Optical Illusion: ಆಪ್ಟಿಕಲ್ ಇಲ್ಯೂಷನ್ (Optical Illusion) ಅಥವಾ ದೃಷ್ಟಿ ಭ್ರಮೆಯನ್ನ ಉಂಟು ಮಾಡುವ ಚಿತ್ರಗಳಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಕ್ರೇಜ್ ಇದೆ. ಆಗಾಗ ಇಂಥ ಫೋಟೋಗಳು ಬಹಳ ವೈರಲ್ ಆಗುತ್ತವೆ. ಇವು ನೆಟ್ಟಿಗರ ಮುಂದೆ ಹೊಸ ಸವಾಲುಗಳನ್ನು ಹಾಕುತ್ತವೆ. ಅಂತಹ ಸವಾಲುಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ನೆಟ್ಟಿಗರು ಸಾಕಷ್ಟು ಪ್ರಯತ್ನಗಳನ್ನ ಮಾಡ್ತಾರೆ. ಈಗ ಅಂತದೇ ಒಂದು ಫೋಟೋ ಇಲ್ಲಿದೆ.
ಈ ಫೋಟೋದಲ್ಲಿ ಅಡಗಿಕೊಂಡಿರುವ ಹಾವನ್ನ (Find the snake) ಪತ್ತೆ ಹಚ್ಚ ಬೇಕಾಗಿದೆ. ಅದಕ್ಕಾಗಿ ನಿಮಗೆ ಸಿಗುವ ಸಮಯ ಕೇವಲ 30 ಸೆಕೆಂಡುಗಳು ಮಾತ್ರ. ಈ ನಿಗಧಿತ ಸಮಯದಲ್ಲಿ ಹಾವು ಎಲ್ಲಿ ಅಡಗಿದೆ ಎನ್ನುವುದನ್ನು ನೀವು ಪತ್ತೆ ಹಚ್ಚಬೇಕು. ಕಸ, ಕಡ್ಡಿಗಳ ಬಣ್ಣ ಮತ್ತು ಹಾವಿನ ಬಣ್ಣ ಒಂದೇ ಆಗಿರುವುದರಿಂದ ಈ ಚಿತ್ರದಲ್ಲಿ ಹಾವು ಎಲ್ಲಿದೆ ಅಂತಬಪತ್ತೆ ಹಚ್ಚುವುದು ಅಷ್ಟೊಂದು ಸುಲಭವಲ್ಲ ಎಂದು ಹೇಳಬಹುದು.
ನೀವು ಸವಾಲನ್ನು ಸ್ವೀಕರಿಸಲು ಸಿದ್ಧವಾಗಿದ್ದರೆ 30 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿ ಕುಳಿತಿರುವ ಹಾವನ್ನು ಪತ್ತೆ ಹಚ್ಚಿ. ನೀವು ಮೇಲಿನ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಬೇಕು ಪ್ರತಿಯೊಂದು ಸಣ್ಣಪುಟ್ಟ ಅಂಶಗಳನ್ನು ದಿಟ್ಟಿಸಿ ನೋಡಬೇಕು ಆಗ ಖಂಡಿತ ಹಾವು ಇರುವ ಜಾಗವನ್ನು ಬಹಳ ಸುಲಭವಾಗಿ ನೋಡೋದಕ್ಕೆ ಸಾಧ್ಯವಾಗಬಹುದು.
30 ಸೆಕೆಂಡುಗಳಲ್ಲಿ ಹಾವು ಎಲ್ಲಿದೆ ಎನ್ನುವುದನ್ನು ಪತ್ತೆ ಹಚ್ಚಿದರೆ ನಿಮ್ಮ ದೃಷ್ಟಿ ಮತ್ತು ಬುದ್ಧಿ ಮತ್ತೆ ಬಹಳ ಚುರುಕಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಒಂದು ವೇಳೆ ನಿಮಗೆ ಎಷ್ಟು ಹುಡುಕಿದರೂ ಅದನ್ನು ಕಂಡು ಹಿಡಿಯುವುದಕ್ಕೆ ಸಾಧ್ಯವಾಗಲಿಲ್ಲ ಎಂದರೆ ಕೆಳಗೆ ಕೊಟ್ಟಿರುವ ಫೋಟೋದಲ್ಲಿ ಉತ್ತರವನ್ನು ನೋಡಬಹುದಾಗಿದೆ. ಅದರಲ್ಲಿ ಹಾವನ್ನು ಗುರುತಿಸಲಾಗಿದೆ.