Rashmika Mandanna: ಶ್ರೀವಲ್ಲಿ 2.0 ಬರ್ತಿದ್ದಾಳೆ, ರಶ್ಮಿಕಾ ಕೊಟ್ಟ ಅಪ್ಡೇಟ್ ಕೇಳಿ ಥ್ರಿಲ್ ಆದ ಫ್ಯಾನ್ಸ್ ; ಏನಿದು ಸುದ್ದಿ ?

Written by Soma Shekar

Published on:

---Join Our Channel---

Rashmika Mandanna : 2024ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಪುಷ್ಪ 2 (Pushpa 2) ಸಿನಿಮಾ ಕೂಡಾ ಒಂದಾಗಿದೆ. ಟಾಲಿವುಡ್ ನ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರೆನಿಸಿಕೊಂಡಿರುವ ಸುಕುಮಾರ್ (Sukumar) ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, 2021 ರಲ್ಲಿ ತೆರಿಗೆ ಬಂದಿದ್ದ ಪುಷ್ಪಾ ಸಿನಿಮಾದ ಸೀಕ್ವೆಲ್ ಇದಾಗಿದೆ. ಈ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಶ್ರೀವಲ್ಲಿ ಪಾತ್ರದಲ್ಲಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಹೊರ ಬಂದಿರುವ ಸುದ್ದಿಗಳ ಪ್ರಕಾರ ಪುಷ್ಪ ಸಿನಿಮಾಕ್ಕಿಂತ ಪುಷ್ಪ 2 ನಲ್ಲಿ ಶ್ರೀವಲ್ಲಿ ಪಾತ್ರ ಇನ್ನಷ್ಟು ಪವರ್ ಫುಲ್ ಆಗಿದೆ ಅಂತ ಹೇಳಲಾಗುತ್ತಿದೆ.

ಈ ವಿಚಾರದ ಕುರಿತಾಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ರಶ್ಮಿಕಾ ಮಂದಣ್ಣ ತಮ್ಮ ಪಾತ್ರದ ಬೆಳವಣಿಗೆಯ ಕುರಿತಾಗಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪುಷ್ಪ 2 ಸಿನಿಮಾದಲ್ಲಿ ಅಲ್ಲು ಅರ್ಜುನ್ (Allu Arjun) ಅವರು ಬೇರೊಂದು ಲೆವೆಲ್ ನಲ್ಲಿ ಕಾಣಿಸಿಕೊಳ್ಳಲಿದ್ದು ಅದಕ್ಕೆ ತಕ್ಕ ಹಾಗೆ ಶ್ರೀ ಮಲ್ಲಿ ಪಾತ್ರವನ್ನೂ ವಿನ್ಯಾಸಗೊಳಿಸಲಾಗಿದೆ ಅಂತ ತಿಳಿಸಿರುವ ರಶ್ಮಿಕಾ ಮಂದಣ್ಣ ಶ್ರೀವಲ್ಲಿ 2.0 ವರ್ಷನ್ ನಲ್ಲಿ ಕಾಣಿಸಿಕೊಳ್ಳುತ್ತಾಳೆ ಎನ್ನುವ ಮಾತನ್ನು ಹೇಳುವ ಮೂಲಕ ಅಭಿಮಾನಿಗಳಲ್ಲಿ ಕ್ರೇಜ್ ಅನ್ನು ಸೃಷ್ಟಿ ಮಾಡಿದ್ದಾರೆ.

ಪುಷ್ಪ 2 ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರ ಸವಾಲಿನಿಂದ ಕೂಡಿದ್ದು, ಅದರಲ್ಲಿ ಫನ್ ಮೂವ್ಮೆಂಟ್ ಗಳೂ ಇದೆ ಎನ್ನುವ ಮಾತನ್ನು ಹೇಳಿದ್ದಾರೆ. ನಟಿಯು ಮಾತನಾಡುತ್ತಾ, ಸಿನಿಮಾದಲ್ಲಿ ನನ್ನ ಪಾತ್ರದ ಬಗ್ಗೆಯಷ್ಟೇ ನನಗೆ ಗೊತ್ತು. ಸಿನಿಮಾದ ಕಥೆ ಏನು ಅನ್ನೋದು ನನಗೆ ಗೊತ್ತಿಲ್ಲ. ಪ್ರತಿದಿನ ಶೂಟಿಂಗ್ ಗೆ ಹೋದಾಗ ನನಗೆ ಏನೂ ಗೊತ್ತಿರೋದಿಲ್ಲ. ಆ ದಿನ ಶ್ರೀವಲ್ಲಿ ಪಾತ್ರ ಹೇಗಿರುತ್ತೆ ಅನ್ನೋದ್ರ ಬಗ್ಗೆ ಮಾಹಿತಿ ಇರ್ತಾ ಇರಲಿಲ್ಲ. ಒಂದು ರೀತಿಯಲ್ಲಿ ಆಟಕ್ಕಾಗಿ ಮೈದಾನಕ್ಕೆ ಹೋಗುವ ಸ್ಪರ್ಧಿಯ ರೀತಿಯಲ್ಲಿ ನಾನು ಶೂಟಿಂಗ್ ಗೆ ಹೋಗ್ತಿದ್ದೆ ಅಂತ ಹೇಳಿದ್ದಾರೆ.

ನನ್ನ ಪಾತ್ರದ ಕುರಿತಾಗಿ ಹೆಚ್ಚಿನ ಮಾಹಿತಿ ಇದ್ದರೂ ಅದನ್ನು ಹೊರಗಡೆ ಹಂಚಿಕೊಳ್ಳಲು ಸಾಧ್ಯವಿಲ್ಲ ಅನ್ನೋ ಮಾತನ್ನು ಈ ವೇಳೆ ರಶ್ಮಿಕಾ ಹೇಳಿದ್ದಾರೆ. ಒಟ್ನಲ್ಲಿ ಪುಷ್ಪ 2 ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದೆ ಅನ್ನೋ ಸುಳಿವನ್ನಂತೂ ರಶ್ಮಿಕಾ ನೀಡಿದ್ದಾರೆ. ಅಲ್ಲದೇ ಈ ಪಾತ್ರದ ಮೂಲಕ ತನ್ನ ಮತ್ತೊಂದು ವರ್ಷನ್ ಅನ್ನು ಪ್ರೇಕ್ಷಕರು ನೋಡಲಿದ್ದಾರೆ ಅನ್ನೋ ಮಾತುಗಳನ್ನು ಹೇಳಿದ್ದಾರೆ.

Leave a Comment