Kannada Serial TRP: ಬದಲಾಯ್ತು ಪ್ರೇಕ್ಷಕರ ಆಯ್ಕೆ; ಟಾಪ್ ಸೀರಿಯಲ್ ಗಳ ಸ್ಥಾನದಲ್ಲೂ ಆಯ್ತು ಏರುಪೇರು

Written by Soma Shekar

Published on:

---Join Our Channel---

Kannada Serials TRP : ವಾರಾಂತ್ಯ ಅಂದರೆ ಶುಕ್ರವಾರ ಬರ್ತಿದೆ ಅಂದರೆ ಗುರುವಾರವೇ ವಾರದ ಟಿ ಆರ್ ಪಿ ಪ್ರಕಾರ ಯಾವ ಸೀರಿಯಲ್ ಗಳು ಯಾವ ಸ್ಥಾನವನ್ನು ಪಡೆದುಕೊಂಡಿವೆ ಎನ್ನುವ ವಿಷಯ ಹೊರಬೀಳುತ್ತದೆ. ಕಿರುತೆರೆಯ ಪ್ರೇಕ್ಷಕರು ಕೂಡಾ ತಮ್ಮ ಅಚ್ಚು ಮೆಚ್ಚಿನ ಸೀರಿಯಲ್ ಯಾವ ಸ್ಥಾನದಲ್ಲಿದೆ ಅನ್ನೋದನ್ನ ತಿಳಿಯೋದಕ್ಕೆ ಸಿಕ್ಕಾಪಟ್ಟೆ ಕಾತರರಾಗಿರ್ತಾರೆ. ಹಾಗಾದರೆ ಈ ವಾರ ಯಾವ ಸೀರಿಯಲ್ ಗಳು (Kannada Serials TRP) ಟಾಪ್ ಐದರಲ್ಲಿ ಸ್ಥಾನ ಪಡೆದಿವೆ ಅನ್ನೋದನ್ನ ತಿಳಿಯೋಣ ಬನ್ನಿ.

ಕಳೆದ ವಾರ ಲಕ್ಷ್ಮೀ ನಿವಾಸ ಸೀರಿಯಲ್ ಅತಿ ಹೆಚ್ಚು ಟಿ ಆರ್ ಪಿ ಪಡೆದು ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನ ಹಿಂದೆ ಹಾಕಿ ಮೊದಲನೇ ಸ್ಥಾನ ಪಡೆದಿತ್ತು. ಆದರೆ ಈ ವಾರ ಪುಟ್ಟಕ್ಕನ ಮಕ್ಕಳು ಮತ್ತೊಮ್ಮೆ ನಂಬರ್ ಒನ್ ಸ್ಥಾನಕ್ಕೆ ಏರಿದೆ. ಕಥೆಯಲ್ಲಿನ ಹೊಸ ಟ್ವಿಸ್ಟ್ ಗಳು ಈ ವಾರ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ಸನ್ನ ಪಡೆದುಕೊಂಡಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಕಳೆದ ವಾರ ಮೊದಲನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದ ಲಕ್ಷ್ಮೀ ನಿವಾಸ (Lakshmi Nivasa) ಈ ವಾರ ಎರಡನೇ ಸ್ಥಾನಕ್ಕೆ ಬಂದಿದೆ. ಆರಂಭವಾದ ಮೊದಲನೇ ವಾರದಲ್ಲೇ ಜನ ಮನ ಗೆದ್ದ ಈ ಸೀರಿಯಲ್ ಈಗಾಗಲೇ ಎರಡು ಬಾರಿ ನಂಬರ್ ಒನ್ ಸ್ಥಾನ ಪಡೆದಿತ್ತು. ಮುಂದಿನ ವಾರ ಮತ್ತೆ ಮೊದಲ ಸ್ಥಾನ ಪಡೆದರೂ ಅಚ್ಚರಿ ಪಡಬೇಕಾಗಿಲ್ಲ ಎಂದೇ ಹೇಳಬಹುದಾಗಿದೆ.

ಗಗನ್ ಚಿನ್ನಪ್ಪ ಮತ್ತು ವೈಷ್ಣವಿ ಗೌಡ ಅವರು ಪ್ರಮುಖ ಪಾತ್ರಗಳಲ್ಲಿ ಇರುವ ಸೀತಾ ರಾಮ (SeethaRama) ಸೀರಿಯಲ್ ಈ ವಾರ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಸೀತಾ ರಾಮ ಕಳೆದ ಕೆಲವು ವಾರಗಳಿಂದಲೂ ಟಾಪ್ ಮೂರರಲ್ಲಿ ಸ್ಥಾನವನ್ನು ಪಡೆಯುವಲ್ಲಿ ಹಿಂದೆ ಬಿದ್ದಿತ್ತು. ಆರಂಭದಲ್ಲಿ ಟಾಪ್ ಎರಡನೇ ಸ್ಥಾನಕ್ಕೆ ಲಗ್ಗೆ ಒಟ್ಟಿದ್ದ ಈ ಸೀರಿಯಲ್ ಅನಂತರದ ದಿನಗಳಲ್ಲಿ ಟಾಪ್ ಐದರಿಂದ ಹೊರಗೆ ಬಂದಿತ್ತು.

ಇನ್ನು ನಾಲ್ಕನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ (Ramachari) ಸೀರಿಯಲ್ ಸ್ಥಾನವನ್ನು ಪಡೆದುಕೊಂಡಿದ್ದು, ರಾಮಾಚಾರಿಯಲ್ಲಿ ಹೀರೋ ದ್ವಿಪಾತ್ರ ಪ್ರೇಕ್ಷಕರ ವಿಶೇಷ ಗಮನವನ್ನು ಸೆಳೆದಿದೆ. ಕಥೆಯಲ್ಲಿನ ಹೊಸ ತಿರುವುಗಳಿಂದಾಗಿ ಸೀರಿಯಲ್ ಟಾಪ್ ಐದರ ರೇಸ್ ನೊಳಗೆ ಎಂಟ್ರಿ ನೀಡೋದಕ್ಕೆ ಸಾಧ್ಯವಾಗಿದೆ.

ಐದನೇ ಸ್ಥಾನದಲ್ಲಿ ಈ ವಾರ ಎರಡು ಸೀರಿಯಲ್ ಗಳು ಇವೆ. ಗೌತಮ್ ದೀವಾನ್ ಮತ್ತು ಭೂಮಿಕಾ ಪ್ರೇಮಕಥೆಯಾದ ಅಮೃತಧಾರೆ (Amruthadhaare) ಮತ್ತು ಇತ್ತೀಚಿಗಷ್ಟೇ ಆರಂಭವಾಗಿರುವ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಗಳ ಈ ವಾರ ಐದನೇ ಸ್ಥಾನವನ್ನು ಪಡೆದುಕೊಂಡಿವೆ. ಶ್ರೀರಸ್ತು ಶುಭಮಸ್ತು ಕಳೆದ ಎರಡು ವಾರಗಳಿಂದ ಟಾಪ್ ಐದರಿಂದ ಹೊರಗೆ ಉಳಿದಿದೆ. ‌

Leave a Comment