Samantha : ಮದುವೆ ಗೌನ್ ಹರಿದ ಸಮಂತಾ, ನಾಗಚೈತನ್ಯ ಅಂದ್ರೆ ಅಷ್ಟೊಂದು ಸಿಟ್ಟಾ? ಅಂತಿದ್ದಾರೆ ನೆಟ್ಟಿಗರು

Written by Soma Shekar

Published on:

---Join Our Channel---

Samantha : ನಟಿ ಸಮಂತಾ (Samantha) ನಾಗಚೈತನ್ಯ (Naga Chaitanya) ಅವರಿಂದ ದೂರಾದ ಮೇಲೆ ಸಿನಿಮಾಗಳ ವಿಚಾರದಲ್ಲಿ ಮತ್ತು ಆರೋಗ್ಯದ ವಿಚಾರದಲ್ಲಿ ಹೆಚ್ಚು ಗಮನ ನೀಡುತ್ತಾ ಇದ್ದಾರೆ‌. ಹೊಸ ಪ್ರಾಜೆಕ್ಟ್ ಗಳ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರೋದಕ್ಕೆ ನಟಿ ಸಜ್ಜಾಗಿದ್ದಾರೆ. ಆದ್ರೆ ಈಗ ಇವೆಲ್ಲವುಗಳ ನಡುವೆಯೇ ನಟಿ ನಾಗಚೈತನ್ಯ ಮೇಲಿನ ಕೋಪವನ್ನು ಕೊನೆಗೂ ಯಾವುದೋ ರೀತಿಯಲ್ಲಿ ಹೊರಗೆ ಹಾಕಿ ಬಿಟ್ರಾ ಅನ್ನೊ ಅನುಮಾನವೊಂದು ಈಗ ಎಲ್ಲರಿಗೂ ಮೂಡಿದೆ. ಇದಕ್ಕೆ ಕಾರಣವಾದ್ರು ಏನು ತಿಳಿಯೋಣ ಬನ್ನಿ.

ಸಮಂತಾ ನಾಗಚೈತನ್ಯ ಜೊತೆಗೆ ಕ್ರಿಶ್ಚಿಯನ್ ಸಂಪ್ರದಾಯದಂತೆಯೂ ಮದುವೆಯನ್ನು ಮಾಡಿಕೊಂಡಿದ್ದರು. ಮದುವೆಗಾಗಿ ಒಂದು ಬಹಳ ಅಂದವಾದ ಗೌನ್ ಅನ್ನು (wedding gown) ಧರಿಸಿ ಆಕರ್ಷಕವಾಗಿ ಕಂಡಿದ್ದರು. ಆದರೆ ಆ ಸುಂದರವಾದ ಗೌನ್ ಅನ್ನೇ ನಟಿ ಹರಿದು ಹಾಕಿರೋದು ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ ಹಾಗೂ ಶಾಕಿಂಗ್ ಸಹಾ ಅನಿಸಿದೆ.

ನಾಗಚೈತನ್ಯ ಮತ್ತು ಶೋಭಿತಾ (Shobhita Dhulipala) ಜೊತೆಯಾಗಿ ಸುತ್ತಾಡ್ತಾ ಇದ್ದಾರೆ ಅನ್ನೋ ಸುದ್ದಿಗಳು ಹರಿದಾಡ್ತಿರೋ ಸಮಯದಲ್ಲೇ ಸಮಂತಾ ಗುರುವಾರ ನಡೆದಂತಹ ಗ್ಲಾಮರಸ್ ಫ್ಯಾಷನ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ನಟಿ ಕಪ್ಪು ಬಣ್ಣ ಗೌನ್ ಧರಿಸಿ ಬಹಳ ಹಾಟ್ ಲುಕ್ ನಲ್ಲಿ ಮಿಂಚಿದ್ದರು. ಇದನ್ನು ನೋಡಿದ ಅಭಿಮಾನಿಗಳು ನಟಿಯ ಲುಕ್ ಗೆ ಫಿದಾ ಆಗಿದ್ರು.

ಸಮಂತಾ ತಾನು ಧರಿಸಿದ್ದ ಕಪ್ಪು ಗೌನ್ ಅಸಲಿಗೆ ಮದುವೆಯ ಗೌನ್ ಅನ್ನೋ ಸತ್ಯವನ್ನ ಬಾಯಿ ಬಿಟ್ಟು ಎಲ್ಲರಿಗೂ ಶಾಕ್ ನೀಡಿದ್ದಾರೆ. ವೆಡ್ಡಿಂಗ್ ಗೌನ್ ಅನ್ನು ಹರಿದು, ಅದಕ್ಕೆ ಕಪ್ಪು ಬಣ್ಣದ ಡೈ ಹಾಕಿಸಿ, ಅದಕ್ಕೆ ಹೊಸ ಡಿಸೈನ್ ಕೊಡಿಸಿ ಧರಿಸಿದ್ದಾಗಿ ನಟಿ ಹೇಳಿದ್ದಾರೆ. ನಟಿಯ ಹೊಸ ಲುಕ್ ಅಂತೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಸಹಾ ಆಗಿದೆ.

ನಟಿಯ ಹೊಸ ಲುಕ್ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ನಾಗಚೈತನ್ಯ ಮೇಲೆ ಅಷ್ಟೊಂದು ಕೋಪ ಇದ್ಯಾ, ಅದಕ್ಕೆ ವೆಡ್ಡಿಂಗ್ ಗೌನ್ ಅನ್ನೇ ಹರಿದು ಹಾಕಿದ್ರಾ, ಅದಕ್ಕೆ ಹೊಸ ರೂಪವನ್ನು ಕೊಟ್ರಾ ನಟಿ ಎಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ನೆಟ್ಟಿಗರ ಕಾಮೆಂಟ್ ಗಳು ಏನೇ ಆದರೂ ಸಮಂತಾ ಅಭಿಮಾನಿಗಳು ಮಾತ್ರ ಇದನ್ನು ನೋಡಿ ತುಂಬಾ ಖುಷಿ ಪಡುತ್ತಿದ್ದಾರೆ.

Leave a Comment