Tamannah Bhatia: ತಮನ್ನಾಗೆ ಎದುರಾಯ್ತು ಸಂಕಷ್ಟ; ಹಾಟ್ ಬ್ಯೂಟಿಗೆ ಸಮನ್ಸ್ ಜಾರಿ ಮಾಡಿದ ಮುಂಬೈ ಪೊಲೀಸ್

Written by Soma Shekar

Published on:

---Join Our Channel---

Tamannah Bhatia : ಸೌತ್ ಬ್ಯೂಟಿ, ಬಾಲಿವುಡ್ ಬೆಡಗಿ ತಮನ್ನಾಗೆ ಎದುರಾಗಿದೆ ಸಂಕಷ್ಟ, ನಟಿಗೆ ಈಗ ಮುಂಬೈ ಪೋಲಿಸರಿಂದ ಸಮನ್ಸ್ ಜಾರಿಯಾಗಿದೆ. ಹೌದು, ನಟಿ ತಮನ್ನಾ ಭಾಟಿಯಾ ಅವರು ಐಪಿಎಲ್ (IPL) ಪಂದ್ಯವನ್ನು ಅಕ್ರಮವಾಗಿ ಪ್ರಸಾರ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ದಕ್ಷಿಣದ ಹೆಸರಾಂತ ತಾರೆ ತಮನ್ನಾ ಭಾಟಿಯಾಗೆ (Tamannaah Bhatia) ಮುಂಬೈ ಸೈಬರ್ ಪೊಲೀಸ್ ಸಮನ್ಸ್ (Summons) ಜಾರಿ ಮಾಡಿದ್ದಾರೆ.

ನಟಿಗೆ ಇದೇ ಏಪ್ರಿಲ್ 29ರಂದು ವಿಚಾರಣೆಗೆ ಹಾಜರಾಗುವಂತೆ ಇದರಲ್ಲಿ ಸೂಚಿಸಲಾಗಿದೆ. ವಿಷಯದ ಹಿನ್ನೆಲೆ ನೋಡುವುದಾದರೆ, 2023 ರಲ್ಲಿ ನಟಿ ತಮನ್ನಾ ಭಾಟಿಯಾ ಅಕ್ರಮವಾಗಿ ಐಪಿಎಲ್ ಪಂದ್ಯ ಪ್ರಸಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸಮನ್ಸ್ ನೀಡಲಾಗಿದೆ. ನಟಿ ಮಾಡಿದ ಕೆಲಸದಿಂದ ವಯಾಕಾಮ್‌ ಗೆ ಕೋಟ್ಯಂತರ ರೂಪಾಯಿಗಳ ನಷ್ಟವನ್ನು ಉಂಟು ಮಾಡಿದಂತಹ ಪ್ರಕರಣ ಇದಾಗಿದೆ.

ಇದಕ್ಕೂ ಮೊದಲು ಇದೇ ಪ್ರಕರಣದಲ್ಲಿ ಬಾಲಿವುಡ್ ನ ಹಿರಿಯ ಹಾಗೂ ಜನಪ್ರಿಯ ಸ್ಟಾರ್ ನಟನಾಗಿರುವ ನಟ ಸಂಜಯ್ ದತ್ ಅವರಿಗೂ ಸಹಾ ಸಮನ್ಸ್ ಜಾರಿಯಾಗಿತ್ತು. ಆದರೆ ಆಗ ನಟ ತಾವು ವಿದೇಶ ಪ್ರವಾಸದಲ್ಲಿ ಇರುವ ಕಾರಣದಿಂದ ವಿನಾಯಿತಿಗೆ ಮನವಿಯನ್ನು ಮಾಡಿಕೊಂಡಿದ್ದರು. ಐಪಿಎಸ್ ಪಂದ್ಯಗಳ ಪ್ರಸಾರದ ಹಕ್ಕನ್ನು ವಯಕಾಮ್ ಹೊಂದಿದೆ.

ಆದರೆ ಸಂಜಯ್ ದತ್ ಮತ್ತು ತಮನ್ನಾ ಭಾಟಿಯಾ ಅಕ್ರಮವಾಗಿ ಪಂದ್ಯವನ್ನು ಪ್ರಸಾರ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಅವರ ಮೇಲೆ ವಯಕಾಮ್ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ಸಮನ್ಸ್ ಜಾರಿಯಾಗಿತ್ತು. ಆಗ ಸಂಜಯ್ ದತ್ ಗೆ ಸಮನ್ಸ್ ಜಾರಿಯಾಗಿತ್ತು ಈಗ ನಟಿ ತಮನ್ನಾಗೆ ಸಮನ್ಸ್ ನೀಡಲಾಗಿದೆ. ನಟಿ ವಿಚಾರಣೆಗೆ ಹಾಜರಾಗ್ತಾರಾ? ಕಾದು ನೋಡಬೇಕಾಗಿದೆ.

Leave a Comment