Rashmika Mandanna: ಮೆಗಾಸ್ಟಾರ್ ಸಿನಿಮಾದಲ್ಲಿ ರಶ್ಮಿಕಾ, ಒಂದೇ ಸಿನಿಮಾದಲ್ಲಿ ತ್ರಿಶಾ, ಆಶಿಕಾ ಮತ್ತು ರಶ್ಮಿಕಾ

Written by Soma Shekar

Published on:

---Join Our Channel---

Rashmika Mandanna: ಸಿನಿಮಾ ರಂಗದಲ್ಲಿ ಸದ್ಯಕ್ಕಂತೂ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna)ಅದೃಷ್ಟ ಬಹಳ ಜೋರಾಗಿಯೇ ಇದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಅನಿಮಲ್ ಸಿನಿಮಾದ ಸಕ್ಸಸ್ ನಂತರ ಬಾಲಿವುಡ್ ನಲ್ಲಿ ಬ್ಯುಸಿಯಿರುವ ನಟಿ ತೆಲುಗಿನಲ್ಲಿ ಸಹಾ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳ ಅವಕಾಶಗಳು ರಶ್ಮಿಕಾನ‌ ಅರಸಿ ಬರುತ್ತಿವೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

ಅನಿಮಲ್ ನಂತರ ಬಾಲಿವುಡ್ ನಲ್ಲಿ ಸಲ್ಮಾನ್‌ ಖಾನ್ ಜೊತೆಗೆ ಸಿಕಂದರ್ (Sikhandar) ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚೋದಕ್ಕೆ ಸಜ್ಜಾಗಿರುವ ರಶ್ಮಿಕಾಗೆ ಇದೀಗ ಟಾಲಿವುಡ್ ನಲ್ಲೂ ಸಹಾ ಸ್ಟಾರ್ ನಟನ ಜೊತೆಗೆ ನಟಿಸುವ ಅವಕಾಶ ಸಿಕ್ಕಿದ್ದು ರಶ್ಮಿಕಾ ಅಭಿಮಾನಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ.

ಹೌದು, ರಶ್ಮಿಕಾ ಮಂದಣ್ಣಾಗೆ ಟಾಲಿವುಡ್ ನ ಹಿರಿಯ ಸ್ಟಾರ್ ನಟ, ಮೆಗಾಸ್ಟಾರ್ ಚಿರಂಜೀವಿ (Mega star Chiranjeevi ( ಅವರ ಜೊತೆಗೆ ನಟಿಸುವ ಅವಕಾಶವೊಂದು ದಕ್ಕಿದೆ ಎನ್ನುವ ವಿಚಾರವೀಗ ಸುದ್ದಿಯಾಗಿದೆ. ಮೆಗಾಸ್ಟಾರ್ ಚಿರಂಜೀವಿ ಸದ್ಯಕ್ಕೆ ವಿಶ್ವಂಭರ ಹೆಸರಿನ ಸಿನಿಮಾದಲ್ಲಿ ಸಕ್ರಿಯರಾಗಿದ್ದಾರೆ.

ವಿಶ್ವಂಭರ ಸಿನಿಮಾದಲ್ಲಿ ಚಿರಂಜೀವಿ ಅವರ ಜೊತೆಗೆ ನಾಯಕಿಯಾಗಿ ನಟಿ ತ್ರಿಶಾ ಕೃಷ್ಣನ್ (Trisha Krishnan) ಕಾಣಿಸಿಕೊಳ್ಳುತ್ತಿದ್ದು, ಈ ಸಿನಿಮಾದಲ್ಲಿನ ಒಂದು ವಿಶೇಷ ಪಾತ್ರದಲ್ಲಿ ನಟಿಸಲು ರಶ್ಮಿಕಾ ಮಂದಣ್ಣ ಗ್ರೀನ್ ಸಿಗ್ನಲ್ ಅನ್ನು ನೀಡಿದ್ದಾರೆ ಎನ್ನಲಾಗಿದ್ದುಈ ವಿಷಯ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ವಿಶ್ವಂಭರ ಸಿನಿಮಾದಲ್ಲಿ ಮತ್ತೊಬ್ಬ ಕನ್ನಡ ನಟಿಯಾಗಿರುವ ಆಶಿಕಾ ರಂಗನಾಥ್ ಅವರು ಸಹಾ ಒಂದು ಪಾತ್ರವನ್ನು ನಿರ್ವಹಣೆ ಮಾಡುತ್ತಿದ್ದು ಈ ವಿಷಯ ಈಗಾಗಲೇ ಸುದ್ದಿಯಾಗಿತ್ತು. ಈಗ ರಶ್ಮಿಕಾ ಈ ಸಿನಿಮಾಕ್ಕೆ ಹೊಸ ಸೇರ್ಪಡೆಯಾಗಿದ್ದಾರೆ.

Leave a Comment