Crime : ತಂಗಿ ಮದುವೆಗೆ ಗಿಫ್ಟ್ ವಿವಾದ; ಗಂಡನನ್ನು ಹೊಡೆದು ಕೊಂದ ಹೆಂಡತಿ

Written by Soma Shekar

Published on:

---Join Our Channel---

Crime : ಉತ್ತರ ಪ್ರದೇಶದಲ್ಲಿ (Uttara Pradesh) ನಡೆದಂತಹ ದುರಂತವೊಂದು ಈಗ ದೊಡ್ಡ ಸುದ್ದಿಯಾಗಿದೆ. ತಂಗಿಯ ಮದುವೆಗೆ ಉಡುಗೊರೆ ನೀಡುವ ವಿಚಾರವಾಗಿ ನಡೆದಂತಹ ವಿವಾದವೊಂದರಲ್ಲಿ ಉಡುಗೊರೆ ನೀಡುತ್ತಿರುವ ವಿಚಾರ ತಿಳಿದು ಹೆಂಡತಿ ಮತ್ತು ಸಂಬಂಧಿಕರು ವ್ಯಕ್ತಿಯೊಬ್ಬನನ್ನು ಹೊಡೆದು ಕೊಂ ದಿ ರುವ ಘಟನೆ (Crime) ಇದಾಗಿದೆ. ಉತ್ತರ ಪ್ರದೇಶದ ಬಾರಾಬಂಕಿ ಎನ್ನುವಲ್ಲಿ ಈ ಘಟನೆಯು ವರದಿಯಾಗಿದೆ.

ಇಲ್ಲಿ ವ್ಯಕ್ತಿಯೊಬ್ಬರು ತನ್ನ ತಂಗಿಯ ಮದುವೆಗೆ ಉಡುಗೊರೆಯಾಗಿ ನೀಡುವುದಕ್ಕಾಗಿ ಹೊಸ ಎಲ್ ಇ ಡಿ ಟಿವಿ ಮತ್ತು ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಬೇಕೆಂದು ಹೇಳಿದ ಸಂದರ್ಭದಲ್ಲಿ ಆತನ ಹೆಂಡತಿ ಗಂಡನ ಮೇಲೆ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾಳೆ.‌ ಇದರಿಂದ ಗಂಡ ಹೆಂಡತಿಯ ನಡುವೆ ಗಲಾಟೆ ನಡೆದಿದ್ದು, ಅದು ತಾರಕಕ್ಕೇರಿದೆ. ಕೊನೆಗೆ ಹೊಡೆದಾಟದ ಹಂತಕ್ಕೆ ತಲುಪಿದ ಜಗಳದಲ್ಲಿ ಸಂತ್ರಸ್ತನನ್ನು ಹೊಡೆದು ಸಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಪ್ರಾಣ ಕಳೆದುಕೊಂಡ ವ್ಯಕ್ತಿಯ ಪತ್ನಿ ಮತ್ತು ಆಕೆಯ ಸಹೋದರನೂ ಸೇರಿದಂತೆ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ.‌ ಪೊಲೀಸ್ ವರದಿಗಳ ಪ್ರಕಾರ, ಚಂದ್ರಪ್ರಕಾಶ್ ಮಿಶ್ರಾ (Chandra Prakash Mishra) ಮತ್ತು ಕ್ಷಮಾ ಮಿಶ್ರಾ (Kshama Mishra) ಪತಿ-ಪತ್ನಿಯಾಗಿದ್ದು, ಚಂದ್ರಪ್ರಕಾಶ್ ಅವರ ತಂಗಿಯ ಮದುವೆಗೆ ಉಡುಗೊರೆ ನೀಡುವ ವಿಚಾರದಲ್ಲಿ ಗಂಡ ಹೆಂಡತಿ ನಡುವೆ ಜಗಳ ನಡೆದಿದೆ. ಜಗಳದಿಂದ ಕೋಪಗೊಂಡಿದ್ದ ಕ್ಷಮಾಮಿಶ್ರಾ ಮಂಗಳವಾರ ತನ್ನ ಸಹೋದರ ಹಾಗೂ ಇತರ ಸಂಬಂಧಿಕರನ್ನು ಕದರಾಬಾದ್‌ನಲ್ಲಿರುವ ತನ್ನ ನಿವಾಸಕ್ಕೆ ಕರೆಸಿಕೊಂಡಿದ್ದಳು.

ಈ ವೇಳೆ ಎಲ್ಲರೂ ಸೇರಿ ಚಂದ್ರಪ್ರಕಾಶ್ ಅವರನ್ನ ತೀವ್ರವಾಗಿ ಹೊಡೆದಿದ್ದಾರೆ. ಇದರಿಂದ ಚಂದ್ರಪ್ರಕಾಶ್ ಪ್ರಾಣ ಬಿಟ್ಟಿದ್ದಾರೆ. ಪೊಲೀಸ್ ಅಧಿಕಾರಿ ಬಿನು ಸಿಂಗ್ ಅವರು ಮಾತನಾಡುತ್ತಾ, ಚಂದ್ರಪ್ರಕಾಶ್ ಅವರ ತಂಗಿಯ ಮದುವೆ ಏಪ್ರಿಲ್ 26 ರಂದು ಇತ್ತು, ಅವರು ತಂಗಿಗೆ ಎಲ್ ಇ ಡಿ ಟಿವಿ ಮತ್ತು ಬಂಗಾರದ ಉಂಗುರ ಉಡುಗೊರೆ ನೀಡಲು ಆಲೋಚನೆ ಮಾಡಿದ್ದರು ಎನ್ನಲಾಗಿದೆ. ಇದು ಅವರ ಪತ್ನಿ ಕ್ಷಮಾಗೆ ಇಷ್ಟವಾಗಿಲ್ಲ.

ಕ್ಷಮಾ ಗಂಡನ ಜೊತೆಗೆ ಈ ವಿಚಾರವಾಗಿ ಜಗಳ ಮಾಡಿದ್ದು, ಅನಂತರ ತಮ್ಮ ಸಂಬಂಧಿಕರನ್ನು ಕರೆಸಿ ವಿಚಾರ ತಿಳಿಸಿದ್ದು, ಅವರು ಕೋಲುಗಳಿಂದ ಚಂದ್ರಪ್ರಕಾಶ್ ಅವರನ್ನ ಹೊಡೆದಿದ್ದು, ವಿಷಯ ತಿಳಿದು ಪೋಲಿಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದು, ಚಂದ್ರಪ್ರಕಾಶ್ ನನ್ನು ಆಸ್ಪತ್ರೆಗೆ ರವಾನಿಸಿದ್ದು, ಚಿಕಿತ್ಸೆ ಪಡೆಯುವಾಗಲೇ ಚಂದ್ರಪ್ರಕಾಶ್ ಪ್ರಾಣ ಬಿಟ್ಟ ಎಂದು ಪೊಲೀಸರು ಹೇಳಿದ್ದಾರೆ.

Leave a Comment