Crime News: ಆ್ಯಪ್ ಬಳಸಿ, ಮಹಿಳೆ ಧ್ವನಿಯಲ್ಲಿ ಮಾತು; ಯುವಕನಿಂದ 7 ಜನ ಯುವತಿಯರ ಮೇಲೆ ಅತ್ಯಾಚಾರ

Written by Soma Shekar

Published on:

---Join Our Channel---

Crime News : ತಂತ್ರಜ್ಞಾನ (Technology) ಬೆಳೆದಂತೆ ಕೆಲವರು ಇದನ್ನು ಕೆಟ್ಟದಾಗಿ ಬಳಸುವುದು ಕೂಡಾ ನಡೆಯುತ್ತಿದ್ದು, ಇವು ಅಪರಾಧಗಳಿಗೆ (Crime News)/ ಕಾರಣವಾಗುತ್ತಿದೆ ಎನ್ನುವುದು ಸಹಾ ಆಗಾಗ ಸುದ್ದಿಗಳಾಗುತ್ತಿರುತ್ತದೆ. ಅಂತದೇ ಒಂದು ಘಟನೆಯಲ್ಲಿ ದುರುಳನೊಬ್ಬ ಆ್ಯಪ್ ಅನ್ನು ಬಳಸಿ, ತನ್ನ ದನಿಯನ್ನು ಮಹಿಳೆಯಂತೆ ಬದಲಾಯಿಸಿಕೊಂಡು, ಯುವತಿಯರ ಮೇಲೆ ದೌರ್ಜನ್ಯವನ್ನು ಎಸಗುತ್ತಿದ್ದ ಘಟನೆಯೊಂದು ವರದಿಯಾಗಿದೆ.

ಮಧ್ಯಪ್ರದೇಶದ (Madhya Pradesh) ಸಿದ್ಧಿ ಜಿಲ್ಲೆಯಲ್ಲಿ ಇಂತಹುದೊಂದು ಘಟನೆಯು ನಡೆದಿದೆ. ಕುಕೃತ್ಯ ಎಸಗಿದ್ದ ಆರೋಪಿಯನ್ನು ಪೋಲಿಸರು ಬಂಧಿಸಿದ್ದು, ಆತನಿಗೆ ನೆರವು ನೀಡಿದ್ದ ಇನ್ನಿಬ್ಬರು ಯುವಕರನ್ನು ಸಹಾ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ವಿಷಯದ ವಿವರಗಳಿಗೆ ಹೋದರೆ ಇಂತಹುದೊಂದು ಕ್ರಿ ಮಿ ನಲ್ ಕೆಲಸ ಮಾಡಿದವನು ಒಬ್ಬ ಅನಕ್ಷರಸ್ಥನಾಗಿದ್ದು, ಆತನ ಹೆಸರು ಬ್ರಿಜೇಶ್ ಕುಶ್ವಾಹಾ (Brijesh Kushwaha) ಎಂದು ತಿಳಿದು ಬಂದಿದೆ.

ಸಿದ್ಧಿ ಜಿಲ್ಲೆಯಲ್ಲಿ ಕಾಲೇಜಿಗೆ ಹೋಗುತ್ತಿದ್ದ ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಇವನು, ಆ್ಯಪ್ ಒಂದರ ಸಹಾಯದಿಂದ ತನ್ನ ಧ್ವನಿಯನ್ನು ಮಹಿಳೆಯಂತೆ ಬದಲಾಯಿಸಿಕೊಂಡು ಬುಡಕಟ್ಟು ಯುವತಿಯರಿಗೆ ತಾನೊಬ್ಬ ಕಾಲೇಜು ಪ್ರೊಫೆಸರ್ ಎಂದೂ, ವಿದ್ಯಾರ್ಥಿ ವೇತನವನ್ನು ಕೊಡಿಸುವುದಾಗಿಯೂ ನಂಬಿಸುತ್ತಿದ್ದ. ನಂತರ ತಾನು ಹೇಳಿದ ಕಡೆಗೆ ಬರುವಂತೆ ಅಲ್ಲಿ ನಿಮ್ಮನ್ನು ಕರೆದುಕೊಂಡು ಹೋಗಲು ಬರುತ್ತಾರೆಂದು ಹೇಳುತ್ತಿದ್ದ.

ಈತನು ಹೇಳಿದ ಜಾಗಕ್ಕೆ ಬರುತ್ತಿದ್ದ ಯುವತಿಯರನ್ನು ಬೈಕ್ ಮೇಲೆ ಕರೆದುಕೊಂಡು ತನ್ನ ಆಪ್ತರ ಸಹಾಯದಿಂದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅ ತ್ಯಾ ಚಾ ರ ಮಾಡುತ್ತಿದ್ದ. ತಲೆಗೆ ಹೆಲ್ಮೆಟ್ ಹಾಕಿಕೊಂಡಿರುತ್ತಿದ್ದ ಕಾರಣ ಅವನ್ಯಾರು ಎನ್ನುವುದನ್ನು ಗುರುತಿಸಲು ಯುವತಿಯರಿಗೆ ಕಷ್ಟವಾಗಿತ್ತು ಎನ್ನಲಾಗಿದೆ. ಹೀಗೆ ಮೋಸದಿಂದ ಏಳು ಜನ ಯುವತಿಯರ ಮೇಲೆ ಅ ತ್ಯಾ‌ ಚಾರ ಮಾಡಿದ್ದನು ಎನ್ನಲಾಗಿದೆ.

ಇತ್ತೀಚಿಗೆ ಸಂತ್ರಸ್ತ ಯುವತಿಯರು ಪೊಲೀಸರಿಗೆ ದೂರು ನೀಡಿದ ಮೇಲೆ ಪೊಲೀಸರು ಕಾರ್ಯಾಚರಣೆಯನ್ನು ನಡೆಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಮಹಿಳೆಯ ದನಿಯಲ್ಲಿ ಮಾತನಾಡುತ್ತಿದ್ದರಿಂದ ಇದು ಯಾವುದೋ ಮಹಿಳೆ ಮಾಡಿರುವ ಕೆಲಸ ಎಂದೇ ತಿಳಿಯಲಾಗಿತ್ತು ಎನ್ನಲಾಗಿದ್ದು, ಅನಂತರ ತನಿಖೆಯಲ್ಲಿ ಇದೆಲ್ಲವೂ ಬ್ರಿಜೇಶ್ ಮಾಡಿದ್ದು ಎಂದು ತಿಳಿದು ಬಂದಿದೆ.

Leave a Comment