಯಾ ಅವರಿಗೆ ಬಹಳಷ್ಟು ಜನರು ಅಭಿನಂದನೆಗಳನ್ನು ಸಲ್ಲಿಸಿದ್ದರು. ಪ್ರಸ್ತುತ ತಮ್ಮ ತವರಿಗೆ ವಾಪಸಾಗಿರುವ ರವಿ ದಹಿಯಾ ಅವರು ತಮ್ಮ ಹರಕೆಯನ್ನು ಪೂರೈಸಿದ್ದು, ಶಿವಲಿಂಗಕ್ಕೆ ಜಲಾಭಿಷೇಕ ವನ್ನು ಮಾಡಿದ್ದಾರೆ. ಅವರು ಹರಕೆಯನ್ನು ಪೂರೈಸಿ ಶಿವಲಿಂಗಕ್ಕೆ ಜಲಾಭಿಷೇಕವನ್ನು ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ […]

Continue Reading