Kannada Serial TRP: ಹೊಸ ಸೀರಿಯಲ್ ಗಳ ಅಬ್ಬರ; ಟಾಪ್ ಒನ್ ಸ್ಥಾನಕ್ಕೆ ಪೈಪೋಟಿ, ಈ ವಾರ ಟಾಪ್ 5 ಯಾವ್ದು?

Written by Soma Shekar

Published on:

---Join Our Channel---

Kannada Serial TRP : ವೀಕೆಂಡ್ ವೇಳೆಗೆ ಸೀರಿಯಲ್ ಗಳ ಟಿ ಆರ್ ಪಿ (Kannada Serial TRP) ಲಿಸ್ಟ್ ಹೊರಗೆ ಬರುತ್ತೆ ಮತ್ತು ಈ ವಾರ ಕಿರುತೆರೆಯಲ್ಲಿ ಯಾವ ಯಾವ ಸೀರಿಯಲ್ ಗೆ ಯಾವ ಸ್ಥಾನ ಸಿಕ್ಕಿದೆ ಅನ್ನೋದು ಗೊತ್ತಾಗುತ್ತೆ. ಹಾಗಿದ್ರೆ ಈ ವಾರ ಯಾವ ಸೀರಿಯಲ್ ಗಳಿಗೆ ಟಾಪ್ ನಲ್ಲಿ ಸ್ಥಾನ ಸಿಕ್ಕಿದೆ ಅನ್ನೋದಾದ್ರೆ ಈ ವಾರ ಖಂಡಿತ ಅಚ್ಚರಿಯ ಫಲಿತಾಂಶ ಬಂದಿದ್ದು, ಹೊಸ ಸೀರಿಯಲ್ ಗಳು ಟಾಪ್ ಸೀರಿಯಲ್ ಗಳ ಸ್ಪರ್ಧೆಗೆ ಎಂಟ್ರಿಯನ್ನು ನೀಡಿದೆ.

ಹೊಸ ಧಾರಾವಾಹಿಯಾದರೂ ಕೂಡಾ ಸಾಕಷ್ಟು ತಿಂಗಳುಗಳಿಂದಲೂ ನಂಬರ್ ಒನ್ ಸ್ಥಾನದಲ್ಲಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್ ನ ಹಿಂದೆ ಹಾಕಿರುವ ಲಕ್ಷ್ಮೀ ನಿವಾಸ (Lakshmi Nivasa) ಈ ವಾರ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, ಪುಟ್ಟಕ್ಕನ ಮಕ್ಕಳಿಗೆ ಸಿಕ್ಕಾಪಟ್ಟೆ ಪೈಪೋಟಿಯನ್ನು ನೀಡುತ್ತಿದೆ. ಲಕ್ಷ್ಮೀ ನಿವಾಸ ಪ್ರೇಕ್ಷಕರ ಮನಸ್ಸನ್ನ ಗೆದ್ದು ಯಶಸ್ಸಿನಿಂದ ಮುಂದೆ ಸಾಗುತ್ತಿದೆ.

ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನಂಬರ್ ಒನ್ ಸ್ಥಾನದಲ್ಲಿ ಇತ್ತು. ಆದರೆ ಈಗ ಇತ್ತೀಚಿನ ಕಥಾ ಹಂದರವು ಯಾಕೋ ಪ್ರೇಕ್ಷಕರ ಮನಸ್ಸನ್ನು ಗೆಲ್ಲೋದ್ರಲ್ಲಿ ಒಂದು ಹೆಜ್ಜೆ ಹಿಂದೆ ಆಗಿದ್ದು, ಲಕ್ಷ್ಮೀ ನಿವಾಸ ಸೀರಿಯಲ್ ನ ಪೈಪೋಟಿಯ ಮುಂದೆ ಈ ವಾರ ನಲುಗಿದ್ದು, ಭದ್ರವಾಗಿ ಹಿಡಿದಿಟ್ಟುಕೊಂಡಿದ್ದ ಮೊದಲ ಸ್ಥಾನದಿಂದ ಕೆಳಗೆ ಬಂದು ಎರಡನೇ ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ.

ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ ಸೀರಿಯಲ್ ನಲ್ಲಿ ರಾಮಾಚಾರಿ (RAMACHARI) ಮತ್ತು ಕಿಟ್ಟಿ ಹೀಗೆ ಡಬಲ್ ಧಮಾಕಾ ಅನ್ನೋ ಹಾಗೆ ಇಬ್ಬರು ಹೀರೋಗಳು ಪ್ರೇಕ್ಷಕರ ಮನಸ್ಸನ್ನ ಗೆದ್ದಿದ್ದಾರೆ. ಕಥೆಯಲ್ಲಿನ ಹೊಸ ತಿರುವುಗಳು ನೋಡುಗರನ್ನು ತನ್ನ ಕಡೆಗೆ ಸೆಳೆಯುತ್ತಿದ್ದು, ಈ ವಾರ ರಾಮಾಚಾರಿ ಮೂರನೇ ಸ್ಥಾನಕ್ಕೆ ಎಂಟ್ರಿಯನ್ನು ನೀಡುವ ಮೂಲಕ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ.

ಆರಂಭದಲ್ಲೇ ಟಾಪ್ ಮೂರಕ್ಕೆ ಬಂದು ಸೇರಿದ್ದ ಸೀತಾ ರಾಮ (SeethaRama) ಸೀರಿಯಲ್ ನ ವೇಗ ಅನಂತರ ಕುಗ್ಗಿದೆ. ಸೀತಾ ರಾಮನ ನಡುವಿನ ಪ್ರೇಮ, ಸಿಹಿಯ ಮುಗ್ಧತೆ, ಭಾರ್ಗವಿಯ ಕುತಂತ್ರ, ಅಶೋಕನ ಸ್ನೇಹ ಹೀಗೆ ಕಥೆಯಲ್ಲಿ ಸಾಕಷ್ಟು ವಿಚಾರಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದು, ಸೀತಾ ರಾಮ ಮದ್ವೆ ಆಗ್ತಾರಾ ಅನ್ನೋದನ್ನ ನೋಡೋದಕ್ಕೆ ಪ್ರೇಕ್ಷಕರು ಕಾಯ್ತಿದ್ದು, ಸೀತಾ ರಾಮ ಈ ವಾರ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಇನ್ನು ಈ ವಾರದಲ್ಲಿ ಐದನೇ ಸ್ಥಾನವನ್ನು ಪಡೆದಿರುವ ಸೀರಿಯಲ್ ಯಾವುದು ಅನ್ನೋದಾದ್ರೆ, ಕೆಲವೇ ದಿನಗಳ ಹಿಂದೆಯಷ್ಟೇ ಪ್ರಸಾರವನ್ನು ಆರಂಭಿಸಿದ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಆಗಿದೆ. ಅಮೃತಧಾರೆ, ಶ್ರೀರಸ್ತು ಶುಭಮಸ್ತು ನಂತಹ ಟಾಪ್ ಸೀರಿಯಲ್ ಗಳಿಗೆ ಪೈಪೋಟಿ ನೀಡಿರುವ ಈ ಹೊಸ ಸೀರಿಯಲ್ ಈಗ ಟಾಪ್ ಐದನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

Leave a Comment