Rashmika Mandanna: ಇನ್ನೇನಿದ್ರು ಬಾಲಿವುಡ್ ಮಾತ್ರ, ಸಲ್ಮಾನ್ ನಂತ್ರ ಈಗ ಮತ್ತೊಬ್ಬ ಸ್ಟಾರ್ ಸಿನಿಮಾದಲ್ಲಿ ರಶ್ಮಿಕಾ

Written by Soma Shekar

Published on:

---Join Our Channel---

Rashmika Mandanna: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ (Rashmika Mandanna) ಟಾಲಿವುಡ್ ಮತ್ತು ಬಾಲಿವುಡ್ ಎರಡೂ ಕಡೆಗಳಲ್ಲೂ ಅದೃಷ್ಟ ಖುಲಾಯಿಸಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಬಾಲಿವುಡ್ ನಲ್ಲಿ ಅನಿಮಲ್ ಸಿನಿಮಾದ ದೊಡ್ಡ ಸಕ್ಸಸ್ ನಂತರ ರಶ್ಮಿಕಾಗೆ ಸಾಲು ಸಾಲು ಹೊಸ ಸಿನಿಮಾಗಳಲ್ಲಿ ನಟಿಸುವ ಅವಕಾಶ ಅರಸಿ ಬರುತ್ತಿದೆ. ಅನಿಮಲ್ ನಂತರ ಬಾಲಿವುಡ್ ನಲ್ಲಿ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಜೊತೆಗೆ ನಾಯಕಿಯಾಗಿ ಸಿಖಂದರ್ ಸಿನಿಮಾದಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ

ಈಗ ಅದರ ಬೆನ್ನಲ್ಲೇ ರಶ್ಮಿಕಾಗೆ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ಅವಕಾಶ ಬಂದಿದೆ. ಬಾಲಿವುಡ್ ಗೆ ಯಾವುದೇ ಸಿನಿಮಾ ಹಿನ್ನಲೆ ಇಲ್ಲದೇ ಎಂಟ್ರಿಕೊಟ್ಟು ಇಂದು ಸ್ಟಾರ್ ನಟನಾಗಿ ಹೆಸರನ್ನ ಮಾಡಿಕೊಂಡಿರುವ ಆಯುಷ್ಮಾನ್ ಖುರಾನಾ (Ayushman Khurrana) ಅವರ ಮುಂದಿನ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ ಎಂದು ಹೇಳಲಾಗಿದ್ದು, ಈ ಸಿನಿಮಾವನ್ನು ಆದಿತ್ಯ ಸತ್ಪೋದರ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾಕ್ಕೆ ಮುಂಜ್ಯಾ ಎಂದು ಟೈಟಲ್ ನೀಡಲಾಗಿದೆ.

ಇದೊಂದು ಹಾರರ್ ಕಾಮಿಡಿ ಸಿನಿಮಾ ಆಗಿ ತೆರೆ ಮೇಲೆ ಬರಲಿದ್ದು, ನಾಯಕಿ ರಶ್ಮಿಕಾ ಪಾತ್ರಕ್ಕೆ ಸಾಕಷ್ಟು ಪ್ರಾಧಾನ್ಯತೆಯನ್ನು ನೀಡಲಾಗಿದೆ ಎಂದು ಹೇಳಲಾಗಿದೆ. ಸಿನಿಮಾದ ಚಿತ್ರೀಕರಣ ಬರುವ ನವೆಂಬರ್ ನಿಂದ ಪ್ರಾರಂಭವಾಗಲಿದ್ದು ಆಯುಷ್ಮಾನ್ ಖುರಾನಾ ಜೊತೆಗೆ ರಶ್ಮಿಕಾ ನಾಯಕಿಯಾಗಿರೋದ್ರಿಂದ ಅಭಿಮಾನಿಗಳಲ್ಲಿ ಈ ಸಿನಿಮಾ ಈಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕುತ್ತಿದೆ.

ಪ್ರಸ್ತುತ ರಶ್ಮಿಕಾ ಮಂದಣ್ಣ ಕೈಯಲ್ಲಿ ಪುಷ್ಪ 2, ಸಿಕಂದರ್, ರೈನ್ಬೋ, ದಿ ಗರ್ಲ್ ಫ್ರೆಂಡ್ ಸಿನಿಮಾಗಳು ಇದ್ದು, ಇದಲ್ಲದೇ ಹೊಸ ಸಿನಿಮಾ ಪ್ರಾಜೆಕ್ಟ್ ಗಳ ಕಡೆಗೆ ಕೂಡಾ ನಟಿ ಗಮನವನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಪ್ರಶಾಂತ್ ನೀಲ್ ಅವರ ಹೊಸ ಸಿನಿಮಾ ಒಂದರಲ್ಲೂ ರಶ್ಮಿಕಾ ನಾಯಕಿಯಾಗುವ ಸಾಧ್ಯತೆಗಳು ದಟ್ಟವಾಗಿದೆ ಎನ್ನುವ ಸುದ್ದಿಗಳು ಟಾಲಿವುಡ್ ನಲ್ಲಿ ಹರಿದಾಡುತ್ತಿದೆ.

Leave a Comment