Rashmika Mandanna: ಕಿರಿಕ್ ಪಾರ್ಟಿಯ ಸಾನ್ವಿ ಪಾತ್ರಕ್ಕೆ ರಿಷಬ್ ಅವರ ಮೊದಲ ಆಯ್ಕೆ ರಶ್ಮಿಕಾ ಅಲ್ಲ, ಬೇರೊಬ್ಬ ನಟಿ

Written by Soma Shekar

Published on:

---Join Our Channel---

Rashmika Mandanna: ನಟಿ ರಶ್ಮಿಕಾ ಮಂದಣ್ಣ (Rashmika Mandanna) ವೃತ್ತಿ ಜೀವನದಲ್ಲಿ ಕಿರಿಕ್ ಪಾರ್ಟಿ (Kirik Party) ಸಿನಿಮಾ ಒಂದು ಮೈಲಿಗಲ್ಲು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಈ ಸಿನಿಮಾ ನಂತರ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾಗೆ ಅನಂತರ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತೆ ಸಾಲು ಸಾಲು ಸಿನಿಮಾಗಳ ಅವಕಾಶ ದೊರೆಯಿತು. ಸ್ಯಾಂಡಲ್ವುಡ್ ನಿಂದ ಟಾಲಿವುಡ್ ಗೆ ಹಾರಿದ ನಟಿ ಅಲ್ಪ ಕಾಲದಲ್ಲೇ ಸ್ಟಾರ್ ನಟಿಯಾದರು ಮತ್ತು ಬಾಲಿವುಡ್ ಗೂ ಎಂಟ್ರಿಯನ್ನು ನೀಡಿದರು. ಹೀಗೆ ಕಿರಿಕ್ ಪಾರ್ಟಿಯಿಂದ ಆರಂಭವಾದ ನಟಿಯ ಜರ್ನಿ ಇಂದು ಪ್ಯಾನ್ ಇಂಡಿಯಾ ಸಿನಿಮಾಗಳ ವರೆಗೆ ಬಂದಿದೆ.

ಆದರೆ ಈಗ ಒಂದು ಹೊಸ ಸುದ್ದಿ ವೈರಲ್ ಆಗ್ತಿದ್ದು, ಕಿರಿಕ್ ಪಾರ್ಟಿ ಸಿನಿಮಾಕ್ಕೆ ನಾಯಕಿಯಾಗಿ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರ ಮೊದಲ ಆಯ್ಕೆ ರಶ್ಮಿಕಾ ಮಂದಣ್ಣ ಆಗಿರಲಿಲ್ಲವಂತೆ. ಈ ವಿಷಯ ಕೇಳಿ ಅನೇಕರು ಈಗ ಅಚ್ಚರಿ ಪಡುವಂತಾಗಿದೆ. ಹಾಗಾದ್ರೆ ರಿಷಬ್ ಶೆಟ್ಟಿ ಅವರು ಯಾರನ್ನ ಈ ಸಿನಿಮಾ ನಾಯಕಿ ಮಾಡಬೇಕು ಅಂತ ಇದ್ರು ಅನ್ನೋದನ್ನ ತಿಳಿಯೋಣ ಬನ್ನಿ.

ಕಿರಿಕ್ ಸಿನಿಮಾ ಬಜೆಟ್ ಮೂರರಿಂದ ನಾಲ್ಕು ಕೋಟಿ ರೂಪಾಯಿಗಳಾಗಿತ್ತು. ರಕ್ಷಿತ್ ಶೆಟ್ಟಿ (Rakshit Shetty) ಮತ್ತು ಪುಷ್ಕರ ಮಲ್ಲಿಕಾರ್ಜುನಯ್ಯ ಮತ್ತು ಜಿ ಎಸ್ ಗುಪ್ತಾ ಅವರು ಈ ಸಿನಿಮಾಕ್ಕೆ ಬಂಡವಾಳ ಹೂಡಿದ ನಿರ್ಮಾಪಕರಾಗಿದ್ದರು. ಈ ಸಿನಿಮಾದ ನಾಯಕಿ ಪಾತ್ರಕ್ಕೆ ರಿಷಬ್ ಶೆಟ್ಟಿ ಅವರು ಬಹಳ ಆಲೋಚನೆ ಮಾಡಿದ್ದರಂತೆ. ಯಾಕಂದ್ರೆ ಹೀರೋಯಿನ್ ಪಾತ್ರ ಅಷ್ಟು ಮುಖ್ಯ ಅನ್ನೋದು ಚಿತ್ರತಂಡದ ಅಭಿಪ್ರಾಯ ಆಗಿತ್ತಂತೆ.‌

ಆಗ ನಿರ್ದೇಶಕ ರಿಷಬ್ ಶೆಟ್ಟಿ ಅವರು ಈ ಸಿನಿಮಾಕ್ಕೆ ನಾಯಕಿಯಾಗಿ ಸಾಯಿ ಪಲ್ಲವಿಯನ್ನ (Sai Pallavi) ಕರೆ ತರೋಣ ಅನ್ನೋ ಮಾತನ್ನ ಹೇಳಿದ್ರಂತೆ. ಈ ವಿಚಾರವನ್ನ ರಕ್ಷಿತ್ ಶೆಟ್ಟಿ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆದರೆ ನನಗೆ ಅದನ್ನ ಕೇಳಿ ನಗು ಬಂತು, ನನ್ನ ಮೇಲೆ ಒಂದು ಕೋಟಿ ಅಥವಾ ಒಂದೂವರೆ ಕೋಟಿ ಬಂಡವಾಳ ಹಾಕೋಕೂ ಯಾರೂ ರೆಡಿ ಇಲ್ಲ, ನಮ್ಮ ಬಜೆಟ್ ಇರೋದೆ ಮೂರು ಕೋಟಿ, ಅದರ ಮೇಲೆ ನೀನು ಸಾಯಿ ಪಲ್ಲವಿಯನ್ನ ಕರೆ ತರಬೇಕಾ ಅಂತ ಹೇಳಿದ್ರಂತೆ ರಕ್ಷಿತ್ ಶೆಟ್ಟಿ.

ಒಟ್ನಲ್ಲಿ ರಿಷಬ್ ಶೆಟ್ಟಿ ಅವರು ಸಾಯಿ ಪಲ್ಲವಿಯನ್ನ ರಕ್ಷಿತ್ ಜೊತೆಗೆ ಜೋಡಿಯಾಗಿ ಮಾಡಬೇಕಂತ ಇದ್ರು. ಆದರೆ ಬಜೆಟ್ ಸಮಸ್ಯೆಯಿಂದ ಕೊನೆಗೆ ಹೊಸ ನಟಿಯನ್ನು ಪರಿಚಯ ಮಾಡಿ, ದೊಡ್ಡ ಸಕ್ಸಸ್ ಅನ್ನ ಪಡೆದುಕೊಂಡಿದ್ರು ಮತ್ತು ಈ ಸಿನಿಮಾ ರಶ್ಮಿಕಾ ಅವರ ಸಿನಿಮಾ ಜೀವನದಲ್ಲಿ ದೊಡ್ಡ ಸಕ್ಸಸ್ ಗೆ ಕಾರಣವಾಗಿತ್ತು.

Leave a Comment